ಈ ಮೀನಿನ ದೇಹ ವಿಮಾನವನ್ನು ಹೋಲುತ್ತದೆ!

7

ಈ ಮೀನಿನ ದೇಹ ವಿಮಾನವನ್ನು ಹೋಲುತ್ತದೆ!

Published:
Updated:
Deccan Herald

ಶಾರ್ಕ್‌ಗಳು ಹೆಚ್ಚು ಗಮನ ಸೆಳೆಯುವುದು ತಮ್ಮ ಆಕ್ರಮಣಕಾರಿ ಸ್ವಭಾವದಿಂದ. ಹೀಗಾಗಿಯೇ ಇವನ್ನು ಸಮುದ್ರದ ಸಿಂಹಗಳು ಎಂದು ಕರೆಯುತ್ತಾರೆ.

ಇದರ ಆಕರ್ಷಕ ದೇಹಾಕೃತಿ ಎಂಥವರನ್ನೂ ಆಕರ್ಷಿಸುತ್ತದೆ. ಈ ವರೆಗೆ ಹಲವು ಶಾರ್ಕ್ ಪ್ರಭೇದಗಳನ್ನು ಗುರುತಿಸಲಾಗಿದೆ. ಅಂತಹ ಅಪರೂಪದ ಪ್ರಭೇದಗಳಲ್ಲಿ ಥೆಶೆರ್ ಶಾರ್ಕ್‌ (thresher shark) ಕೂಡ ಒಂದು. ಇದರ ವೈಜ್ಞಾನಿಕ ಹೆಸರು ಅಲೋಪಿಯಾಸ್ (Alopias). ಇಂದಿನ ಮತ್ಸ್ಯ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಇದನ್ನು ಪೋಕ್ಸ್‌ ಶಾರ್ಕ್‌,  ಅಲೋಪಿಯಾಸ್ ವಲ್ಫಿಯಾಸ್‌ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಇವುಗಳಲ್ಲಿ ಈವರೆಗೆ ನಾಲ್ಕು ತಳಿಗಳನ್ನು ಗುರುತಿಸಲಾಗಿದೆ. ಈ ಮೀನಿನಲ್ಲಿ ಅದರ ಬಾಲ ಹೆಚ್ಚು ಗಮನ ಸೆಳೆಯುತ್ತದೆ. ಕಾರಣ ದೇಹದ ಉದ್ದದಷ್ಟೇ ಬಾಲವೂ ಇರುತ್ತದೆ.

ಹೇಗಿರುತ್ತದೆ?

ದೇಹವು ತಿಳಿ ನೀಲಿ ಮತ್ತು ಹೊಳೆಯುವಂತ ಬೆಳ್ಳಿ ಬಣ್ಣಗಳಿಂದ ಕೂಡಿರುತ್ತದೆ. ಉದರದ ಕೆಳಭಾಗವು ಬಿಳಿ ಬಣ್ಣದಲ್ಲಿರುತ್ತದೆ. ಇವುಗಳಲ್ಲಿ ಕೆಲವು ಗಾಢ ಕಂದು ಮತ್ತು ಕಪ್ಪು ಬಣ್ಣದಲ್ಲಿಯೂ ಕಾಣಸಿಗುತ್ತವೆ. ಇದರ ಕಣ್ಣುಗಳು ನೋಡಲು ಗೋಡಗೆ ರಂಧ್ರ ಕೊರದ ರೀತಿಯಲ್ಲಿ ಕಾಣಿಸುತ್ತವೆ. ಚಪ್ಪಟೆ ಆಕಾರದ ಮೂಗು, ಚೂಪಾದ ಹಲ್ಲುಗಳನ್ನು ಹೊಂದಿದೆ. ಚರ್ಮವು ತೆಳುವಾಗಿರುತ್ತದೆ. ಒಟ್ಟು ಎಂಟು ರೆಕ್ಕೆಗಳಿವೆ. ಬೆನ್ನಿನ ಮೇಲಿನ ರೆಕ್ಕೆ ಹರಿತವಾಗಿರುತ್ತದೆ. ದೇಹವು ಸ್ಥೂಲವಾಗಿರುತ್ತದೆ. ಬಾಲ ಹರಿತವಾಗಿದ್ದು, ಇಂಗ್ಲಿಷ್‌ ಅಕ್ಷರ ‘L’ ಆಕಾರದಿಂದ ಕೂಡಿರುತ್ತದೆ.

ಎಲ್ಲೆಲ್ಲಿವೆ?

ಅಮೆರಿಕ, ಜಪಾನ್‌, ಹಂಗೇರಿ, ಅಟ್ಲಾಂಟಿಕಾ, ಜಪಾನ್, ತೈವಾನ್, ಸ್ಪೇನ್, ಬ್ರೆಜಿಲ್, ಉರುಗ್ವೆ, ವಾಯವ್ಯ ಭಾರತ, ಪೂರ್ವ ಪೆಸಿಫಿಕ್, ದಕ್ಷಿಣ ಕ್ಯಾಲಿಫೋರ್ನಿಯಾ, ಮಡಗಾಸ್ಕರ್‌, ಅಂಟಾರ್ಟಿಕಾ, ಸೊಮಾಲಿಯಾ, ಐಸ್‌ಲ್ಯಾಂಡ್‌, ಪಾಕಿಸ್ತಾನ, ಶ್ರೀಲಂಕಾ, ಫೆಸಿಪಿಕ್‌ ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. 1600 ಅಡಿಯಿಂದ ರಿಂದ 2000 ಆಳ ಪ್ರದೇಶದಲ್ಲಿ ಇದು ವಾಸಿಸುತ್ತದೆ. 

ಆಹಾರ 

ಬೇಟೆಯಾಡಲು ಬಾಲವನ್ನು ಬಳಸಿಕೊಳ್ಳುತ್ತದೆ. ಇದರ ಚೂಪಾದ ಬಾಲದ ಮೂಲಕ ಜಲಚರಗಳನ್ನು ಹೊಡೆದುರುಳಿಸಿ ಭಕ್ಷಿಸುತ್ತದೆ. ಶೇ 97ರಷ್ಟು ಆಹಾರವನ್ನು ಮೂಳೆಗಳನ್ನು ಹೊಂದಿರುವ ಮೀನುಗಳ ಮೂಲಕವೇ ಪಡೆಯಬಹುದು. ಒಮ್ಮೊಮ್ಮೆ ಕಡಲ ಹಕ್ಕಿಗಳನ್ನು ಇದು ಬೇಟೆಯಾಡುತ್ತದೆ. ಸಣ್ಣ ಮೀನುಗಳ ಗುಂಪನ್ನು ಒಂದೇ ಬಾರಿಗೆ ತಿಂದರೆ, ದೊಡ್ಡ ಗಾತ್ರದ ಮೀನುಗಳನ್ನು ಬಾಲದ ಸಹಾಯದಿಂದ ಎರಡು ತುಂಡು ಮಾಡಿ ತಿನ್ನುತ್ತದೆ. 

ವರ್ತನೆ ಮತ್ತು ಜೀವನ ಕ್ರಮ  
ಇದು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದೆ. ಇದರ ರೆಕ್ಕೆಗಳು ಮತ್ತು ಸ್ನಾಯುಗಳು ಬಲಿಷ್ಠವಾಗಿದ್ದು, ವೇಗವಾಗಿ ಈಜುವುದಕ್ಕೆ ಸಹಾಯ ನೆರವಾಗುತ್ತವೆ. ಇದು ಚುರುಕು ಸ್ವಭಾವದ ಜಲಚರ. ನೀರಿನಲ್ಲಿ ಜಿಗಿಯುವುದು, ತಲೆ–ಕೆಳಗೆ ಮಾಡಿ ದೇಹ ತಿರುಗಿಸುವುದರಿಂದ ಇದನ್ನು ಅಥ್ಲೆಟ್‌ಗಳಿಗೆ ಹೋಲಿಸ
ಲಾಗುತ್ತದೆ. ಗುಂಪಿನಲ್ಲಿ ವಾಸಿಸಲು ಇಷ್ಟ
ಪಡುತ್ತದೆ. ಉಷ್ಣ ಮತ್ತು ಶೀತ ವಲಯಗಳೆರಡಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ. 

ಸಂತಾನೋತ್ಪತ್ತಿ

ಒಂದು ಬಾರಿಗೆ 2ರಿಂದ 5 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಸತ್ವಯುತವಾಗಿ ಇರದಿದ್ದರೆ ತಾಯಿ ಮೀನು ಭಕ್ಷಿಸುತ್ತದೆ. ಮೊಟ್ಟೆಗಳ ರಕ್ಷಣೆಯಲ್ಲಿ ಪೋಷಕ ಮೀನುಗಳು ವಿಶೇಷ ಕಾಳಜಿ ತೋರುತ್ತವೆ.

**

ವಿಶೇಷ

* ಇದರ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಆಲಂಕಾರಿಕ ವಸ್ತುಗಳಿಗೂ ಬಳಸಲಾಗುತ್ತದೆ. 

* ಚರ್ಮವನ್ನು ಸಂಸ್ಕರಿಸಿ ಹೊದಿಕೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. 

* ಇದರ ಯಕೃತ್ತಿಯ ಎಣ್ಣೆಯಲ್ಲಿ ಹೆಚ್ಚು ಜೀವಸತ್ವಗಳಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !