ಶಿರಸಿ: ‘ಕಾಡು ಬಳ್ಳಿಯ ಬೆಳೆಯನ್ನೇ ಆಧಾರವಾಗಿಟ್ಟುಕೊಂಡು ಜಗತ್ತಿನ ಗಮನ ಸೆಳೆದ, ಸವಾಲುಗಳ ನಡುವೆಯೂ ಅಪ್ರತಿಮ ಸಾಧನೆ ತೋರಿದ ರಾಣಿ ಚೆನ್ನಭೈರಾದೇವಿ ಇಂದಿನ ಪೀಳಿಗೆಗೆ ದೊಡ್ಡ ಪ್ರೇರಕ ಶಕ್ತಿ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಅಭಿಪ್ರಾಯಪಟ್ಟರು.

ನಗರದ ನಯನ ಸಭಾಂಗಣದಲ್ಲಿ ಮುಂಬೈನ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶಿರಸಿ ನಯನ ಫೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಣಿ ಚೆನ್ನಭೈರಾದೇವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನೆಲಮೂಲದ ಜ್ಞಾನವನ್ನು ಕಡೆಗಣಿಸಿ ಅರಣ್ಯ ಇಲಾಖೆ ರೂಪಿಸುವ ತಪ್ಪು ನೀತಿಗಳಿಂದಾಗಿ ಇಂದು ವನ್ಯಜೀವಿ ಹಾಗೂ ಮಾನವ ಸಂಘರ್ಷ ತೀವ್ರಗೊಳ್ಳುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಅರಣ್ಯ ಜಿಲ್ಲೆಯಲ್ಲಿ ವನ್ಯಜೀವಿಗಳು ಉಳಿಯಬೇಕಾದರೆ ಕಾಡಿನಲ್ಲಿ ಅವುಗಳಿಗೆ ಆಹಾರವಾಗುವ ಹಣ್ಣಿನ ಗಿಡಗಳನ್ನು ಬೆಳೆಸುವ ಕಾರ್ಯವಾಗಬೇಕು’ ಎಂದು ಕರೆ ನೀಡಿದರು.

ಧಾಮೂಲ್ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ‘ಮುಂಬೈ ಸಂಸ್ಥೆಯು ಮಯೂರವರ್ಮನ ಹೆಸರಿನಲ್ಲಿ ಚೆನ್ನಭೈರಾದೇವಿಯನ್ನು ಸ್ಮರಿಸುತ್ತಿರುವುದು ಶ್ಲಾಘನೀಯ. ಪೋಷಕರು ಹಾಗೂ ಕೃಷಿ ಸಂಸ್ಕೃತಿಯಿಂದ ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವನ್ಯಪ್ರಾಣಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಪದ್ಮಾ ಸಂಸ್ಥೆಯ ಕಾರ್ಯ ದೊಡ್ಡದು’ ಎಂದರು.

ಪದ್ಮಾ ಫೌಂಡೇಷನ್ ಪೂಜಾ ರಾಜ್ ಹಾಗೂ ರಾಜೇಂದ್ರ ಶಿರಸಿಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮಿತ್ರಾ ಹೆಗಡೆ ರಚಿಸಿದ ರಾಣಿ ಚೆನ್ನಭೈರಾದೇವಿ ಚರಿತ್ರೆಯ ಕೀರ್ತನೆಯನ್ನು ಪ್ರಿಯಾಂಕಾ ಹೆಗಡೆ ಪ್ರಸ್ತುತಪಡಿಸಿದರು. ಅನಂತಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರತಿಷ್ಠಾನದ ಅಧ್ಯಕ್ಷ ಟಿ.ಆರ್. ಮಧುಸೂಧನ, ಡಾ. ಶಿವರಾಮ ಕೆ.ವಿ., ಸಂಚಾಲಕ ಜಿ.ವಿ. ಕೊಪ್ಪಲತೋಟ ಇದ್ದರು. ಕೇಶವ ಕಿಬ್ಳೆ ಸ್ವಾಗತಿಸಿದರು. ಬಿಂದು ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ರಾಘವೇಂದ್ರ ಹೊಸೂರು ಪರಿಚಯಿಸಿದರು. ಭವ್ಯಾ ಹಳೆಯೂರು ನಿರ್ವಹಿಸಿದರು. ವಿಶ್ವನಾಥ ದೊಡ್ಮನೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-20-828776210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.