ಸೊರಬ: ನೋಡುಗರ ಕಣ್ಮನ ತಣಿಸುವ, ಮನದಲ್ಲೇ ‘ಮೊಹಬ್ಬತ್’ ಮೂಡಿಸುವ ಗುಲ್ಮೊಹರ್ ಹೂಗಳು, ಮರಗಳು ಪಟ್ಟಣದ ಹೊರ ಭಾಗದಲ್ಲಿ ತಣ್ಣನೆಯ ನೆರಳು ಚೆಲ್ಲಿ ಪ್ರಯಾಣಿಕರಿಗೆ ಕೆಂಪು ಹಾಸಿನ ಸ್ವಾಗತ ಕೋರುತ್ತಿವೆ.

ಏಪ್ರಿಲ್, ಮೇ ಬಂತೆಂದರೆ ರಸ್ತೆಯ ಇಕ್ಕೆಲಗಳಲ್ಲಿ ಕೆಂಪನೆಯ ಹೂವಿನ (ಗುಲ್ಮೊಹರ್) ಕಾರುಬಾರು ಶುರುವಾಗುತ್ತದೆ. ಸುಡುವ ಬಿಸಿಲಿನ ನಡುವೆ ಆಗೊಮ್ಮೆ, ಈಗೊಮ್ಮೆ ಇಣುಕಿ ಹೋಗುವ ಮೋಡಗಳು, ಇವೆಲ್ಲದಕ್ಕೂ ಹೊಂದಿಕೊಂಡು ಫಳಫಳ ಹೊಳೆಯುವ ಗುಲ್ಮೊಹರ್ ಮರಗಳು, ವಿಶಿಷ್ಟ ಹೂಗಳು ಮನಸ್ಸಿಗೆ ಮುದನೀಡುತ್ತವೆ.

ತಿಂಗಳ ಹೆಸರನ್ನೇ ಧರಿಸಿಕೊಂಡು ಮೆರೆಯುವ ‘ಮೇ ಫ್ಲವರ್’ಗಳು ಇದೀಗ ಸೊರಬ ಹಾಗೂ ಸುತ್ತಮುತ್ತಲ ಗ್ರಾಮಗಳ ರಸ್ತೆ ಬದಿಯಲ್ಲಿ ಸಾರ್ವಜನಿಕರನ್ನು ಸ್ವಾಗತಿಸುತ್ತಿವೆ.

ಬೇಸಿಗೆಯಲ್ಲಿ ಬಹುತೇಕ ಮರಗಳು ಎಲೆ ಉದುರಿಸಿದರೆ ಗುಲ್ಮೊಹರ್ ಮರಗಳು ರಾಶಿರಾಶಿ ಕೆಂಪು ಹೂಗಳನ್ನು ನೆಲಕ್ಕೆ ಚೆಲ್ಲಿ ಕಂಗೊಳಿಸುತ್ತಿರುತ್ತವೆ. ತಾಲ್ಲೂಕಿನ ಸೊರಬ– ಆನವಟ್ಟಿ, ಸಿದ್ಧಾಪುರ, ಹೊಸಬಾಳೆ ಮಾರ್ಗದಲ್ಲಿ ಹೆಚ್ಚಾಗಿ ಕಾಣುವ ಗುಲ್ಮೊಹರ್ ಮರಗಳು ದಾರಿ ಹೋಕರ ಮನ ಸೆಳೆಯುತ್ತಿವೆ.

ಗುಲ್ಮೊಹರ್ ಹೂವಿಗೆ ಗ್ರಾಮೀಣ ಭಾಗದಲ್ಲಿ ‘ಬಸವನ ಹೂವು’ ಎಂದೂ ಕರೆಯಲಾಗುತ್ತದೆ. ಬಸವನ ಹಬ್ಬದಲ್ಲಿ ತಳಿರು– ತೋರಣಗಳನ್ನು ಕಟ್ಟುವುದು ಮತ್ತು ಜಾನುವಾರುಗಳಿಗೆ ಈ ಹೂವನ್ನು ಪೋಣಿಸಿ ಕಟ್ಟಿ ಅಲಂಕರಿಸುವುದು ಗ್ರಾಮೀಣ ಭಾಗದಲ್ಲಿ ಸಂಭ್ರಮದ ಆಚರಣೆಯಾಗಿರುತ್ತದೆ. ಹಿಂದೆ ಯಾವುದೇ ಶುಭ ಸಮಾರಂಭ ಇದ್ದರೂ ಚಪ್ಪರದ ತುಂಬಾ ಗುಲ್ಮೊಹರ್ ಹೂವುಗಳದ್ದೇ ಕಾರುಬಾರು ಇರುತ್ತಿತ್ತು.

ಗ್ರಾಮೀಣ ಭಾಗದಲ್ಲಿ ಊರಿನ ಮಧ್ಯದಲ್ಲಿ ಈ ಮರಗಳನ್ನು ಅಲಂಕಾರ ಕ್ಕಾಗಿ ಬೆಳೆಸುತ್ತಿದ್ದರು. ರೈತರ ಜಮೀನಿನ ಬದುಗಳಲ್ಲಿಯೂ ಇರುತ್ತಿದ್ದವು. ಉದ್ಯಾನಗಳ ಅಂದ ಹೆಚ್ಚಿಸಲು, ಶಾಲೆ ವಾತಾವರಣ ತಂಪಾಗಿಡಲು, ರಸ್ತೆಯ ಇಕ್ಕೆಲಗಳಲ್ಲಿ, ವಿಭಜಕಗಳಲ್ಲಿ, ಜಾನುವಾರುಗಳ ಓಡಾಟ ಹೆಚ್ಚಿರುವ ಜಾಗಗಳಲ್ಲಿ ಗುಲ್ಮೊಹರ್ ರಂಗು ಇದ್ದೇ ಇರುತ್ತಿತ್ತು.

ಆದರೆ, ಇತ್ತೀಚೆಗೆ ಗುಲ್ಮೊಹರ್ ಗುಂಗು ಅಲ್ಪ ಕ್ಷೀಣಿಸಿದಂತಿದೆ. ಈ ಹೂವುಗಳನ್ನು ಕಿತ್ತು ಅಲಂಕಾರಕ್ಕೆ ಬಳಸಿ ಸಂಭ್ರಮಿಸುವವರ ಸಂಖ್ಯೆ ಕಡಿಮೆ ಯಾಗಿದೆ. ಆದರೆ, ಮರದಲ್ಲಿ ಅರಳಿದ ಹೂಗಳನ್ನು ಕಣ್ತುಂಬಿಕೊಳ್ಳುವರಿಗೆ ಕೊರತೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಗುಲ್ ಮೊಹರ್ ಮರಗಳ ಸಂಖ್ಯೆ ಕಡಿಯಾಮೆಯಾಗಿದ್ದು, ರಸ್ತೆ ವಿಸ್ತರಣೆ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-42-2063460249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.