ವಿಜ್ಞಾನ ಪ್ರಪಂಚದಲ್ಲಿ ಒಂದು ಸುತ್ತು...

7
ವಿಜ್ಞಾನ ವಿಶೇಷ

ವಿಜ್ಞಾನ ಪ್ರಪಂಚದಲ್ಲಿ ಒಂದು ಸುತ್ತು...

Published:
Updated:

1. ‘ಹಣ್ಣುಗಳ ರಾಜ’ ಎಂದೇ ಹೆಸರಾಗಿರುವ ಮಾವಿನ ಹಣ್ಣಿನ ವೃಕ್ಷವೊಂದು ಚಿತ್ರ-1ರಲ್ಲಿದೆ. ಸಸ್ಯ ಲೋಕದಲ್ಲಿ ಹಣ್ಣು ಬಿಡುವ ಗಿಡಗಳಿವೆ, ಬಳ್ಳಿಗಳಿವೆ, ಬಹು ವಾರ್ಷಿಕ ವೃಕ್ಷಗಳೂ ಇವೆ. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ಯಾವ ಹಣ್ಣುಗಳು ಮಾವಿನ ಫಲದಂತೆ ವೃಕ್ಷದಲ್ಲಿ ಬಿಡುತ್ತವೆ - ಗುರುತಿಸಿ:
ಅ. ದಾಳಿಂಬೆ→ಬ. ನೇರಳೆ
ಕ. ದ್ರಾಕ್ಷಿ→→ಡ. ಹಲಸು
ಇ. ಸೀಬೆ→→ಈ. ಅತ್ತಿ
ಉ. ಬಾಳೆ→ಟ. ಸೇಬು
ಣ. ಕಲ್ಲಂಗಡಿ→ಸ. ಪರಂಗಿ

2. ಧರೆಯ ಅತ್ಯಂತ ಪ್ರಸಿದ್ಧ ನದಿಗಳಲ್ಲೊಂದಾದ ‘ನೈಲ್’ನ ಒಂದು ದೃಶ್ಯ ಚಿತ್ರ-2ರಲ್ಲಿದೆ. ನೈಲ್ ನದಿ ಕುರಿತ ಈ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಾ?
ಅ. ಈ ನದಿ ಯಾವ ಭೂ ಖಂಡದಲ್ಲಿ ಹರಿಯುತ್ತಿದೆ?
ಬ. ಈ ನದಿಯ ದಂಡೆಯಲ್ಲಿ ನಿರ್ಮಿಸಲಾಗಿರುವ ‘ಪ್ರಾಚೀನ ಜಗತ್ತಿನ ಸಪ್ತ ವಿಸ್ಮಯ’ಗಳಲ್ಲೊಂದು ಯಾವುದು?
ಕ. ಈ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಬೃಹತ್ ಅಣೆಕಟ್ಟು ಯಾವುದು?

3. ಸುಂದರ ಕಡಲ ತೀರದ ದೃಶ್ಯವೊಂದು ಚಿತ್ರ-3ರಲ್ಲಿದೆ. ಇಲ್ಲಿ ಹೆಸರಿಸಿರುವ ನಮ್ಮ ದೇಶದ ಕೆಲವು ನಗರಗಳಲ್ಲಿ ಯಾವುವು ಸಾಗರ ತೀರದಲ್ಲಿವೆ?
ಅ. ಕೊಚ್ಚಿ→ಬ. ಭೂಪಾಲ್
ಕ. ಹೈದರಾಬಾದ್→ಡ. ವಿಶಾಖಪಟ್ಟಣ
ಇ. ಆಗ್ರಾ→→ಈ ಲಖನೌ
ಉ. ಮಂಗಳೂರು→ಟ. ಚೆನ್ನೈ
ಣ. ಭುವನೇಶ್ವರ

4. ಕೆರೆ, ಕುಂಟೆ ಇತ್ಯಾದಿ ಜಲಾವಾರಗಳ ನೀರಿನ ಮೇಲ್ಮೈಯನ್ನು ಆವರಿಸಿ ಬೆಳೆವ ಹಸಿರು ಬಣ್ಣದ ಕೆನೆ ಪದರವನ್ನು ನೀವೂ ಗಮನಿಸಿರಬಹುದು (ಚಿತ್ರ-4). ಇಂಥ ಪದರವನ್ನು ರೂಪಿಸುವ ಸೂಕ್ಷ್ಮ ಜೀವಿ ಇವುಗಳಲ್ಲಿ ಯಾವುದು?
ಅ. ಪಾಚಿ ಸಸ್ಯ
ಬ. ಸಯನೋ ಬ್ಯಾಕ್ಟೀರಿಯಾ
ಕ. ಕೋಲಿಫಾರ್ಮ್ ಬ್ಯಾಕ್ಟೀರಿಯಾ
ಡ. ಶಿಲೀಂಧ್ರ

5. ಮತ್ತೆ ಮತ್ತೆ ಬಳಸಬಹುದಾದ ಪ್ರಥಮ ವ್ಯೋಮ ವಾಹನ ‘ಸ್ಪೇಸ್ ಶಟ್ಲ್’ ಚಿತ್ರ-5ರಲ್ಲಿದೆ. ಅತ್ಯದ್ಭುತ ಸಾಧನಗಳಾಗಿದ್ದ ಸ್ಪೇಸ್ ಶಟ್ಲ್‌ಗಳು ಬಳಕೆಯಲ್ಲಿದ್ದ ಅವಧಿ ಯಾವುದು ಗೊತ್ತೇ?
ಅ. 1957 ರಿಂದ 1995
ಬ. 1975 ರಿಂದ 2005
ಕ. 1982 ರಿಂದ 2011
ಡ. 1985 ರಿಂದ 2015

6. ವ್ಯೋಮ ಯಾನದ ಒಂದು ನಿರ್ಮಿತಿ ಚಿತ್ರ-6ರಲ್ಲಿದೆ. ಇಂಥ ನಿರ್ಮಿತಿಗಳಲ್ಲಿ ಎರಡು ವಿಧಗಳಿವೆ: ‘ಕೃತಕ ಉಪಗ್ರಹ ಮತ್ತು ವ್ಯೋಮ ನೌಕೆ’. ಈ ಪಟ್ಟಿಯಲ್ಲಿ ವ್ಯೋಮ ನೌಕೆಗಳು ಯಾವುವು?
ಅ. ಗೆಲಿಲಿಯೋ
ಬ. ಹಬಲ್ ಸ್ಪೇಸ್ ಟೆಲಿಸ್ಕೋಪ್
ಕ. ಜ್ಯೂನೋ→ಡ. ವಾಯೇಜರ್
ಇ. ಅಪೋಲೊ→ಈ. ನಿಂಬಸ್
ಉ. ಐ.ಎಸ್.ಎಸ್→ಟ. ಕ್ಯಾಸಿನೀ
ಣ. ಇನ್ಸ್ಯಾಟ್

7. ಒಂದು ಗ್ಯಾಲಕ್ಸಿ ಮತ್ತು ಅದರ ಕೆಲವು ಉಪಗ್ರಹ ಗ್ಯಾಲಕ್ಸಿಗಳ ಚಿತ್ರ ಇಲ್ಲಿದೆ (ಚಿತ್ರ-7):
ಅ. ನಮ್ಮ ಸೌರವ್ಯೂಹ ಇರುವ ಗ್ಯಾಲಕ್ಸಿಯ ಹೆಸರೇನು?
ಬ. ನಮ್ಮ ಗ್ಯಾಲಕ್ಸಿಯ ಅತ್ಯಂತ ಸನಿಹದಲ್ಲಿರುವ ಎರಡು ಉಪಗ್ರಹ ಗ್ಯಾಲಕ್ಸಿಗಳು ಯಾವುವು?

8. ‘ಹುಳಿ ಹಣ್ಣು’ಗಳ (ಸಿಟ್ರಸ್ ಫ್ರೂಟ್ಸ್) ಒಂದು ಪ್ರಸಿದ್ಧ ಬಗೆಯಾದ ಕಿತ್ತಳೆ ಚಿತ್ರ -8ರಲ್ಲಿದೆ. ಇಲ್ಲಿನ ಪಟ್ಟಿಯಲ್ಲಿರುವ ಹುಳಿ ಹಣ್ಣುಗಳನ್ನು ಗುರುತಿಸಿ:
ಅ. ನಿಂಬೆ→ಬ. ದ್ರಾಕ್ಷಿ
ಕ. ಸಪೋಟ→ಡ. ಚಕ್ಕೋತ
ಇ. ದಾಳಿಂಬೆ→ಈ. ಮೂಸಂಬಿ
ಉ. ಹೇರಳೆ

9. ಆಧುನಿಕ ಸಮರ ಜಲಾಂತರ್ಗಾಮಿಯೊಂದು ಚಿತ್ರ-9ರಲ್ಲಿದೆ. ಇಂಥ ಆಧುನಿಕ ಬೃಹತ್ ಜಲಾಂತರ್ಗಾಮಿಗಳಲ್ಲಿ ಬಳಸಲಾಗುವ ಶಕ್ತಿ ಮೂಲ ಯಾವುದು?
ಅ. ಬೈಜಿಕ ಇಂಧನ
ಬ. ಡೀಸೆಲ್
ಕ. ಪ್ಯಾರಾಫಿನ್ ಇಂಧನ
ಡ. ಕಲ್ಲಿದ್ದಿಲು

10. ಕಡಲಲ್ಲಿ ತಲೆ ಎತ್ತಿರುವ ಸುಂದರ ದ್ವೀಪವೊಂದು ಚಿತ್ರ-10ರಲ್ಲಿದೆ. ಧರೆಯ ಅತ್ಯಂತ ಪ್ರಸಿದ್ಧ ದ್ವೀಪ/ದ್ವೀಪಸ್ತೋಮಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಲಾಗಿದೆ. ಈ ದ್ವೀಪಗಳು ಯಾವ ಯಾವ ಸಾಗರ ಪ್ರದೇಶದಲ್ಲಿವೆ?

ಅ. ನ್ಯೂಜಿಲೆಂಡ್
ಬ. ಫಾಲ್ಕ್ ಲ್ಯಾಂಡ್ ದ್ವೀಪಗಳು
ಕ. ಐಸ್ ಲ್ಯಾಂಡ್→ಡ. ಮಡಗಾಸ್ಕರ್
ಇ. ಹವಾಯ್ ದ್ವೀಪಗಳು ಈ. ಶ್ರೀಲಂಕಾ

11. ವಿಚಿತ್ರ ರೂಪದ ಸಾಗರವಾಸಿ ಪ್ರಾಣಿಯೊಂದು ಚಿತ್ರ -11ರಲ್ಲಿದೆ. ಈ ಪ್ರಾಣಿಯನ್ನು ಗುರುತಿಸಬಲ್ಲಿರಾ?
ಅ. ಚಿಪ್ಪು ಮೀನು→ಬ. ಲಾಳ ಏಡಿ
ಕ. ಲಾಬ್ ಸ್ಟರ್→ಡ. ಕಡಲಾಮೆ ಮರಿ

‌12. ದೈತ್ಯಾಕಾರದ, ಸ್ತನಿ ವರ್ಗದ, ಸಾಗರ ಪ್ರಾಣಿ ತಿಮಿಂಗಿಲವೊಂದು ಚಿತ್ರ-12ರಲ್ಲಿದೆ. ಇಲ್ಲಿ ಕೊಟ್ಟಿರುವ ನಿರೂಪಣೆಗಳು ಸೂಚಿಸುತ್ತಿರುವ ತಿಮಿಂಗಿಲ ವಿಧಗಳನ್ನು ಹೆಸರಿಸಿ:
ಅ. ಅತ್ಯಂತ ದೈತ್ಯ ಶರೀರದ ತಿಮಿಂಗಿಲ
ಬ. ಬೆಳ್ಳನೆಯ ಬಣ್ಣದ ತಿಮಿಂಗಿಲ
ಕ. ಸಂಕೀರ್ಣ ‘ಹಾಡು’ಗಳ ಮೂಲಕ ಸಂಭಾಷಿಸುವ ತಿಮಿಂಗಿಲ
ಡ. ಈಟಿಯಂಥ ದಂತವನ್ನು ಹೊಂದಿರುವ ತಿಮಿಂಗಿಲ

13. ಚಿತ್ರ-13 ಮತ್ತು ಚಿತ್ರ-14ರಲ್ಲಿರುವ ದ್ವಿವಿಧ ಅತಿ ಪರಿಚಿತ ಪ್ರಾಣಿಗಳನ್ನೂ ಗಮನಿಸಿ. ಈ ಎರಡೂ ವಿಧ ಪ್ರಾಣಿಗಳಿಗೆ ಅನ್ವಯವಾಗುವ ಸಾಮಾನ್ಯ ಗುಣಗಳ ಈ ಪಟ್ಟಿಯಲ್ಲಿ ಯಾವ ಹೇಳಿಕೆ ಸರಿ ಇಲ್ಲ?
ಅ. ಇವೆರಡೂ ಸರೀಸೃಪಗಳಾಗಿವೆ
ಬ. ಈ ಎರಡು ಬಗೆಗಳೂ ‘ಶೀತ ರಕ್ತ ಪ್ರಾಣಿ’ಗಳಾಗಿವೆ 
ಕ. ಈ ಎರಡೂ ವಿಧಗಳ ಪ್ರಾಣಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ.
ಡ. ಈ ಇಬ್ಬಗೆಗಳ ಎಲ್ಲ ಪ್ರಾಣಿಗಳೂ ವಿಷಯುಕ್ತವಾಗಿವೆ

ಉತ್ತರಗಳು:
1. ಬ, ಡ, ಇ, ಈ ಮತ್ತು ಟ
2. ಅ. ಆಫ್ರಿಕಾ ಖಂಡ; ಬ. ಗೋರಿ ಪಿರಮಿಡ್‌ಗಳು; ಕ. ಹೈ ಆಸ್ವಾನ್ ಅಣೆಕಟ್ಟು
3. ಅ, ಡ, ಉ, ಟ ಮತ್ತು ಣ
4. ಬ. ಸಯನೋ ಬ್ಯಾಕ್ಟೀರಿಯಾ
5. ಕ. 1982 ರಿಂದ 2011
6. ಅ, ಕ, ಡ, ಇ ಮತ್ತು ಟ
7. ಅ. ಕ್ಷೀರ ಪಥ; ಬ. ದೊಡ್ಡ ಮತ್ತು ಚಿಕ್ಕ ಮ್ಯಾಜಲಾನ್ ಮೋಡಗಳು
8. ಅ, ಡ, ಈ ಮತ್ತು ಉ
9. ಅ. ಬೈಜಿಕ ಇಂಧನ
10. ಪೆಸಿಫಿಕ್ ಸಾಗರ: ಅ ಮತ್ತು ಇ ಅಟ್ಲಾಂಟಿಕ್ ಸಾಗರ: ಬ ಮತ್ತು ಕ ಹಿಂದೂ ಮಹಾಸಾಗರ: ಡ ಮತ್ತು ಈ
11. ಬ. ಲಾಳ ಏಡಿ
12. ಅ. ನೀಲಿ ತಿಮಿಂಗಿಲ; ಬ. ಬೆಲ್ಯೂಗಾ ತಿಮಿಂಗಿಲ; ಕ. ಗೂನು ಬೆನ್ನು ತಿಮಿಂಗಿಲ (ಹಂಪ್ ಬ್ಯಾಕ್ ವ್ಹೇಲ್) ಡ. ನಾರ್ವಾಲ್
13. ‘ಡ’ ತಪ್ಪು ಹೇಳಿಕೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !