ಯಳಂದೂರು: ‘ಬಂದಿದೆ ವಸಂತ ತಂದಿದೆ ಅನಂತ, ಹೊಸ ಹಸಿರು ಹೊಸ ಉಸಿರು, ಹೊಸ ಹೂವಿನ ಗಂಧ.. ‘ಎಂಬ ಕುವೆಂಪು ಅವರ ಕವನದ ಸಾಲುಗಳಂತೆ ಬಿರು ಬಿಸಿಲಿನ ದಿನಗಳಲ್ಲೂ ತರು ಲತೆಗಳು ಅರಳಿ ತನು ಮನಕ್ಕೆ ತಂಪನ್ನು ತಂದಿತ್ತಿದೆ. ಇವುಗಳಲ್ಲಿ ಗುಲ್ ಮೊಹರ್ಗೆ ವಿಶಿಷ್ಟ ಸ್ಥಾನವಿದೆ.

ತಾಲ್ಲೂಕಿನ ಹಾದಿ ಬದಿಯ ಅಂಚು, ರಸ್ತೆಗಳಲ್ಲಿ ಹೊಂಗೆ ಹೂವಿನ ಗಂಧ, ದೇವದಾರಿನ ಚಂದ ಹಾಗೂ ಗುಲ್ಮೊಹರ್ ವೃಕ್ಷದ ಕೆಂಪು ಲತೆಗಳು ತಮ್ಮ ಚಲುವನ್ನು ಸಾರುತ್ತಿವೆ. ಬುಡದಲ್ಲಿ ತಂಪು ತುಂಬಿ, ಬಿಸಿಲ ಬೇಗೆಯಲ್ಲೂ ಮನಕ್ಕೆ ಮುದ ನೀಡುತ್ತ, ಪುಷ್ಪ ವಸಂತದ ನವೋಲ್ಲಾಸದ ದರ್ಶನ ಮಾಡಿಸುತ್ತಿದ್ದು, ನಿಸರ್ಗ ಪ್ರಿಯರನ್ನು ಇನ್ನಿಲ್ಲದಂತೆ ಕಾಡಿದೆ.

ಈ ಸಲ ಭಾಸ್ಕರನ ಪ್ರಕೋಪಕ್ಕೆ ಜನ ಜೀವನ ಕಂಗೆಟ್ಟಿದೆ. ಆದರೆ, ಅತಿ ಬೇಸಿಗೆಯಲ್ಲೂ ಅರಳುವ ಇಂಗ್ಲಿಷ್ ಹೆಸರಿನ ಹತ್ತಾರು ಪುಷ್ಪಗಳು ಪರಿಸರದಲ್ಲಿ ಸ್ವಾಗತ ಕೋರಿವೆ.

ಆರ್ಕಿಡ್, ಆಲ್ಫೋನ್ಸ್, ಚೆರ್ರಿ ಬ್ಲಾಸಮ್, ಪಿಂಕ್ ಟ್ರಂಪೆಟ್ ಟ್ರೀ ಜೊತೆಗೆ ಸ್ಥಳೀಯ ಕಣಗಿಲೆ, ಬೋಗನ್ವಿಲ್ಲಾ, ಜರ್ಬಿರ, ಲಿಲ್ಲಿ, ಜಿನಿಯಾ ಲತೆಗಳು ಒಟ್ಟಾಗಿವೆ, ಹೆಸರೇ ಗೊತ್ತಿಲ್ಲದ ಪುಷ್ಪಲೋಕ ಬೇಸಿಗೆ ಬಿಸಿಯನ್ನು ಮರೆಸುವಷ್ಟು ಪ್ರಕೃತಿಯ ತುಂಬಾ ಪರಿಮಳ ಸೂಸಿವೆ.

ಬೇಸಿಗೆಯಲ್ಲಿ ಮೊಹರು ಹೊತ್ತಿದ ಬೆಂಕಿ ಮರ: ‘ಬೇಸಿಗೆಯಲ್ಲಿ ಬಹುತೇಕ ಮರಗಳು ಬೋಳಾಗಿವೆ. ಕಾಲು ಸುಡುವ ನೆಲ ತಂಪು ಅರಸುವ ಹೊತ್ತಿನಲ್ಲಿ ಕೆಂಪು, ಕೇಸರಿ, ಕಿತ್ತಲೆ ಬಣ್ಣದ ಹೂವು, ಚಿಗುರು ಹೊತ್ತು ರಾರಾಜಿಸುವ ಗುಲ್ ಮೊಹರ್ ವೃಕ್ಷಗಳು ಊರುಕೇರಿ, ಪೇಟೆ, ಪಟ್ಟಣಗಳಲ್ಲಿ ನಳನಳಿಸುತ್ತಾ ನಿಂತಿವೆ.

ಇದರ ಹೂವು ಮತ್ತು ಹಸಿರು ಕಾಯಿ ಗೊಂಚಲು ಮದುವೆ ಮನೆ ಮತ್ತು ಹೊಸ ಮನೆಗಳ ಅಲಂಕಾರಕ್ಕೆ ಬಳಸುತ್ತಾರೆ. ಇದರ ಎಲೆ ಮತ್ತು ತೊಗಟೆಯ ಔಷಧೀಯ ಗುಣಗಳು ಅಪಾರ. ಆದರೆ, ಈಚಿನ ದಿನಗಳಲ್ಲಿ ಈ ಮರಗಳು ಕಡಿಮೆಯಾಗುತ್ತಿದ್ದು, ಅಳಿವಿನಂಚು ಮಟ್ಟಿವೆ ಎನ್ನುತ್ತಾರೆ ಕವಿ ಅಂಬಳೆ ನಾಗೇಶ್. ಬಿಸಿಲು ಹೆಚ್ಚಾಗುತ್ತಿದ್ದಂತೆ ಬೋಳು ಬೋಳು ಮರಗಳು ಒಮ್ಮೆಲೇ ಉಸಿರು ತುಂಬಿಕೊಂಡು, ಕಾಯಿ ಬಿಟ್ಟು ನಳನಳಿಸುವ ವಿಸ್ಮಯವನ್ನು ವೀಕ್ಷಿಸುವುದೇ ಚಂದ. ವಸಂತು ಋತುವಿನ ಆಗಮನಕ್ಕೆ ಹೊಸ ಧಿರಿಸು ತೊಡುವ ಗುಲ್ ಮೊಹರ್ ಹಗಲು ಹೊತ್ತಿನಲ್ಲಿ ಬಾನಾಡಿಗಳನ್ನು ಆಕರ್ಷಿಸಿ, ಚಿಟ್ಟೆ ದುಂಬಿಗಳನ್ನು ಕಟ್ಟಿಕೊಂಡು ಪರಾಗಸ್ಪರ್ಶ ಕ್ರಿಯೆಗೆ ಸಾಥ್ ನೀಡಿದರೆ, ಇರುಳಿನಲ್ಲಿ ಅಪರೂಪದ ಪಕ್ಷಿಗಳಿಗೆ ನೆಮ್ಮದಿ ಕರುಣಿಸುತ್ತವೆ. ಇದು ಅಪರೂಪದ ಜೀವ ಪ್ರಭೇದಗಳಿಗೆ ನಿಸರ್ಗವೇ ನೀಡಿದ ವರ ಎನ್ನುತ್ತಾರೆ ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-37-151030568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.