ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊರವಂಕಗಳ ‘ಕದನ’ ಕುತೂಹಲ

Last Updated 3 ಮೇ 2019, 19:45 IST
ಅಕ್ಷರ ಗಾತ್ರ

ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮೈಸೂರು ವಿಶ್ವವಿದ್ಯಾನಿಲಯ ಆವರಣ ಸೇರಿದಂತೆ ಜನವಸತಿ ಪ್ರದೇಶಗಳಲ್ಲೂ ಕಂಡುಬರುವ ಗೊರವಂಕ ಪಕ್ಷಿಯ ಜೀವನ ಕ್ರಮ ಕುತೂಹಲಕಾರಿಯಾಗಿದೆ.

ಗೊರವಂಕ ಎಂದು ಕರೆಯುವ ಕಾಮನ್ ಮೈನಾಕಡು ಕಂದು ಬಣ್ಣ ಹೊಂದಿರುತ್ತದೆ. ಇದರ ತಲೆ ಕಪ್ಪು, ಕಣ್ಣಿನ ಬದಿಯಲ್ಲಿ ಹಳದಿ ಸೋಗೆಯಂತೆ ಕಂಡು ಬರುತ್ತದೆ. ಇತರ ಭಾಗ ಕಡು ಕಂದು, ಹೊಟ್ಟೆ ಮಾಸಲು ಬಿಳಿ, ರೆಕ್ಕೆ ಹಾಗೂ ಬಾಲದ ಮೇಲೆ ಕಪ್ಪು ಬಣ್ಣ ಕಂಡು ಬರುತ್ತದೆ. ಕೊಕ್ಕು ಮತ್ತು ಕಾಲುಗಳು ಹಳದಿ, ಹಾರುವಾಗ ರೆಕ್ಕೆ ಮೇಲಿನ ಬಿಳಿ ಪುಕ್ಕಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಇವು ಹೆಚ್ಚಾಗಿ ಕುರುಚಲು ಕಾಡು, ಜನವಸತಿ ಪ್ರದೇಶದಲ್ಲಿ ಕಂಡು ಬರುತ್ತವೆ. ವಿಶೇಷ ಎಂದರೆ ವಿವಿಧ ರೀತಿಯಲ್ಲಿ ಕೂಗುತ್ತವೆ. ಕಡ್ಡಿ, ಬೇರು, ನಾರು ಹಾಗೂ ಕಾಗದದ ಚೂರುಗಳನ್ನು ಸೇರಿಸಿ ಪೊಟರೆ ಅಥವಾ ಕಟ್ಟಡಗಳ ಸಂದುಗಳಲ್ಲಿ ಗೂಡನ್ನು ಕಟ್ಟಿಕೊಳ್ಳುತ್ತವೆ. ಏಪ್ರಿಲ್‌ನಿಂದ ಆಗಸ್ಟ್‌ ತಿಂಗಳಲ್ಲಿ 4ರಿಂದ 5 ತಿಳಿ ನೀಲಿ ಮೊಟ್ಟೆಗಳಿಗೆ ಸುಮಾರು 13ರಿಂದ 14 ದಿನಗಳವರೆಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಈ ಹಕ್ಕಿಗಳು ಆಕ್ರಮಣಶೀಲ ಸ್ವಭಾವ ಹೊಂದಿದ್ದು, ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತವೆ. ವಾತಾವರಣ ವೈಪರೀತ್ಯಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

ನಿರಾತಂಕದಿಂದ ಊರೊಳಗೇ ಇದ್ದುಕೊಂಡು ಮನುಷ್ಯರು ಎಸೆದ ತಿಂಡಿ, ತಿನಿಸು ಮತ್ತು ಕ್ರಿಮಿ-ಕೀಟ, ಹಣ್ಣುಗಳನ್ನು ತಿನ್ನುತ್ತವೆ. ಇವುಗಳನ್ನು ಉಣ್ಣೆಗೊರವನ ಹಕ್ಕಿ, ಸಾರಿಕೆ, ಸಾವಳಿ, ಹುನಗಲಕ್ಕಿ, ಗೋರಿಂಕ ಎಂಬ ಇನ್ನಿತರೆ ಹೆಸರುಗಳಿಂದ ಕರೆಯುತ್ತಾರೆ.

ಭಾರತ ಮಾತ್ರವಲ್ಲದೇ ಚೀನಾ, ಇರಾನ್‌ ಹಾಗೂ ಮಲೇಷಿಯಾ ಭಾಗಗಳಲ್ಲೂ ಕಂಡುಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT