ಶನಿವಾರ, ಡಿಸೆಂಬರ್ 5, 2020
21 °C
ಹಾನಿಕಾರಕ ಕಣಜದ ಗೂಡುಗಳ ನಾಶಕ್ಕೆ ಕೃಷಿ ಇಲಾಖೆ ಯೋಜನೆ

ಜೇನುನೊಣ ಕೊಲ್ಲುವ ಕಣಜದ ಗೂಡು ಅಮೆರಿಕದಲ್ಲಿ ಪತ್ತೆ: ನಾಶಕ್ಕೆ ಕೃಷಿ ಇಲಾಖೆ ಯೋಜನೆ

ಎಪಿ Updated:

ಅಕ್ಷರ ಗಾತ್ರ : | |

ಸ್ಪೋಕನೆ: ಸ್ಥಳೀಯ ಜೇನು ನೊಣಗಳನ್ನು ಕೊಲ್ಲುವಂತಹ  ಕಣಜಗಳಿರುವ ಗೂಡನ್ನು ವಾಷಿಂಗ್ಟನ್‌ ವಿಜ್ಞಾನಿಗಳು ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಿದ್ದಾರೆ.

ಸ್ಥಳೀಯ ಜೇನು ನೊಣಗಳನ್ನು ರಕ್ಷಿಸುವುದಕ್ಕಾಗಿ ಹಾನಿಕಾರಕ ಕಣಜ ಮತ್ತು ಅವುಗಳ ಗೂಡುಗಳನ್ನು ನಾಶಪಡಿಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ.

ಏಷ್ಯಾದ ದೈತ್ಯ ಕಣಜದ ಗೂಡುಗಳನ್ನು ಪತ್ತೆ ಮಾಡಲು ಬಲೆ ಸೇರಿದಂತೆ ವಿವಿಧ ಪರಿಕರಗಳೊಂದಿಗೆ ಕೃಷಿ ಇಲಾಖೆಯ ನೌಕರರು ವಾರಗಟ್ಟಲೆ ಶ್ರಮ ಪಟ್ಟಿದ್ದಾರೆ. ಈ ಕಣಜ ವಿಷಜಂತುವಾಗಿದ್ದು ಮನುಷ್ಯರಿಗೆ ಕಚ್ಚಿದರೆ ಅಪಾಯವಾಗಲೂಬಹುದು. ಮಾತ್ರವಲ್ಲ, ಬೆಳೆಗಳ ಪರಾಗಸ್ಪರ್ಶಕ್ಕೆ ನೆರವಾಗುವ ಜೇನು ನೊಣಗಳನ್ನೂ ನಾಶ ಮಾಡುತ್ತದೆ.

ಇಲಾಖೆಯ ವಕ್ತಾರ ಕರ್ಲಾ ಸಲ್ಫ್ ಅವರು ಈ ದೈತ್ಯ ಕಣಜದ ಗೂಡು ಪತ್ತೆ ಮಾಡಿರುವ ವಿಷಯವನ್ನು ವರ್ಚುವಲ್ ಸಭೆಯಲ್ಲಿ ತಿಳಿಸಿದ್ದಾರೆ. ‘ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಶುಕ್ರವಾರ ಸಿಯಾಟಲ್‌ನ ಉತ್ತರ ನಗರ ಬ್ಲೇನ್‌ನಲ್ಲಿ ಕಂಡು ಬರುವ ದೈತ್ಯ ಕಣಜದ ಗೂಡುಗಳನ್ನು ನಾಶಪಡಿಸಲು ವಿಳಂಬವಾಗಿದೆ’ ಎಂದು ಹೇಳಿದರು.

‘ಈ ಕಣಜದ ಗೂಡು ಬ್ಯಾಸ್ಕೆಟ್‌ ಬಾಲ್‌ನಷ್ಟು ದಪ್ಪನಾಗಿರುತ್ತದೆ. ಆ ಗೂಡಿನಲ್ಲಿ 100 ರಿಂದ 200 ಕಣಜಗಳು ಇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಆಕ್ರಮಣಕಾರಿ ಕಣಜಗಳು, ಕಳೆದ ವರ್ಷದ ಕೊನೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದವು. ಆಗಿನಿಂದಲೂ ಈ ಪ್ರದೇಶದಲ್ಲಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಆದರೆ, ಈ ಕಣಜಗಳು ಉತ್ತರ ಅಮೆರಿಕಾಕ್ಕೆ ಹೇಗೆ ಬಂದಿವೆ ಎಂದು ತಿಳಿದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು