ಶುಕ್ರವಾರ, ಡಿಸೆಂಬರ್ 13, 2019
25 °C

ಕಚಗುಳಿ ಇಡುವ ವನ್ಯಜೀವಿಗಳು; ಇಲ್ಲಿವೆ ಪ್ರಶಸ್ತಿ ಪಡೆದಿರುವ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sarah Skinner's photo titled "Grab life by the..." was named winner of Comedy Wildlife Awards

ಸಿಂಹದ ಮರಿಯೊಂದು ಸಿಂಹದೊಂದಿಗೆ ಆಡುತ್ತಿರುವ ಚಿತ್ರವು ವರ್ಷದ ಅತ್ಯಂತ ತಮಾಷೆಯ ವನ್ಯಜೀವಿ ಚಿತ್ರವಾಗಿ ಹೊರಹೊಮ್ಮಿದೆ. ಸಿಂಹದ ಮೇಲೆ ಹಿಂಬದಿಯಿಂದ ಮರಿ ಸಿಂಹವು ಜಿಗಿದು ಹಿಡಿಯಲು ಪ್ರಯತ್ನಿಸುವುದನ್ನು ಫೋಟೊದಲ್ಲಿ ಕಾಣಬಹುದಾಗಿದೆ. ಬೋಟ್‌ಸ್ವಾನಾದಲ್ಲಿ ಸಾರಾ ಸ್ಕಿನ್ನರ್‌ ಎಂಬುವವರು ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಈ ಚಿತ್ರವು 2019ನೇ ಸಾಲಿನ 'ಕಾಮಿಡಿ ವೈಲ್ಡ್‌ಲೈಫ್‌ ಫೋಟೊಗ್ರಫಿ ಅವಾರ್ಡ್ಸ್‌' ಸರ್ವಶ್ರೇಷ್ಠ ಫೋಟೊ ಆಗಿ ಆಯ್ಕೆಯಾಗಿದೆ. 

'ಈ ಚಿತ್ರವನ್ನು ಒಂದಿಷ್ಟು ನಗು ಮತ್ತು ಖುಷಿಯನ್ನು ಜಗತ್ತಿನ ಎಲ್ಲೆಡೆ ಹೊಮ್ಮಿಸುತ್ತದೆ ಎಂಬುದು ನನ್ನ ಮನಸ್ಸಿಗೆ ಮುದ ನೀಡುತ್ತಿದೆ' ಎಂದು ಸಾರಾ ಸ್ಕಿನ್ನರ್‌ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಕಾಮಿಡಿ ವೈಲ್ಡ್‌ಲೈಫ್‌ ಫೋಟೊಗ್ರಫಿ ಅವಾರ್ಡ್ಸ್‌ ವೆಬ್‌ಸೈಟ್‌ ಪ್ರಕಟಿಸಿದೆ. 

'ಸ್ಪರ್ಧೆಯ ಮುಖೇನ ಸಂರಕ್ಷಣೆ' ಧ್ಯೇಯದೊಂದಿಗೆ 2015ರಲ್ಲಿ 'ಕಾಮಿಡಿ ವೈಲ್ಡ್‌ಲೈಫ್‌ ಫೋಟೊಗ್ರಫಿ ಅವಾರ್ಡ್ಸ್‌' ಪ್ರಾರಂಭಿಸಲಾಗಿದೆ. 

ಈ ವರ್ಷದ ಸ್ಪರ್ಧೆಗೆ ಜಗತ್ತಿನ ಹಲವು ಭಾಗಗಳಿಂದ ಸುಮಾರು 4,000 ಜನರು ಚಿತ್ರಗಳನ್ನು ಕಳುಹಿಸಿದ್ದರು. ಅವುಗಳ ಪೈಕಿ ಅಂತಿಮ ಸುತ್ತಿಗೆ 40 ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಕೈಯನ್ನು ತಲೆ ಹಿಂದಕ್ಕೆ ಕಟ್ಟಿ ತಾಯಿ ಚಿಂಪಾಂಜಿ ಮೇಲೆ ಒರಗಿರುವ ಪುಟಾಣಿ ಚಿಂಪಾಂಜಿ, ದುಃಖತಪ್ತವಾಗಿರುವಂತೆ ಕಾಣುವ ಕಂದು ಬಣ್ಣದ ಕರಡಿ, ನೃತ್ಯ ಮಾಡುತ್ತಿರುವ ಪೆಂಗ್ವಿನ್‌ಗಳು, ಬಾಯಿಯ ಮೇಲೆ ಬೆರಳಿಟ್ಟ ಮಂಗ,...ಹೀಗೆ ಮುದ ನೀಡುವಂತಹ ಅನೇಕ ಫೋಟೊಗಳು ಇಲ್ಲಿವೆ. 

ನವೆಂಬರ್‌ 13ರಂದು ವಿವಿಧ ವಿಭಾಗಗಳಲ್ಲಿ ವಿಜೇತ ಫೋಟೊಗಳನ್ನು ಆಯ್ಕೆ ಮಾಡಲಾಗಿದೆ. ಆಗಸದಲ್ಲಿನ ಜೀವಿಗಳು ವಿಭಾಗದಲ್ಲಿ ಕ್ರೊವೇಷಿಯಾದಲ್ಲಿ ಸೆರೆ ಹಿಡಿಯಲಾಗಿರುವ ಎರಡು ಪಕ್ಷಿಗಳ ಚಿತ್ರ ಆಯ್ಕೆಯಾಗಿದೆ. ಜನರು ಆಯ್ಕೆ ಮಾಡಿದ ಚಿತ್ರ, ಇಂಟರ್‌ನೆಟ್‌ ಪೋರ್ಟ್‌ಫೋಲಿಯೊ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಆಯ್ದ ಚಿತ್ರಗಳಿಗೆ ನೀಡಲಾಗಿದೆ.

ಪ್ರತಿಕ್ರಿಯಿಸಿ (+)