ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಯ ಆರೋಗ್ಯದ ಮೇಲಿರಲಿ ಗಮನ!

Last Updated 7 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿರುವಾಗ ಯಾರದ್ದೋ ಮನೆಯ ಬಾಲ್ಕನಿಯ ಕಿಂಡಿಯಿಂದ ಇಣುಕಿ ಬೊಗಳುವ ನಾಯಿಮರಿಯನ್ನು ಕಂಡರೆ ಕಿರಿಕಿರಿಯಾಗುವುದಕ್ಕಿಂತ ಖುಷಿ ಎನ್ನಿಸುತ್ತದೆ‌. ನಮ್ಮ ಮನೆಯಲ್ಲೂ ಅಂತಹದ್ದೇ ಮುದ್ದಾದ ನಾಯಿಮರಿ ಇರಬೇಕು ಎಂದು ಮನಸ್ಸಿಗೆ ಬರುತ್ತದೆ. ಆದರೆ ನಾಯಿ ಸಾಕುವುದು ಸುಲಭದ ಕೆಲಸವಲ್ಲ. ಮನೆಯಲ್ಲಿ ನಾಯಿ ಸಾಕುವ ಮುನ್ನ ಅದಕ್ಕೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ತಿಳಿದುಕೊಂಡಿರಬೇಕು. ಅದರಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ನಾಯಿಯ ಮಾಲೀಕರು ತಿಳಿದುಕೊಂಡಿರುವುದು ಅತೀ ಅವಶ್ಯ. ನಾಯಿಯ ಕೆಲವು ಅನಾರೋಗ್ಯದ ಚಿಹ್ನೆಗಳನ್ನು ನೀವು ಗಮನಿಸಬಹುದು.

ನಿಮ್ಮ ನಾಯಿ ಅನಾರೋಗ್ಯದಿಂದ ಬಳಲುತ್ತಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಕೆಲವು ಪ್ರಮುಖ ಚಿಹ್ನೆಗಳು ಇಲ್ಲಿವೆ:

*ನಾಯಿಗೆ ಹಸಿವಾಗದೇ ಇರುವುದು, ಊಟದಲ್ಲಿನ ವ್ಯತ್ಯಾಸ, ತೂಕ ಹೆಚ್ಚುವುದು ಅಥವಾ ತೂಕ ಕಡಿಮೆಯಾಗುವುದು.

*ಉಸಿರಿನ ದುರ್ವಾಸನೆ ಬರುವುದು.

*ಮುಖವನ್ನು ಕೆಳಗೆ ಹಾಕಿಕೊಂಡಿರುವುದು.

*ಚಟುವಟಿಕೆಯಲ್ಲಿನ ಬದಲಾವಣೆ (ಪ್ರತಿದಿನ ಮಲಗುವುದಕ್ಕಿಂತ ಹೆಚ್ಚು ಸಮಯ ಮಲಗುವುದು ಹಾಗೂ ಇತರ ವರ್ತನೆಗಳಲ್ಲಿ ಬದಲಾವಣೆ)

*ಕಫ, ಅತಿಯಾಗಿ ಜೊಲ್ಲು ಸುರಿಸುವುದು, ಸೀನುವುದು

*ಮೆಟ್ಟಿಲು ಏರಲು ಕಷ್ಟಪಡುವುದು

*ಚರ್ಮ ಒಣಗುವುದು, ಚರ್ಮದಲ್ಲಿ ಗುಳ್ಳೆ ಏಳುವುದು, ತಲೆ ಅಲ್ಲಾಡಿಸುತ್ತಲೇ ಇರುವುದು.

*ಒಣಗಿದ, ಕೆಂಪಾದ ಅಥವಾ ನೀರು ತುಂಬಿದ ಕಣ್ಣು

*ಸದಾ ಮಂಕಾಗಿರುವುದು

*ಹಸಿಎಲೆ ಅಥವಾ ಹುಲ್ಲನ್ನು ತಿನ್ನುವುದು

ನಿಮ್ಮ ಮುದ್ದಿನ ನಾಯಿಮರಿಯಲ್ಲಿ ಮೇಲಿನ ಯಾವುದೇ ಲಕ್ಷಣಗಳಿದ್ದರೆ ಮನೆಯಲ್ಲೇ ನಿಮಗೆ ತಿಳಿದಿರುವ ಹಾಗೇ ಆರೈಕೆ ಮಾಡುವುದು ಒಳ್ಳೆಯದಲ್ಲ. ತಕ್ಷಣವೇ ವೈದ್ಯರ ಬಳಿ ತೋರಿಸಿ ಅವರ ಸಲಹೆ ಮೇರೆಗೆ ಔಷಧಿ ನೀಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT