ಅಂತರ್ಜಲ ಕಾಳಜಿಗೆ ಕಾರ್ಯಾಗಾರ

7

ಅಂತರ್ಜಲ ಕಾಳಜಿಗೆ ಕಾರ್ಯಾಗಾರ

Published:
Updated:

ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ ವಿಷಯದ ಕುರಿತು ನ್ಯಾಷನಲ್ ವಾಟರ್ ಮಿಷನ್ ಗುರುವಾರ ಕಾರ್ಯಾಗಾರ ಆಯೋಜಿಸಿದೆ. ಬೆಳಿಗ್ಗೆ 10ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, 10:30ಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

11ಕ್ಕೆ ರಾಷ್ಟ್ರೀಯ ಜಲಮಿಷನ್‌ನ ಸಲಹೆಗಾರ ಡಾ.ಧರ್ಮರಾವ್ ಅವರು ಸ್ವಾಗತ ಭಾಷಣ ಮತ್ತು ರಾಷ್ಟ್ರೀಯ ಜಲಮಿಷನ್ ಕುರಿತು ಮಾತನಾಡಲಿದ್ದಾರೆ. ಮಿಷನ್‌ನ ಜಂಟಿ ನಿರ್ದೇಶಕ ನಿತೀಶ್ ಕುಮಾರ್ ಅವರು ಕಾರ್ಯಾಗಾರದ ಉದ್ದೇಶದ ಕುರಿತು ತಿಳಿಸಲಿದ್ದಾರೆ. 11:30ಕ್ಕೆ ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಇಲಾಖೆಯ ಕಾರ್ಯದರ್ಶಿ ಯು.ಪಿ. ಸಿಂಗ್ ಅವರು, ಭಾರತ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ತಿಳಿಸಿಕೊಡಲಿದ್ದಾರೆ. ಹಾಗೂ ‘ತುಂಗಭದ್ರಾ ಉಪ–ಕೊಳ್ಳದ ಸಮಗ್ರ ನೋಟ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

11.40ಕ್ಕೆ ಕೇಂದ್ರ ಜಲ ಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ನಂತರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ನೀರಿನ ಸಂರಕ್ಷಣೆಗೆ ನರೇಗಾ ಮತ್ತು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿಕೊಡಲಿದ್ದಾರೆ.

ಮಧ್ಯಾಹ್ನ 12ಕ್ಕೆ ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ಮಾತನಾಡಲಿದ್ದಾರೆ. ಸಣ್ಣ ನೀರಾವರಿ ಸಚಿವ, ಸಿ.ಎಸ್. ಪುಟ್ಟರಾಜು ಅವರು, ಅಂತರ್ಜಲ ಹೆಚ್ಚಳ ಮತ್ತು ಇಂಗುಗುಂಡಿಗಳ ನಿರ್ಮಾಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿಕೊಡಲಿದ್ದಾರೆ.  12.20ಕ್ಕೆ ಗಂಟೆಗೆ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !