7

27 ವರ್ಷ ಬದುಕಬಲ್ಲದು ನಕ್ಷತ್ರ ಮೀನು!

Published:
Updated:
ನಕ್ಷತ್ರ ಮೀನು

ಸಮುದ್ರದಲ್ಲಿ ವೈವಿಧ್ಯಮಯ ಜಲಚರಗಳನ್ನು ಕಾಣಬಹುದು. ಅವುಗಳಲ್ಲಿ ಆಕರ್ಷಕವಾದ ದೇಹ ರಚನೆಯಿಂದ ಗಮನ ಸೆಳೆಯುವ ಜಲಚರ ನಕ್ಷತ್ರಮೀನು. ಇದನ್ನು ‘ಸೀ ಸ್ಟಾರ್’, ‘ಸ್ಟಾರ್‌ ಫಿಶ್‌’ ಎಂದೂ ಕರೆಯುತ್ತಾರೆ. ವೈಜ್ಞಾನಿಕ ಹೆಸರು ‘ಪ್ರೊಟೊರಿಸ್ಟರ್ ನೊಡೊಸಸ್’.

ನಕ್ಷತ್ರ ಮೀನುಗಳು ಗರಿಷ್ಠ 27 ವರ್ಷ ಬದುಕಬಲ್ಲದು. ಒಕ್ರೇಶಿಯಸ್ ಎಂಬ ದೊಡ್ಡಗಾತ್ರದ ನಕ್ಷತ್ರ ಮೀನಿನ ಜೀವಿತಾವಧಿ ಗರಿಷ್ಠ 35 ವರ್ಷ!

ನಕ್ಷತ್ರ ಮೀನುಗಳಿಗೆ ಬೆನ್ನು ಮೂಳೆ ಇರುವುದಿಲ್ಲ. ಬದಲಾಗಿ ಬೆನ್ನಿನ ಮೇಲೊಂದು ಮುಳ್ಳಿನ ಕವಚವಿರುತ್ತದೆ. ಹರಿತವಾದ ಚಿಕ್ಕ ಮೂಳೆಗಳ ಈ ರಚನೆಯು ನಕ್ಷತ್ರ ಮೀನುಗಳಿಗೆ ಶತ್ರುಗಳಿಂದ ರಕ್ಷಣೆ ಒದಗಿಸುತ್ತದೆ. ದೇಹದ ಮೇಲ್ಮೈ ಕ್ಯಾಲ್ಸಿಯಂ ಕಾರ್ಬೊನೇಟ್ ಪ್ಲೇಟ್‌ಗಳಿಂದ ಕೂಡಿರುತ್ತದೆ. ಈವರೆಗೆ ಹಲವು ಬಗೆಯ, ವಿವಿಧ ಗಾತ್ರ ಮತ್ತು ಬಣ್ಣದ ನಕ್ಷತ್ರ ಮೀನುಗಳನ್ನು ಗುರುತಿಸಲಾಗಿದೆ.

ಇದುವರೆಗೆ 2 ಸಾವಿರ ಪ್ರಭೇದದ ನಕ್ಷತ್ರಮೀನುಗಳನ್ನು ಗುರುತಿಸಲಾಗಿದೆ. ಉಪ್ಪುನೀರಿನಲ್ಲಿ ಮಾತ್ರ ಇವು ವಾಸಿಸುವ ಕಾರಣ ಜಗತ್ತಿನ ಎಲ್ಲಾ ಸಮುದ್ರಗಳಲ್ಲಿಯೂ ನಕ್ಷತ್ರ ಮೀನುಗಳು ಇರುತ್ತವೆ. ಸಮುದ್ರ ತೀರಪ್ರದೇಶ, ಹವಳದ ದಿಬ್ಬಗಳು ಮತ್ತು ಆಳವಿಲ್ಲದ ನೀರಿನಲ್ಲಿ ಹೆಚ್ಚಾಗಿ ಇರುತ್ತವೆ.

ನೀರಿನಲ್ಲೇ ಇದ್ದರೂ ನಕ್ಷತ್ರ ಮೀನಿಗೆ ಈಜಲು ಬರುವುದಿಲ್ಲ. ಕೈಗಳ ಸಹಾಯದಿಂದ ನೀರಿನಲ್ಲಿ ಚಲಿಸುತ್ತದೆ. ಪ್ರತಿ ಕೈಯ ಕೊನೆಯಲ್ಲಿ ಪುಟ್ಟ ಕಣ್ಣು ಇದ್ದು ಅವುಗಳ ಮೂಲಕ ಕತ್ತಲು ಮತ್ತು ಬೆಳಕನ್ನು ಗುರುತಿಸುತ್ತದೆ. ದೇಹದ ತುಂಬೆಲ್ಲಾ ಇರುವ ಕೋಶಗಳ ಮೂಲಕ ಅದು ಉಸಿರಾಡುತ್ತದೆ.

ಇದು ಮಿಶ್ರಾಹಾರಿ. ಬಾಯಿ, ದೇಹದ ಮಧ್ಯ ಭಾಗದಲ್ಲಿರುತ್ತದೆ. ಬಂಡೆಗಳ ಮೇಲೆ ಇರುವ ಪಾಚಿ ಇದರ ಆಹಾರ. ದಕ್ಷಿಣ ಏಷ್ಯಾದ ಒಂದು ಬಗೆಯ ನಕ್ಷತ್ರ ಮೀನಿಗೆ ಹವಳ ಮಾತ್ರ ಆಹಾರ. ಪಿಸಾಸ್ಟರ್ ಎಂಬ ನಕ್ಷತ್ರಮೀನು ಕೈಗಳಿಂದ ಕಡಲ ಚಿಪ್ಪುಗಳನ್ನು ಅಗಲಿಸಿ ನಂತರ ತನ್ನ ಹೊಟ್ಟೆಯನ್ನು ಚಿಪ್ಪಿನೊಳಗೆ ಇಳಿಸಿ ತಿನ್ನುತ್ತದೆ. ಆಹಾರ ತಿನ್ನುವುದು ಕೈಗಳಿಂದಲೇ.

ಇದಕ್ಕೆ ಎರಡು ಹೊಟ್ಟೆಗಳಿದ್ದು, ದೊಡ್ಡ ಹೊಟ್ಟೆಯನ್ನು ಹೊರ ಚಾಚಿ ತನಗಿಂತಲೂ ದೊಡ್ಡ ಜೀವಿಗಳನ್ನು ಬೇಟೆಯಾಡಿ ತಿನ್ನಬಲ್ಲದು. ರಕ್ತದ ಬದಲಾಗಿ ಇವು ನೀರಿನ ನರಮಂಡಲ ವ್ಯವಸ್ಥೆ ಹೊಂದಿವೆ. ಕಾಲಿನ ಕೆಳ ಭಾಗದಲ್ಲಿರುವ ಕೊಳವೆಯ ಮೂಲಕ ನೀರನ್ನು ಹೀರಿ ನರಗಳಿಗೆ ಕಳುಹಿಸುತ್ತದೆ. ಕೊಳವೆಯ ಮುಖಾಂತವೇ ನೀರನ್ನು ಹೊರಹಾಕುತ್ತದೆ.

ಹೆಣ್ಣು ನಕ್ಷತ್ರ ಮೀನು 20 ಲಕ್ಷ ಮೊಟ್ಟೆಗಳನ್ನು ಇಡಬಲ್ಲದು. ಆದರೆ ಎಲ್ಲಾ ಮೊಟ್ಟೆಗಳೂ ಜೀವತಾಳುವುದಿಲ್ಲ. ಹೆಚ್ಚಿನವು ಇತರ ಮೀನುಗಳಿಗೆ ಆಹಾರವಾಗುತ್ತವೆ. ಲಾರ್ವಾ ಸ್ಥಿತಿಯಲ್ಲಿರುವ ಮೊಟ್ಟೆಗಳನ್ನು ಗಂಡು ಮೀನುಗಳು ಅಭಿವೃದ್ಧಿಪಡಿಸಿ ನಕ್ಷತ್ರದ ಆಕಾರ ಪಡೆಯುವಂತೆ ಮಾಡುತ್ತವೆ. ಈ ಮೀನುಗಳಲ್ಲಿ ಔಷಧೀಯ ಗುಣಗಳಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !