ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಹಸಿರು ಹ್ಯಾಕಾಥಾನ್

Last Updated 23 ಡಿಸೆಂಬರ್ 2018, 19:52 IST
ಅಕ್ಷರ ಗಾತ್ರ

ನಾಗರಿಕರ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿರೈಸ್‌(WeRise) ಶಕ್ತಿ ಸಂಪನ್ಮೂಲ ಸಂಸ್ಥೆ (ತೆರಿ) ಸಹಯೋಗದಲ್ಲಿ ಹಸಿರು ಹ್ಯಾಕಾಥಾನ್ 2018 ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಬೆಳ್ಳಂದೂರಿನ ಆರ್‌ಎಂಜಡ್‌ ಇಕೋ ವರ್ಲ್ಡ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿನಗರದ 100 ಶಾಲೆಗಳಿಂದ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ, ತಂತ್ರಜ್ಞಾನ ಪ್ರೌಢಿಮೆ, ಆರೋಗ್ಯ, ಆವಿಷ್ಕಾರ, ವ್ಯವಹಾರ ಮೌಲ್ಯದ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು.

ವಿದ್ಯಾರ್ಥಿಗಳು ತಯಾರಿಸಿದ್ಧ ವಿವಿಧ ತಾಂತ್ರಿಕ ಪರಿಕರಗಳ ವಿನ್ಯಾಸಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿಜೇತರಿಗೆ ಬಹುಮಾನವನ್ನು ಕೂಡಾ ನೀಡಲಾಯಿತು. ವಿರೈಸ್ ಸಂಸ್ಥೆಯ ಸಂಸ್ಥಾಪಕ ಆದ್ಯಾ ಮೆಂಡಾ ಅವರು, ‘ಇಂದಿನ ಸಮಾಜದಲ್ಲಿನ ನೈಜ ಸಮಸ್ಯೆಗಳಿಗೆ ನವೀನ ತಾಂತ್ರಿಕ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲು ಈ ಹಸಿರು ಹ್ಯಾಕಾಥಾನ್ ಒಂದು ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು.

ತೆರಿ ಸಂಸ್ಥೆಯ ಸಾಲ್ತಾನತ್ ಖಾಜಿ ಅವರು, ‘ಬೆಂಗಳೂರಿನಲ್ಲಿನ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವುಮೂಡಿಸುವುದು ಈ ಕಾರ್ಯಕ್ರಮದ ದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT