ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ಗರ್ಭಿಣಿ ಕಾಳಿಂಗ ಸರ್ಪ ರಕ್ಷಣೆ

Last Updated 2 ಜೂನ್ 2022, 15:51 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಸೋಂದಾದ ರೈತರೊಬ್ಬರ ಅಡಿಕೆ ತೋಟದ ಬಳಿ ಎರಡು ದಿನಗಳಿಂದ ಬೀಡುಬಿಟ್ಟಿದ್ದ ಗರ್ಭಿಣಿ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಪ್ರಶಾಂತ್ ಹುಲೇಕಲ್ ಗುರುವಾರ ರಕ್ಷಿಸಿ ಕಾಡಿಗೆ ಬಿಟ್ಟರು.

ಶಂಕರ ಹೆಗಡೆ ಎಂಬುವವರ ತೋಟದಲ್ಲಿ ಸುಮಾರು 13 ಅಡಿ ಉದ್ದದ ಹಾವು ಕಾಣಿಸಿಕೊಂಡಿತ್ತು. ಅತಂಕಗೊಂಡಿದ್ದ ಅವರು ಉರಗ ರಕ್ಷಕರಿಗೆ ವಿಷಯ ತಿಳಿಸಿದ್ದರು.ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಹಾವನ್ನು ಸೆರೆಹಿಡಿಯಲಾಗಿತ್ತು. ಉರಗ ರಕ್ಷಕ ಸೈಯ್ಯದ್ ಮಾಂಜ್ ನೆರವಾಗಿದ್ದರು.

‘ಗರ್ಭಿಣಿ ಹಾವು ಮೊಟ್ಟೆ ಇಡುವ ಸಲುವಾಗಿ ಗೂಡು ಕಟ್ಟಿಕೊಳ್ಳಲು ಜಾಗ ಹುಡುಕಾಟ ನಡೆಸುತ್ತಿದ್ದ ಕಾರಣ ಎರಡು ದಿನಗಳಿಂದ ಒಂದೇ ಸ್ಥಳದಲ್ಲಿತ್ತು. ಈಚೆಗೆ ಮಳೆ ಸುರಿದ ಕಾರಣ ಎಲೆಗಳು ಹಸಿಯಾಗಿರುವುದು ಕಾಳಿಂಗ ಸರ್ಪ ಗೂಡು ಕಟ್ಟಿಕೊಳ್ಳಲು ಅಡ್ಡಿಯಾಗಿದೆ. ಹಾವು ಮೊಟ್ಟೆ ಇಡಲು ಅನುಕೂಲವಾಗುವಂತೆ ಸೂಕ್ತ ಜಾಗದಲ್ಲಿ ಬಿಡಲಾಗಿದೆ’ ಎಂದು ಪ್ರಶಾಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT