ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಸಮುದ್ರ ದಿನ: ಆಚರಣೆ ಆರಂಭವಾದ್ದು ಯಾವಾಗ, ಏಕೆ?

ಅಕ್ಷರ ಗಾತ್ರ

ಜಿನೀವಾ: ಸಾಗರ ಸಂಪತ್ತಿನ ಸಂರಕ್ಷಣೆಯ ಧ್ಯೇಯವನ್ನಿಟ್ಟುಕೊಂಡು ಪ್ರತಿವರ್ಷ ಜೂನ್ 8ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತಿದೆ.

ಸಾಗರದ ಕುರಿತು ಅರಿವು ಕಾರ್ಯಕ್ರಮಗಳು, ಸಮುದ್ರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಸಾಗರ ಸಂಪತ್ತಿನ ರಕ್ಷಣೆ ಮತ್ತಿತರ ಅನೇಕ ಕಾರ್ಯಕ್ರಮಗಳನ್ನು ಈ ದಿನ ಆಯೋಜಿಸಲಾಗುತ್ತಿದೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ಈ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಆನ್‌ಲೈನ್ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದೆ. 'ಇನ್ನೊವೇಷನ್ ಫಾರ್ ಎ ಸಸ್ಟೈನೇಬಲ್ ಓಶನ್' ಧ್ಯೇಯದೊಂದಿಗೆ ಈ ಬಾರಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ವಿಚಾರ ಮಂಡನೆಗಳು, ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯು ಅಧಿಕೃತ ಜಾಲತಾಣದಲ್ಲಿ ಪ್ರಸಾರ ಮಾಡಲಿದೆ.

ಏನಿದು ಸಮುದ್ರ ದಿನ?: ವಿಶ್ವ ಸಮುದ್ರ ದಿನ ಆಚರಿಸುವ ಬಗ್ಗೆ ಸಾವಿರದ 1992ರಲ್ಲಿ ಕೆನಡಾದ ಸಮುದ್ರ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರ (ಐಸಿಒಡಿ) ಮತ್ತು ಕೆನಡಾದ ಸಾಗರ ಸಂಸ್ಥೆ (ಒಐಸಿ) ವಿಶ್ವಸಂಸ್ಥೆಗೆ ಪ್ರಸ್ತಾವ ಸಲ್ಲಿಸಿದ್ದವು. ಪರಿಸರ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಬ್ರೆಜಿಲ್‌ನಲ್ಲಿ ನಡೆದಿದ್ದ ಭೂ ಶೃಂಗಸಭೆಯಲ್ಲಿ ಈ ಪ್ರಸ್ತಾವ ಸಲ್ಲಿಕೆ ಆಗಿತ್ತು. ಆದರೆ ವಿಶ್ವಸಂಸ್ಥೆಯು 2008ರಲ್ಲಿ ವಿಶ್ವ ಸಾಗರ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT