ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ಶಾಲೆಯ ಅಂದ ಹೆಚ್ಚಿಸಿದ ಉದ್ಯಾನ

Last Updated 5 ಜೂನ್ 2022, 5:11 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕು ಕೇಂದ್ರದಿಂದ 2 ಕಿ.ಮೀ ಅಂತರದ ಹೊಸಳ್ಳಿ ಗ್ರಾಮದ ಬಳಿ ಇರುವ ಕಿತ್ತೂರುರಾಣಿ ಚನ್ನಮ್ಮ ವಸತಿಶಾಲೆಯ ವಾತಾವರಣ ಎಲ್ಲರ ಕಣ್ಮನ ಸೆಲೆಯುತ್ತಿದೆ.‌

ಸುಮಾರು 15ಎಕರೆ ವಿಸ್ತೀರ್ಣದ ಈ ವಸತಿ ಶಾಲೆಯಲ್ಲಿ ವಿವಿಧ ಕಟ್ಟಡಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಆಟದ ಮೈದಾನ ಮತ್ತು ಉದ್ಯಾನ ನಿರ್ಮಾಣಗೊಂಡಿದೆ. ನಿತ್ಯ ಹಸಿರಿನ ಸಿರಿ ನೋಡುಗರ ಕಣ್ಮನ ಸೆಳೆಯುತ್ತಿವೆ.

ಬಗೆ ಬಗೆಯ ಹೂವಿನ ಗಿಡಗಳು, ಅಲಂಕಾರಿಕ ಹಾಗೂ ಔಷಧಿಗುಣವುಳ್ಳ ಸಸ್ಯಗಳು, ಹಣ್ಣಿನ ಗಿಡಗಳು ಹೀಗೆ ವೈವಿಧ್ಯಮಯ ವನಸಿರಿ ಈ ಶಾಲೆಯ ಅಂದ ಹೆಚ್ಚಿಸಿದೆ. 2017-18ನೇ ಸಾಲಿನಲ್ಲಿ ‘ಜಿಲ್ಲಾಮಟ್ಟದ ಹಸಿರು ಶಾಲೆ’ ಎಂಬ ಪ್ರಶಸ್ತಿಯನ್ನೂ ಪಡೆದಿದೆ.

ಶಾಲೆಯಲ್ಲಿ ಅನಾವರಣ ಗೊಳ್ಳುತ್ತಿರುವ ಪರಿಸರ ಪ್ರಜ್ಞೆ, ಮಕ್ಕಳಲ್ಲಿನ ವೈಜ್ಞಾನಿಕ ಮನೋಭಾವ, ಉತ್ತಮ ಕಲಿಕಾ ವಾತಾವರಣ, ಶಾಲೆಯ ಸಮಗ್ರ ಶೈಕ್ಷಣಿಕ ಸಾಧನೆ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆಯಿಂದ ತಾಲ್ಲೂಕಿನಲ್ಲಿಯೇ ಒಂದು ಅಚ್ಚುಮೆಚ್ಚಿನ ವಸತಿ ಶಾಲೆ ಎಂಬ ಹಿರಿಮೆಗೆ ಪಾತ್ರವಾಗಿದೆ‌ ಎಂದು ಮುಖಂಡ ರಾಜಶೇಖರ
ಶ್ಯಾಗೋಟಿ ತಿಳಿಸಿದರು.

ಮನುಷ್ಯನಿಗೆ ಆಮ್ಲಜನದ ಅವಶ್ಯಕತೆ ಎಷ್ಟೆಂಬುದು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತಿದೆ. ಹಾಗೆಯೇ ಆಮ್ಲಜನಕ ಉತ್ಪಾದನೆಗೆ ಪರಿಸರದ ಕೊಡುಗೆ ಎಷ್ಟೆಂಬುದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ ಎಂದು ಪ್ರಾಚಾರ್ಯ ವಿರೂಪಾಕ್ಷಪ್ಪ
ಹನಮಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT