ಬೀದರ್: ಬೀದರ್ ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಬಿಸಿಲ ಝಳ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸಲಹೆ ನೀಡಿದ್ದಾರೆ.

‘ಹೀಟ್ ವೇವ್ ಸ್ಟ್ರೋಕ್’ನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಬಿಸಿಲಿನ ಸಮಯದಲ್ಲಿ ಹೊಲದ ಕೆಲಸ/ನೀರಾವರಿ ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.

ತೋಟಗಳು, ತರಕಾರಿಗಳು, ನರ್ಸರಿಗಳ ಬಗ್ಗೆ ಮೇಲ್ವಿಚಾರಣೆ ಹೆಚ್ಚಿಸಿ, ಎಳೆಯ ಸಸ್ಯಗಳಿಗೆ ತಾತ್ಕಾಲಿಕ ನೆರಳು ನೀಡುವುದರ ಬಗ್ಗೆ ರೈತರಿಗೆ ಸಲಹೆ ನೀಡಬೇಕು. ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಟೋಪಿ ಅಥವಾ ಛತ್ರಿ ಬಳಸಬೇಕು. ಪ್ರಾಣಿಗಳ ತಂಪಾಗಿಸುವಿಕೆ ಮತ್ತು ಜಲಸಂಚಯನ ಅಭ್ಯಾಸಗಳ ಕುರಿತು ಸಲಹೆಗಳನ್ನು ಪಶು ಸಂಗೋಪನೆ ಇಲಾಖೆ ರೈತರಿಗೆ ನೀಡಬೇಕು. ಪ್ರಾಣಿಗಳಿಗೆ ನೀರು ಚಿಮುಕಿಸುವುದು, ಸ್ನಾನ ಮಾಡಿಸುವುದು ಮತ್ತು ಗಾಳಿಯ ಹರಿವಿನ ಸುಧಾರಣೆಗಳನ್ನು ಉತ್ತೇಜಿಸಿ, ಪ್ರಾಣಿಗಳ ಶೆಡ್ ತಂಪಾಗಿಸಲು ಒದ್ದೆಯಾದ ಗೋಣಿ ಚೀಲಗಳನ್ನು ಬಳಸಲು ರೈತರಿಗೆ ತಿಳಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

ಗರಿಷ್ಠ ಶಾಖದ ಸಮಯದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4ರ ವರೆಗೆ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸಲು ರೈತರಿಗೆ ತಿಳಿಸಬೇಕು. ಗೋಶಾಲೆಯ ಸಿದ್ಧತೆಯನ್ನು ಖಚಿತಪಡಿಸಿಕೊಂಡು ನೆರಳು, ನೀರು, ಗಾಳಿ ವ್ಯವಸ್ಥೆ ಮಾಡಬೇಕು. ಕೋಳಿ ಸಾಕಣೆದಾರರು ಶೆಡ್ ಗಳನ್ನು ಮಾಡಿ, ತಂಪಾಗಿರಿಸಬೇಕು. ಜಮೀನಿನ ಉಳುಮೆಗೆ ಎತ್ತುಗಳನ್ನು ಬೆಳಿಗ್ಗೆ ಅಥವಾ ಸಂಜೆ ವೇಳೆ ಬಳಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ/ಮಕ್ಕಳಿಗೆ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ ಬೆಳಿಗ್ಗೆ11ರಿಂದ ಸಂಜೆ 4.30ರ ವರೆಗೆ ಶಾಲೆ/ಕಾಲೇಜುಗಳ ಆವರಣದಲ್ಲಿ ಕುಡಿಯುವ ನೀರಿನ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು, ಆರೋಗ್ಯ ಕೇಂದ್ರಗಳಲ್ಲಿ ಒಆರ್ಎಸ್, IV ದ್ರವಗಳು ಮತ್ತು ಐಸ್ ಪ್ಯಾಕ್ ದಾಸ್ತಾನುಗಳ ಕುರಿತು ಪರಿಶೀಲಿಸಿ, ಕೊರತೆಯನ್ನು ತುಂಬಿಸಿ, ಶಾಖದ ಕಾಯಿಲೆ ಗುರುತಿಸುವಿಕೆ ಮತ್ತು ಮೊದಲ ಪ್ರತಿಕ್ರಿಯೆಯ ಬಗ್ಗೆ ಸಿಬ್ಬಂದಿಗೆ ತಿಳಿಸಬೇಕು, ಕಾರ್ಮಿಕರ ಕೆಲಸದ ಸಮಯವನ್ನು ಮಧ್ಯಾಹ್ನ 12 ರಿಂದ 3ರ ವರೆಗೆ ನಿಗದಿಪಡಿಸಬೇಕು ಎಂದು ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-33-127002554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.