ಅಪರೂಪದ ಕಾಡುಪಾಪ ದರ್ಶನ!

7
ಕೊತ್ತನೂರು ಗ್ರಾಮದಲ್ಲಿ ಕಂಡು ಬಂದ ಕುಟುಂಬ

ಅಪರೂಪದ ಕಾಡುಪಾಪ ದರ್ಶನ!

Published:
Updated:
Deccan Herald

ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರು ಗ್ರಾಮದ ದೇವೇಂದ್ರ ಅವರ ಗೋಡಂಬಿ ತೋಪಿಗೆ ಭಾನುವಾರ ‘ಅಪರೂಪದ ಅತಿಥಿ’ಗಳಾಗಿ ಬಂದಿದ್ದ ಕಾಡುಪಾಪ (ಸ್ಲೆಂಡರ್ ಲೋರಿಸ್) ಕುಟುಂಬ ಗಮನ ಸೆಳೆಯಿತು. ಕಾಡುಪಾಪಗಳು ಈ ಭಾಗದಲ್ಲಿ ಜನರಿಗೆ ಕಾಣಿಸಿಕೊಳ್ಳುವುದು ತೀರಾ ಅಪರೂಪ. 

ದೇವೇಂದ್ರ ಅವರು ಬೆಳಿಗ್ಗೆ ತೋಟಕ್ಕೆ ಹೋಗಿದ್ದಾಗ ತಂದೆ, ತಾಯಿ ಹಾಗೂ ಮಗುವಿನ ಈ ಕುಟುಂಬ ಕಂಡಿದೆ. 12ರ ವೇಳೆಗೆ ಕಾಡಿನತ್ತ ಮುಖಮಾಡಿವೆ.

ಕಾಡುಪಾಪಗಳಿಗೆ ದೊಡ್ಡ ಕಣ್ಣು (ಪಾಪೆ) ಇರುವುದರಿಂದ ‘ಅಡವಿ ಪಾಪ’ ಎಂದು ಕರೆಯುವರು. ಕಾಡು ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ ಜೀವಿಗಳು ಇವು. ಹೆಚ್ಚು ನಾಚಿಕೆ ಸ್ವಭಾವದ ಇವುಗಳನ್ನು ಜನಪದರು ‘ಬಿದಿರಮೇಗಳ ಚದುರೆ’ ಎಂದು ಕರೆದಿದ್ದಾರೆ. ‘ಈ ಭಾಗದ ತೋಪುಗಳಲ್ಲಿ ಇವು ವಾಸಿಸುತ್ತಿವೆ. ನಿಶಾಚರಿ ಜೀವಿಗಳಾದ್ದರಿಂದ ಜನರ ಕಣ್ಣಿಗೆ ಬೀಳುವುದು ಅಪರೂಪ. ತಂಪು ಹವೆಯ ಎಲೆ ತೋಟಗಳು, ಮಾವಿನಮರ, ನೀಲಗಿರಿ, ಆಲ, ಅರಳಿ, ಸರ್ವೆ ಮತ್ತು ಹುಣಿಸೆಮರಗಳಲ್ಲಿ ಇರುತ್ತವೆ. ಹಣ್ಣು, ಕಾಯಿ, ಕೀಟ, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆ, ಮರಗಪ್ಪೆ ತಿನ್ನುತ್ತವೆ’ ಎನ್ನುವರು ಕೊತ್ತನೂರಿನ ಸ್ನೇಕ್‌ ನಾಗರಾಜ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !