ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಲಿಮಂಜಾರೊ ಏರಿದ ನಗರ ವಿದ್ಯಾರ್ಥಿಗಳು

kilimanjaro
Last Updated 5 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಆಫ್ರಿಕಾದ ಅತಿ ಎತ್ತರದ ಪರ್ವತಶ್ರೇಣಿ ಮೌಂಟ್ ಕಿಲಿಮಂಜಾರೊವನ್ನು ಏರಿ ಸಾಹಸ ಪ್ರದರ್ಶಿಸಿದ್ದಾರೆ.

ವಿಶ್ವದ ಏಳು ಅತಿಎತ್ತರದ ಗಿರಿಶಿಖರಗಳಲ್ಲಿ ಒಂದಾಗಿರುವ ಕಿಲಿಮಂಜಾರೊದ 5895 ಮೀಟರ್ ಎತ್ತರದ ಉರು ಗಿರಿಯನ್ನು ಹನ್ನೊಂದು ವಿದ್ಯಾರ್ಥಿಗಳ ತಂಡ ಯಶಸ್ವಿಯಾಗಿ ಏರಿತು.

ಆರು ವಿದ್ಯಾರ್ಥಿನಿಯರನ್ನೂ ಒಳಗೊಂಡ ಈ ತಂಡಕಳೆದ ಜನವರಿ 18ರಂದು ಹತ್ತು ದಿನಗಳ ಸಾಹಸಯಾತ್ರೆ ಕೈಗೊಂಡಿತ್ತು. ಈ ತಂಡದ ಸಾಹತ್ ಪೊದ್ದಾರ್ (8ನೇ ತರಗತಿ), ಗೀತಾ ದಮರಪತಿ, ಸಾನಿಯಾ ಪಟೇಲ್ ಮತ್ತು ಪ್ರೇರಣಾ ಅಗರವಾಲ್ (ಎಲ್ಲರೂ ಪ್ರಥಮ ಪಿಯುಸಿ) ಈ ಸಾಹಸದಲ್ಲಿ ಯಶಸ್ವಿಯಾದರು.

‘ಏನೇ ಆದರೂ ಕಿಲಿಮಂಜಾರೊದ ಅತಿ ಎತ್ತರದ ಶಿಖರ ಏರಲೇಬೇಕೆನ್ನುವುದು ನನ್ನ ಸಂಕಲ್ಪವಾಗಿತ್ತು. ಶಿಕ್ಷಕರು ಮತ್ತು ಮಾರ್ಗದರ್ಶಕರು ಸ್ಫೂರ್ತಿ ಹೆಚ್ಚಿಸಿದರು. ಬಹುದೊಡ್ಡ ಕನಸೊಂದು ಈಗ ನನಸಾಗಿದೆ’ ಎಂದು ಪ್ರೇರಣಾಅಗರವಾಲ್ ಸಂತಸ ಹಂಚಿಕೊಂಡರು.

‘ಶಿಖರ ಏರುವಾಗಿನ ಪ್ರತಿಕೂಲ ವಾತಾವರಣದಂಥ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗುವುದು ಹೇಗೆ ಎಂಬ ಛಲ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಯಿತು’ ಎಂದು ಸಾಹಸ ಯಾತ್ರೆಯ ನೇತೃತ್ವ ವಹಿಸಿದ್ದ ಇಂಡಸ್ ಸ್ಕೂಲ್‌ನ ತರಬೇತುದಾರರಾದ ಮಿತೇಶ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT