ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ಕೈಬೀಸಿ ಕರೆಯುವ ಬಿಳಿಗುಡ್ಡ

Last Updated 5 ಜೂನ್ 2022, 5:11 IST
ಅಕ್ಷರ ಗಾತ್ರ

ತಾವರಗೇರಾ: ವೈವಿಧ್ಯಮಯ ಸಸ್ಯಸಿರಿ, ನವಿಲು, ಜಿಂಕೆಗಳ ನರ್ತನ, ಪಕ್ಷಿಗಳ ಇಂಪಾದ ಚಿಲಿಪಿಲಿ...

ಸಮೀಪದ ಮುದ್ದಲಗುಂದಿ122 ಹೆಕ್ಟರ್ ಅರಣ್ಯ ಪ್ರದೇಶದ ಬಿಳಿಗುಡ್ಡದಲ್ಲಿ ಕಂಡು ಬರುವ ದೃಶ್ಯಗಳಿವು.‌

ಮುದೇನೂರು, ರಾಮತ್ನಾಳದಿಂದ ಅಥವಾ ಮುದ್ದಲಗುಂದಿ ಮಾರ್ಗವಾಗಿ ತಾವರಗೇರಿಗೆ ಸಾಗುವ ಮಾರ್ಗದಲ್ಲಿ ಮ್ಯಾದರಡೊಕ್ಕಿ- ಅಮರಾಪುರ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಗುಡ್ಡದ ಪ್ರದೇಶದಲ್ಲಿ ಹಸಿರು ಎದ್ದು ಕಾಣುತ್ತದೆ. ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಶ್ರಮದಿಂದ ಬೆಳೆದು ನಿಂತಿರುವ ಗಿಡ ಮರಗಳು ಗುಡ್ಡಕ್ಕೆ ಹಸಿರ ಹೊದಿಕೆ ಹೊದಿಸಿವೆ.

ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿರುವ ಗುಡ್ಡದ ಪಕ್ಕದಲ್ಲಿ ಸದಾ ಹರಿಯು ಹಳ್ಳದ ಜುಳು ಜುಳು ನೀರು ಮತ್ತು ಸುತ್ತ-ಮುತ್ತಲಿನ ಕೆರೆಗಳಿಂದಾಗಿ ಗುಡ್ಡದಲ್ಲಿ ಸಸಿಗಳು ಬೆಳೆಯಲು ಅನುಕೂಲವಾಗಿದೆ.

ಶಾಲಾ ಮಕ್ಕಳಿಗೆ ಪರಿಸರ ಪಾಠ: ಸುತ್ತಲಿನ ವಿವಿಧ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ ಮತ್ತು ಪರಿಸರ ಅಧ್ಯಯನ ವಿಷಯವನ್ನು ಬೊಧನೆ ಮಾಡುವ ಶಿಕ್ಷಕರು ಈ ತಾಣಕ್ಕೆ ಮಕ್ಕಳನ್ನು ಕರೆತಂದು ವಿವರಣೆ ನೀಡುತ್ತಾರೆ. ಮಕ್ಕಳು ಶಿಕ್ಷಕರು ಗುಡ್ಡ ಸುತ್ತಾಡಿ, ಗುಡ್ಡದ ತುದಿಯಲ್ಲಿ ಕಾಣುವ ಸೂರ್ಯಾಸ್ತವನ್ನು ನೋಡಿ ಸಂತೋಷ ಪಡುತ್ತಾರೆ ಎಂದು ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಮಾತು.

ಹಚ್ಚ ಹಸಿರಿನ ಬೃಹತ್ ಮರಗಳನ್ನು ಹೊಂದಿರುವ ಈ ಅರಣ್ಯವು ಮಲೆನಾಡು ಪ್ರದೇಶ, ದಕ್ಷಿಣ ಕರ್ನಾಟಕ ಸುತ್ತಾಡಿದ ಅನುಭವ ಸಿಗುತ್ತದೆ. ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಯೋಜನೆಗಳು, ನೀರು ,ಮಣ್ಣು ಮರ ಗಿಡಗಳ ಸಂರಕ್ಷಣೆ ಕ್ರಮಗಳನ್ನು ಕೈಗೊಂಡಿದ್ದು, ಸ್ಥಳಿಯ ಗ್ರಾಮಗಳ ಸಹಕಾರದಿಂದ ಅರಣ್ಯ ಪ್ರದೇಶವಾಗಿ ಬೆಳೆಯಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಕಾಳಜಿ ವಹಿಸಿ ಈ ಸ್ಥಳವನ್ನು ಅಭಿವೃದ್ಧಿಪಡಿಸಿದರೆ, ವಲಸೆ ಹಕ್ಕಿಗಳಿಗೆ ವಾಸಸ್ಥಾನವಾಗಿ, ಪ್ರವಾಸಿಗರಿಗೆ ಶುದ್ಧ ಪರಿಸರ ತಾಣವಾಗಬಲ್ಲದು ಎಂಬುದು ಮುದ್ದಲಗುಂದಿ ಗ್ರಾಮಸ್ಥರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT