ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದ ಬರ್ಲಿನ್‌ ಜಲಪಾತ

Last Updated 18 ಸೆಪ್ಟೆಂಬರ್ 2019, 16:11 IST
ಅಕ್ಷರ ಗಾತ್ರ

ಬರ್ಲಿನ್‌ ಜಲಪಾತವು ದಕ್ಷಿಣಾ ಆಫ್ರಿಕಾದಲ್ಲಿದೆ. ಇದರ ಎತ್ತರ 90 ಮೀಟರ್‌.

*ದೊಡ್ಡ ಗಾತ್ರದ ಮೊಂಬತ್ತಿ ಹಚ್ಚಿಟ್ಟಾಗ ಕಾಣುವಂತೆ ಈ ಜಲಪಾತ ಸ್ವರೂಪವಿದ್ದು, ಶಿಲೆಗಳ ನಡುವೆ ಅಗಾಧವಾಗಿ ತುಂಬಿ ಧುಮ್ಮಿಕ್ಕುತ್ತದೆ.

* ಈ ಜಲಪಾತದ ಸುತ್ತ ಹಲವು ಪ್ರವಾಸಿ ತಾಣಗಳಿರುವುದರಿಂದ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ.

* ಸಾಮಾನ್ಯವಾಗಿ ಆಯಾ ಊರಿನ ಜಲಪಾತಗಳಿಗೆ ಸ್ಥಳೀಯ ಹೆಸರಿಡುವುದು ವಾಡಿಕೆ. ಆದರೆ, ದಕ್ಷಿಣಾ ಆಫ್ರಿಕಾದಲ್ಲಿ ಬರ್ಲಿನ್‌ ಹೆಸರು ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ, ಬರ್ಲಿನ್‌ನಿಂದ ಬಂದ ಗಣಿಧಣಿಗಳಿಂದಾಗಿ ಈ ಹೆಸರು ಬಂದಿದೆ.

* ಪಕ್ಷಿಪ್ರಿಯರಿಗೆ ಈ ಜಲಪಾತವೆಂದರೆ ಅಚ್ಚುಮೆಚ್ಚು. ಭಾಗದಲ್ಲಿರುವಷ್ಟು ಪಕ್ಷಿ ಪ್ರಭೇದಗಳನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಪಕ್ಷಿಗಳ ಬಗ್ಗೆ ಮಾಹಿತಿ ಇರುವ ದೊಡ್ಡ ಗಾತ್ರದ ಪುಸ್ತಕಗಳನ್ನು ಹಿಡಿದುಕೊಂಡ ಪಕ್ಷಿಪ್ರಿಯರು ಕಿಲೋ ಮೀಟರ್‌ಗೆ ಒಬ್ಬರಾದರೂ ಸಿಗುವುದು ಈ ಭಾಗದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT