ಶನಿವಾರ, ಸೆಪ್ಟೆಂಬರ್ 25, 2021
29 °C

Video ನೋಡಿ; 12 ವರ್ಷಕ್ಕೊಮ್ಮೆ ಅರಳುವ ನೀಲಕುರಂಜಿ ಹೂವಿನ ಸೊಬಗು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು; ಭೂ ಸೌಂದರ್ಯದ ಸೊಬಗಿಗೆ ಸಾಟಿಯಿಲ್ಲ. ಅದರಲ್ಲೂ ಧರೆಯಲ್ಲಿ ಅರಳುವ ಹೂವುಗಳು ಚೆಲುವಿನ ಬಲೆಯನ್ನು ಹೆಣೆಯುತ್ತವೆ.

12 ವರ್ಷಕ್ಕೊಮ್ಮೆ ಅರಳುವ ಅಪರೂಪದ ಮತ್ತು ಭಾರತದಲ್ಲಿ ಮಾತ್ರ ಕಾಣಸಿಗುವ ನೀಲಕುರಂಜಿ ಹೂವು ಸದ್ಯ ಪಶ್ಚಿಮ ಘಟ್ಟಗಳ ಕೇರಳದ ಶಾಲೋಮ್ ಬೆಟ್ಟಗಳ ಶ್ರೇಣಿಯಲ್ಲಿ ಅರಳಿ ನಿಂತಿದ್ದು, ಸುಂದರ ಸೊಬಗನ್ನು ಸೃಷ್ಟಿಸಿದೆ.

ಕೇರಳದ ಸಂತಾನಪುರದ 12 ಎಕರೆ ವ್ಯಾಪ್ತಿಯ ಶಾಲೋಮ್ ಬೆಟ್ಟಗಳಲ್ಲಿ ಈ ಅಪರೂಪದ ಹೂವು ಅರಳಿ ನಿಂತಿವೆ. ಇದಕ್ಕೆ ಇಂಗ್ಲಿಷ್ ನಲ್ಲಿ Strobilanthes Kunthiana ಎನ್ನುತ್ತಾರೆ. ಸದ್ಯ ಕೋವಿಡ್ ಇರುವುದರಿಂದ ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಹೂಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿಲ್ಲ.

ಇದು ಭಾರತದ ಪಶ್ಚಿಮ ಘಟ್ಟಗಳನ್ನು ಹೊರತುಪಡಿಸಿ ಪ್ರಪಂಚದ ಯಾವುದೇ ಕಡೆ ಅರಳುವುದಿಲ್ಲ. ತಮಿಳುನಾಡಿನ ನೀಲಗಿರಿಗಳಲ್ಲಿ, ಕೇರಳದ ಮನ್ನಾರನಲ್ಲಿ ಹಾಗೂ ಕರ್ನಾಟಕದ ಮುಳ್ಳಯ್ಯನಗಿರಿಯಲ್ಲಿ ಅರಳುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು