ಸುಂಟಿಕೊಪ್ಪದಲ್ಲಿ ಬೆಳ್ಳಕ್ಕಿಗಳ ಸರಿಗಮ...

7

ಸುಂಟಿಕೊಪ್ಪದಲ್ಲಿ ಬೆಳ್ಳಕ್ಕಿಗಳ ಸರಿಗಮ...

Published:
Updated:
Deccan Herald

ಸುಂಟಿಕೊಪ್ಪ: ಸುಂದರ ಕಣ್ಣುಗಳನ್ನು ಹೊಂದಿರುವ, ಸಂತಾನೋತ್ಪತ್ತಿ ಕಾಲದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾವಿರಾರು ಕಿಲೋ ಮೀಟರ್ ವಲಸೆ ಹೋಗುವ ಬೆಳ್ಳಕ್ಕಿಗಳ ದಂಡು ಈ ಬಾರಿ ಸುಂಟಿಕೊಪ್ಪಕ್ಕೆ ಕಾಲಿಟ್ಟಿವೆ. ಮರದ ಮೇಲೆ ಮಲ್ಲಿಗೆ ಚೆಲ್ಲಿದಂತೆ ಕಾಣುತ್ತಿದ್ದು, ಅವುಗಳ ಕಲರವ ಇಲ್ಲಿ ತುಂಬಿಕೊಂಡಿದೆ.

ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ರಾಮ ಮಂದಿರದ ಅಶ್ವತ್ಥ ಮರದಲ್ಲಿ ತಂಗಿರುವ ಬೆಳ್ಳಕ್ಕಿಗಳ ದಂಡು ಈ ಬಾರಿ ಮಳೆಗಾಲದಲ್ಲಿಯೇ ದೌಡಾಯಿಸಿದೆ.

ಮುಂಜಾನೆ ವೇಳೆ ನೋಡಿದರೆ, ಮರದ ಮೇಲೆ ಮಲ್ಲಿಗೆ ರಾಶಿ ಸುರಿದಿದ್ದಂತೆ ಭಾಸವಾಗುತ್ತದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೆಲವು ಹಕ್ಕಿಗಳು ಮರ ತೊರೆದು ಗುಂಪಾಗಿ ಆಹಾರ ಅರಸಿ ಹೊರಹೋಗುತ್ತವೆ. ಸಂಜೆ ವೇಳೆ ಮತ್ತೆ ವಾಪಸ್ಸಾಗಿ ತಮ್ಮ ಸಂಸಾರದ ಜೊತೆಯಲ್ಲಿ ಕಾಲ ಕಳೆಯುತ್ತವೆ. ಬೆಳ್ಳಕ್ಕಿಗಳು ಈಗಾಗಲೇ ಮರದಲ್ಲಿ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡುತ್ತಿವೆ. ಕಳೆದ ವರ್ಷವೂ ಹೀಗೆಯೇ ಬೃಹದಾಕಾರದ ಬೆಳ್ಳಕ್ಕಿಗಳ ಹಿಂಡು ಆಗಮಿಸಿದ್ದವು.

ಜೂನ್–ಜುಲೈ ತಿಂಗಳಲ್ಲಿ ಆರಂಭವಾಗುವ ಪಕ್ಷಿಗಳ ಸಂಚಾರ ಆಗಸ್ಟ್ ಕೊನೆಯವರೆಗೆ ಇರುತ್ತದೆ. ತನ್ನ ಮರಿಗಳು ಬೆಳೆಯುವವರೆಗೆ ಇದ್ದು, ಮತ್ತೆ ವಾಪಸ್ಸಾಗುತ್ತವೆ. ಆದರೆ ಈ ಬಾರಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಕ್ಕಿಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !