ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟುಗ್ಲೆ ಜಲಪಾತ

Last Updated 17 ಸೆಪ್ಟೆಂಬರ್ 2019, 16:11 IST
ಅಕ್ಷರ ಗಾತ್ರ

ದಕ್ಷಿಣ ಆಫ್ರಿಕಾದ ಟುಗ್ಲೆ ಜಲಪಾತವು ತನ್ನ ರುದ್ರ ರಮಣೀಯ ಸೌಂದರ್ಯದಿಂದಲೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಮೂಲಾಧಾರವೇ ಟುಗ್ಲೆ ನದಿ. ಡ್ರೇಕನ್ಸ್‌ಬರ್ಗ್‌ ಶಿಲೆಯಲ್ಲಿ ಈ ನದಿಯು ಹುಟ್ಟುತ್ತದೆ.

ಇದು ರಾಯಲ್‌ ನಟಲ್‌ ರಾಷ್ಟ್ರೀಯ ಉದ್ಯಾನದಲ್ಲಿದೆ. 1.350 ಅಡಿ ಎತ್ತರದಿಂದ ಈ ಜಲಪಾತ ಧುಮ್ಮಿಕ್ಕುತ್ತದೆ. ಇದರ ಬಗ್ಗೆ ಮಾಹಿತಿ ಪಡೆಯೋಣ.

* ಟುಗ್ಲೆ ನದಿಯು ವರ್ಷದಾದ್ಯಂತ ರಭಸವಾಗಿಯೇ ಹರಿಯುತ್ತದೆ. ಆದರೆ, ಬೇಸಿಗೆಯಲ್ಲಿ ಮಾತ್ರ ಹರಿವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇರುತ್ತದೆ.

* ಶಿಲೆಯಿಂದ ಧುಮ್ಮಿಕ್ಕುವ ನೀರು ಹಲವು ಕಿರುಜಲಪಾತಗಳಾಗಿ ರೂಪುಗೊಳ್ಳುತ್ತದೆ.

* ಚಳಿಗಾಲದಲ್ಲಿ ಶಿಲೆಯ ತಲೆಯ ಭಾಗದಲ್ಲಿರುವ ನೀರು ಮಂಜಿನ ಆವೃತ್ತಗೊಂಡಿರುತ್ತದೆ. ಹಾಗಾಗಿ ಕೊರೆಯುವಷ್ಟು ತಣ್ಣಗಿರುತ್ತದೆ. ಮಳೆಗಾಲದಲ್ಲಿ ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಮಾರ್ಗದಲ್ಲಿಯೇ ಜಲಪಾತ ಸ್ಪಷ್ಟವಾಗಿ ಕಾಣುತ್ತದೆ.

* ಈ ಜಲಪಾತದ ಸುತ್ತ ಅಪಾರ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT