ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಹುಲಿ ದಿನ | ನಾಗರಹೊಳೆ: ಹೆಚ್ಚಿದ ಹುಲಿ ಸಂತತಿ

ವ್ಯಾಘ್ರ ಸಂರಕ್ಷಣೆಗೆ ಸೂಕ್ತ ಕ್ರಮ
Last Updated 29 ಜುಲೈ 2020, 5:50 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, 2019–20ರ ಅವಧಿಯಲ್ಲೇ ಸುಮಾರು 15 ರಿಂದ 20 ಹುಲಿಗಳು ಹೆಚ್ಚಳವಾಗಿವೆ.

ಇಂದು (ಜುಲೈ 29) ಅಂತರರಾಷ್ಟ್ರೀಯ ಹುಲಿ ದಿನ. ಇದರ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಲಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

‘2018–19ರ ದತ್ತಾಂಶಗಳ ಪ್ರಕಾರ ರಾಜ್ಯದಲ್ಲಿ 524 ಹುಲಿಗಳಿವೆ. ನಾಗರಹೊಳೆಯಲ್ಲೇ 127 ಹುಲಿಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಅನುಸರಿಸುತ್ತಿವೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿ ನೀಡಿದರು.

‘ನಾಗರಹೊಳೆಯಲ್ಲಿ 200 ಚದರ ಕಿ.ಮಿ ಬಫರ್ ವಲಯ ಸೇರಿ ಒಟ್ಟು 843 ಚದರ ಕಿ.ಮಿ ವ್ಯಾಪ್ತಿಯನ್ನು ಹುಲಿ ಸಂರಕ್ಷಣೆಗೆ ಮೀಸಲಿಡಲಾಗಿದೆ. 2020 ಏಪ್ರಿಲ್‌ನಲ್ಲಿ ಕ್ಯಾಮೆರಾ ಟ್ರ್ಯಾಪ್ ಮೂಲಕ ಗಣತಿ ಕಾರ್ಯ ಮುಗಿದಿದ್ದು, ಎರಡು ತಿಂಗಳೊಳಗೆ ಅಂತಿಮ ವರದಿ ಕೈ ಸೇರಲಿದೆ’ ಎಂದು ಅವರು ತಿಳಿಸಿದರು.

ನಾಗರಹೊಳೆಯಲ್ಲಿ ಜಿಂಕೆ ಮತ್ತು ಕಡವೆಗಳ ಸಂಖ್ಯೆ ಹೆಚ್ಚಿರುವುದರಿಂದ ಹುಲಿಗಳಿಗೆ ಆಹಾರ ಸಮಸ್ಯೆಯಾಗದು. ಇದೂ ಸಂತತಿ ವೃದ್ಧಿಗೆ ಕಾರಣವಾಗಿದೆ.

ಕಟ್ಟೆಚ್ಚರ: ‘843 ಚದರ ಕಿ.ಮಿ ವ್ಯಾಪ್ತಿಯಲ್ಲಿ 54 ಹುಲಿ ಬೇಟೆ ನಿಗ್ರಹ ‌ಶಿಬಿರಗಳಿದ್ದು, ಪ್ರತಿ ಶಿಬಿರಕ್ಕೆ ಶಸ್ತ್ರಸಜ್ಜಿತ ನಾಲ್ವರು ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ’ ಎಂದು ಮಹೇಶ್ ಕುಮಾರ್
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT