ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ

Last Updated 23 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಸಾ ವಿರಾರು ಮಂದಿ ಒಂದೇ ಕಡೆ ಸೇರಿ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಲಿದ್ದಾರೆ. ಬೆಂಗಳೂರು ಗಣೇಶ ಉತ್ಸವ, ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಏಕಕಾಲದಲ್ಲಿ ತಯಾರಿಸಲಾಗುತ್ತಿದೆ.

ಆಗಸ್ಟ್‌ 25ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. 2 ರಿಂದ 3 ಸಾವಿರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಗಣೇಶ ಮೂರ್ತಿ ತಯಾರಿಕೆಯನ್ನು ಒಂದೇ ಸಮಯಕ್ಕೆ ಆರಂಭಿಸಿ, ಒಂದೇ ಸಮಯಕ್ಕೆ ಮುಗಿಸಲಾಗುತ್ತದೆ. ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.

ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರ ಹಾನಿಯನ್ನು ತಪ್ಪಿಸುವ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುತ್ತಿದೆ. ವಿದ್ಯಾರಣ್ಯ ಯುವಕರ ಸಂಘ, ಗೋ ಗ್ರೀನ್‌ ಸಂಸ್ಥೆಗಳು ಗಣೇಶ ಮೂರ್ತಿ ತಯಾರಿಕೆಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಒದಗಿಸಲಿವೆ. ಸ್ಪರ್ಧಿಗಳಿಗೆ ಸ್ಥಳದಲ್ಲಿಯೇ ಈ ವಸ್ತುಗಳನ್ನು ವಿತರಿಸಲಾಗುತ್ತದೆ. ಆಸಕ್ತಿ ಇದ್ದವರು ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಗಣೇಶ ಮೂರ್ತಿಗಳನ್ನು ತಯಾರಿಸುವ ಮಣ್ಣಿನಲ್ಲಿ ಮೊದಲೇ ಹೂವಿನ ಗಿಡಗಳು ಹಾಗೂ ಹಣ್ಣಿನ ಬೀಜಗಳನ್ನು ಸೇರಿಸಲಾಗಿರುತ್ತದೆ. ಗಣೇಶ ಹಬ್ಬ ಆಚರಿಸುವವರು ತಮ್ಮ ಮನೆಗೆ ಬೇಕಾದ ಮೂರ್ತಿಗಳನ್ನು ಇಲ್ಲಿ ತಾವೇ ತಯಾರಿಸಿಕೊಳ್ಳಬಹುದು. ಮಣ್ಣಿನ ಹೂ ಕುಂಡಗಳನ್ನು ಇಲ್ಲಿ ಉಚಿತವಾಗಿ ಪಡೆದುಕೊಂಡು ಹೋಗಬಹುದು.

ಹಬ್ಬ ಆಚರಿಸಿದ ನಂತರ ಗಣೇಶ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಮಣ್ಣನ್ನು ಹೂಕುಂಡದಲ್ಲಿ ಹಾಕಿಟ್ಟರೆ, ಗಿಡಗಳು ಬೆಳೆಯುತ್ತವೆ. 57ನೇ ಆವೃತ್ತಿಯ ಬೆಂಗಳೂರು ಗಣೇಶೋತ್ಸವ ಸೆಪ್ಟೆಂಬರ್‌ 2ರಿಂದ 12ರವರೆಗೆ ನಡೆಯಲಿದೆ. ಈ ಉತ್ಸವದಲ್ಲೂ ಮಣ್ಣಿನ ಗಣೇಶ ಮೂರ್ತಿಯನ್ನೇ ಬಳಕೆ ಮಾಡಲಾಗುತ್ತಿದೆ.

ಹೆಸರು ನೋಂದಾಯಿಸಿಕೊಳ್ಳಲು: 93420 22070, 95904 43016 ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT