ಅಸಂತಾಪುರ ಶಾಲೆಯಲ್ಲಿ ಪರಿಸರ ಪ್ರೀತಿ..!

7

ಅಸಂತಾಪುರ ಶಾಲೆಯಲ್ಲಿ ಪರಿಸರ ಪ್ರೀತಿ..!

Published:
Updated:
Deccan Herald

ದೇವರಹಿಪ್ಪರಗಿ: ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಹಸಿರಿನ ಸ್ವಾಗತ. ಸೂರ್ಯನ ಕಿರಣಗಳು ಭುವಿಗೆ ಸ್ಪರ್ಶಿಸದಷ್ಟು ಮರ–ಗಿಡಗಳ ಹೊದಿಕೆ.

ಎತ್ತ ನೋಡಿದರೂ ಅಶೋಕ ಗಿಡಗಳು. ಶಾಲಾ ಆವರಣದ ಸುತ್ತಲೂ ತೆಂಗು... ಅಕ್ಷರಶಃ ಮಲೆನಾಡಿನ ಪರಿಸರ ನೆನಪಿಸುವ ವಾತಾವರಣ... ಇದು 1950ರಲ್ಲಿ ಆರಂಭಗೊಂಡ ಅಸಂತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಚಿತ್ರಣ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 56 ಗಂಡು, 70 ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ. ಸಕಲ ಸೌಲಭ್ಯಗಳು ಈ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಐವರು ಶಿಕ್ಷಕರ ಬೋಧನೆ ನಡೆದಿದೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ಸಿ.ಬಿ.ಗಡಗಿ.

‘ಈ ಮೊದಲು ನಮ್ಮ ಶಾಲೆ ಎಲ್ಲ ಶಾಲೆಗಳಿಗಿಂತ ಭಿನ್ನವಾಗಿರಲಿಲ್ಲ. ಹತ್ತರಲ್ಲಿ ಹನ್ನೊಂದು ಆಗಿತ್ತು. ಊರವರ ಸಹಕಾರದ ಫಲ ಇದೀಗ ಹಸಿರುಮಯವಾಗಿದೆ. ಎಲ್ಲರ ಚಿತ್ತ ಇತ್ತ ಒಮ್ಮೆ ಹಾಯುವಂತಿದೆ.

ಆರಂಭದಲ್ಲಿ ಸಸಿ ನೆಟ್ಟೆವು. ಪೋಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊತ್ತುಕೊಂಡರು. ಈ ಪರಂಪರೆ ಇಂದಿಗೂ ಮುಂದುವರೆದಿದೆ. ಇದರ ಪರಿಣಾಮ ಮಕ್ಕಳಲ್ಲಿ ಪರಿಸರ ಪ್ರೀತಿ ಚಿಗುರಿದೆ. ಕಾಳಜಿ ಮೈಗೂಡಿದೆ. ಶಾಲಾ ಆವರಣವೂ ಹಸಿರಿನಿಂದ ಕಂಗೊಳಿಸುತ್ತಿದೆ.

ಇದೀಗ ಗಿಡಗಳ ಆರೈಕೆಗಾಗಿ ಮಹಿಳಾ ಸಿಬ್ಬಂದಿಯೊಬ್ಬರನ್ನು ನೇಮಿಸಿಕೊಂಡು, ಸಿಬ್ಬಂದಿಯೇ ತಿಂಗಳಿಗೆ ₹ 2500 ಪಗಾರ ನೀಡುತ್ತಿದ್ದೇವೆ. ಶಾಲೆಯ ಆವರಣದ ಪರಿಸರ ಎಲ್ಲರನ್ನೂ ಮನಸೂರೆಗೊಳ್ಳುತ್ತಿದೆ’ ಎಂದು ಗಡಗಿ ಹೇಳಿದರು.

‘ನಾವು ಬಡವರು. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮುಖ್ಯವಾಗಿ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ನಮ್ಮೂರ ಶಾಲೆಗೆ ಸಕಲ ನೆರವು ನೀಡುತ್ತಿದ್ದೇವೆ. ಸಲಾದಹಳ್ಳಿ, ಬೂದಿಹಾಳ, ಹಾಳಗುಂಡಕನಾಳ, ಆನೆಮಡು, ಚಟ್ನಳ್ಳಿ ಗ್ರಾಮಗಳಿಗೆ ಅಸಂತಾಪುರ ಹತ್ತಿರದಲ್ಲಿರುವುದರಿಂದ, ಗ್ರಾಮದಲ್ಲೇ ಸರ್ಕಾರಿ ಪ್ರೌಢಶಾಲೆ ಆರಂಭಿಸಿದರೇ ಒಳ್ಳೆಯದಾಗಲಿದೆ’ ಎನ್ನುತ್ತಾರೆ ನಬಿಸಾಬ್ ಹೊನ್ನಳ್ಳಿ, ಚಂದಾಸಾಬ್ ನಾಯ್ಕೋಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !