ಈ ವರ್ಷದ ಹೊಸ ಪ್ರಭೇದಗಳು

7

ಈ ವರ್ಷದ ಹೊಸ ಪ್ರಭೇದಗಳು

Published:
Updated:

ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗಳು ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 539 ಹೊಸ ವೃಕ್ಷ ಮತ್ತು ಜೀವಿಗಳನ್ನು ಪತ್ತೆಹಚ್ಚಿವೆ. ಈ ಸಂಸ್ಥೆಗಳು ಇಂತಹ ಸಮೀಕ್ಷೆಯನ್ನು ಪ್ರತಿವರ್ಷ ನಡೆಸುತ್ತವೆ. ಪತ್ತೆಹಚ್ಚಿರುವ ಪ್ರಭೇದಗಳು ಹೊಸತೊ? ಹಳತೊ? ಎಂಬುದನ್ನೂ ಈ ಸಂಸ್ಥೆಗಳೇ ನಿರ್ಧರಿಸುತ್ತವೆ. ಅವುಗಳಲ್ಲಿ ಕೆಲವು ಆಸಕ್ತಿಕರ ಪ್ರಭೇದಗಳು ಇಲ್ಲಿವೆ.

ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗಳು ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 539 ಹೊಸ ವೃಕ್ಷ ಮತ್ತು ಜೀವಿಗಳನ್ನು ಪತ್ತೆಹಚ್ಚಿವೆ. ಈ ಸಂಸ್ಥೆಗಳು ಇಂತಹ ಸಮೀಕ್ಷೆಯನ್ನು ಪ್ರತಿವರ್ಷ ನಡೆಸುತ್ತವೆ. ಪತ್ತೆಹಚ್ಚಿರುವ ಪ್ರಭೇದಗಳು ಹೊಸತೊ? ಹಳತೊ? ಎಂಬುದನ್ನೂ ಈ ಸಂಸ್ಥೆಗಳೇ ನಿರ್ಧರಿಸುತ್ತವೆ. ಅವುಗಳಲ್ಲಿ ಕೆಲವು ಆಸಕ್ತಿಕರ ಪ್ರಭೇದಗಳು ಇಲ್ಲಿವೆ.


ಫೆಜರ್‌ವರ್ಯ ಕಳಿಂಗ

ಹೊಸ ಮಂಡೂಕಗಳು!

ವಿಶ್ವದಾದ್ಯಂತ ಎಲ್ಲೂ ಕಾಣಸಿಗದ ಎರಡು ಅಪರೂಪದ ಕಪ್ಪೆ ಪ್ರಭೇದಗಳನ್ನು ಸಹ್ಯಾದ್ರಿ ಪ್ರಾಂತ್ಯದಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಕಪ್ಪೆಗಳ ಮೂಲಕ ಮತ್ತೊಂದು ಸಂತೋಷಕರ ವಿಷಯವೂ ಬೆಳಕಿಗೆ ಬಂದಿದೆ ಅದೇನೆಂದರೆ, ಇವು ಉತ್ತಮ ವಾತಾವರಣಕ್ಕೆ ಸೂಚಕಗಳು, ಶುದ್ಧವಾದ ಗಾಳಿ, ಉತ್ತಮ ಹವಾಗುಣ ಇರುವಂತಹ ಪ್ರದೇಶಗಳಲ್ಲಿ ಮಾತ್ರ ಇವು ವಾಸಿಸುತ್ತವೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಇವಕ್ಕೆ ಫೆಜರವರ್ಯ ಕಳಿಂಗ, ಫೆಜೆರವರ್ಯ ಕೃಷ್ಣನ್ ಎಂದು ನಾಮಕರಣ ಮಾಡಲಾಗಿದೆ. ಒಂದು ಕಳಿಂಗ ರಾಜ್ಯದ ಸೂಚಕ ಮತ್ತು ಮತ್ತೊಂದು ಜೀವವಿಜ್ಞಾನಿ ಸುಬ್ರಮಣಿಯ ಕೃಷ್ಣನ್ ಅವರ ಹೆಸರು.


ಫೆಜರ್‌ವರ್ಯ ಕಳಿಂಗ

ಇದು ಕೂಡ ಕಪ್ಪೆಯೇ!

ವಿಚಿತ್ರವಾಗಿ ಕಾಣುತ್ತಿರುವ ಈ ಪ್ರಾಣಿ ಆಕಾರದಲ್ಲಿ ಭಿನ್ನ ಎನಿಸಿದರೂ ಕಪ್ಪೆಯೇ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಮದುರೈನ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ಇದು ಸಂಶೋಧಕರ ಕಣ್ಣಿಗೆ ಬಿದ್ದಿದೆ. ಇದರ ಮೂಗು ಸೂಜಿಯಂತೆ ಮುಂದಕ್ಕೆ ಚಾಚಿಕೊಂಡಿರುವುದರಿಂದ ಇದಕ್ಕೆ ‘ನಾಸಿಕ ಬಟ್ರಾಚೂಸ್‌ ಭೂಪತಿ’ ಎಂದು ನಾಮಕರಣ ಮಾಡಲಾಗಿದೆ. ಈ ಭೂಪತಿ ಯಾರೆಂದರೆ, ಕೆಲಸ ಮಾಡುವ ಸಂದರ್ಭಧಲ್ಲೇ ಪ್ರಾಣ ತ್ಯಜಿಸಿದ ಜೀವ ವಿಜ್ಞಾನಿ ಸುಬ್ರಮಣಿಯನ್‌ ಭೂಪತಿ. ಅವರ ಸ್ಮರಣಾರ್ಥ ಈ ಹೆಸರು ಇಡಲಾಗಿದೆ. 


ಡೆಮಿಟ್ರಿಸ್ ಕಲಾಂ

ಕಲಾಂಗೆ ಸಲಾಂ

ಪಶ್ಚಿಮ ಬಂಗಾಳದ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕೆಂಪು ಬಣ್ಣದ ಹಣ್ಣುಗಳು ಮತ್ತು ಗಾಢ ಹಸಿರು ಬಣ್ಣದ ಎಲೆಗಳಿಂದ ಕಂಗೊಳಿಸುತ್ತಿದ್ದ ಹೊಸ ವೃಕ್ಷ ಪ್ರಭೇದವೊಂದು ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಈ ವೃಕ್ಷದ ವಿಶೇಷವೆಂದರೆ ಹೆಣ್ಣು ಮತ್ತು ಗಂಡು ವೃಕ್ಷಗಳು ಪ್ರತ್ಯೇಕವಾಗಿ ಬೆಳೆಯುತ್ತವೆ. ಇದು ಹಲವು ಔಷಧ ಗುಣಗಳನ್ನು ಹೊಂದಿದೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. 

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಇದಕ್ಕೆ ‘ಡ್ರೈಪೆಟಿಸ್ ಕಲಾಂ’ ಎಂದು ಹೆಸರಿಡಲಾಗಿದೆ. ಪೊದೆ ರೀತಿಯ ಈ ಗಿಡ ಕೇವಲ 1 ಮೀ ಎತ್ತರವಷ್ಟೇ ಬೆಳೆಯುತ್ತದೆ.


ಹೊಸ ಶುಂಠಿ ಪ್ರಭೇದ

ಹೊಸ ಶುಂಠಿ!

ಶುಂಠಿ ಸಸ್ಯ ಪ್ರಭೇದಕ್ಕೆ ಸೇರಿದ ಎರಡು ಹೊಸ ಪ್ರಭೇದಗಳು ಮಣಿಪುರ ಮತ್ತು ನಾಗಾಲ್ಯಾಂಡ್‌ನ ಪರ್ವತ ಪ್ರದೇಶಗಳಲ್ಲಿ ಸಂಶೋಧಕರ ಕಣ್ಣಿಗೆ ಬಿದ್ದಿವೆ. ಈ ಸಸ್ಯಗಳಿಗೆ ಸುಂದರ ಮತ್ತು ನೀಲಿ ಬಣ್ಣದ ಹೂಗಳು ಬಿಡುತ್ತವೆ. ಸಮುದ್ರ ಮಟ್ಟದಿಂದ ಅತೀ ಹೆಚ್ಚು ಪ್ರದೇಶದಲ್ಲೂ ಬೆಳೆಯುವ ಗುಣ ಹೊಂದಿವೆ. ಮ್ಯಾನ್ಮಾರ್‌ ಗಡಿ ಭಾಗದಲ್ಲಿರುವ ಪತ್ತೆಯಾಗಿರುವ ಈ ಪ್ರಭೇಧಗಳಿಗೆ ‘ಹೆಡಿಚಿಯಂ ಚಿಂಗ್‌ಮಿಯನಂ’ ಮತ್ತು ‘ಕ್ಯಾಲೊಕೆಂಫೆರಿಯಾ’ ಎಂದು ಹೆಸರಿಡಲಾಗಿದೆ. ಪ್ರಸ್ತುತ ಪತ್ತೆಯಯಾಗಿರುವ ಗಿಡಗಳು ಸಮುದ್ರ ಮಟ್ಟದಿಂದ 2,938 ಅಡಿ ಎತ್ತರದಲ್ಲಿವೆ!

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !