ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು– ಹಲಸಿನ ಮೇಳ

Last Updated 31 ಮೇ 2019, 19:45 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಾವಿನ ತಳಿಗಳಿವೆ. ನಮ್ಮ ರಾಜ್ಯದಲ್ಲೇ 750 ಮಾವಿನ ತಳಿಗಳನ್ನು ಗುರುತಿಸಬಹುದು. ಅಷ್ಟೇ ಅಲ್ಲ, ಹಲಸಿನಲ್ಲೂ 110ಕ್ಕೂ ಹೆಚ್ಚು ತಳಿಗಳನ್ನು ಗುರುತಿಸಲಾಗಿದೆ...!

ಮಾವು–ಹಲಸಿನ ತಳಿ ವೈವಿಧ್ಯದ ’ಸಂಖ್ಯೆ’ ಕೇಳಿ ಅಚ್ಚರಿಯಾಯಿತಲ್ಲವಾ.

ಇದು ಅಚ್ಚರಿಪಡುವ ವಿಷಯವೇ. ಇಷ್ಟೆಲ್ಲ ತಳಿಗಳಿದ್ದರೂ, ಅವುಗಳ ಬಗ್ಗೆ ಜನರಿಗೆ ಪರಿಚಯವಿರುವುದು ಬೆರಳೆಣಿಕೆಯಷ್ಟು ಮಾತ್ರ. ಇತ್ತೀಚೆಗಿನ ಪೀಳಿಗೆಗಂತೂ ಈ ತಳಿವೈವಿಧ್ಯದ ಜ್ಞಾನವೂ ಅಷ್ಟಕ್ಕಷ್ಟೇ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮಾವು – ಹಲಸಿನ ತಳಿ ವೈವಿಧ್ಯದ ’ಮಾಹಿತಿ’ ರುಚಿ ತೋರಿಸುವುದರ ಜತೆಗೆ, ಕೆಲವು ತಳಿ ನೈಜ ರುಚಿಯನ್ನು ಉಣಬಡಿಸುವುದಕ್ಕಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಜಂಟಿಯಾಗಿ, ಇಂದು ಮತ್ತು ನಾಳೆ ನಗರದ ಚಿತ್ರಕಲಾಪರಿಷತ್ ಆವರಣದಲ್ಲಿ ‘ಮಾವು ಮತ್ತು ಹಲಸು ವೈವಿಧ್ಯ ಮೇಳ’ವನ್ನು ಆಯೋಜಿಸುತ್ತಿದೆ.

ಈ ಮೇಳದಲ್ಲಿ ಮುನ್ನೂರು ಮಾವಿನ ತಳಿಗಳ ಸಸಿಗಳು, 80 ವಿವಿಧ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಸಸಿಗಳ ಜತೆಗೆ, ಕೆಲವು ವೆರೈಟಿ ಹಣ್ಣುಗಳನ್ನು ಮಾರಾಟಕ್ಕೂ ಇಡಲಾಗುತ್ತಿದೆ. ತೋಟಗಾರಿಕಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆದ ಇಬ್ಬರು ಮಾವು ಬೆಳೆಗಾರರು ಹಣ್ಣುಗಳ ಮಾರಾಟ ಮಳಿಗೆ ತೆರೆಯುತ್ತಿದ್ದಾರೆ. ಬಾದಾಮಿ, ತೋತಾಪುರಿ, ಮಲ್ಲಿಕಾ ಮತ್ತು ರಸಪುರಿಯಂತಹ ತಳಿಗಳನ್ನು ಮಾರಾಟಕ್ಕೆ ಇಡುತ್ತಾರೆ.

ಮತ್ತೊಂದು ಮಳಿಗೆಯಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರದವರು ಹಲಸಿನ ಹಣ್ಣನ್ನು ಕೊಯ್ದು ತೊಳೆಗಳನ್ನು ಬಿಡಿಸಿ ಮಾರಾಟಕ್ಕೆ ಇಡುತ್ತಿದ್ದಾರೆ. ಇದರಲ್ಲಿ ಕೆಂಪು, ಹಳದಿ ಮತ್ತು ಬಿಳಿ ಬಣ್ಣದ ಹಲಸಿನ ತೊಳೆಗಳಿರುತ್ತವೆ. ‘ಉಂಡೆ ಹಲಸಿನಹಣ್ಣನ್ನೂ ಮಾರಾಟ ಮಾಡಲಾಗುತ್ತದೆ. ಉಂಡೆ ಹಣ್ಣು ಖರೀದಿಸಲು ಸಾಧ್ಯವಾಗದವರಿಗೆ 350 ಗ್ರಾಂ ಹಾಗೂ ಅರ್ಧ ಕೆ.ಜಿ ಪೊಟ್ಟಣದಲ್ಲಿ ತೊಳೆಗಳನ್ನು ಪ್ಯಾಕ್ ಮಾಡಿ ಕೊಡುವ ವ್ಯವಸ್ಥೆ ಇದೆ. ಇದಕ್ಕಾಗಿಯೇ 500 ಹಣ್ಣುಗಳನ್ನು ಮೇಳಕ್ಕೆ ತರುತ್ತಿದ್ದೇವೆ’ ಎಂದು ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಜಿ.ಕರುಣಾಕರನ್ ತಿಳಿಸಿದ್ದಾರೆ.

ಮಾವು, ಹಲಸಿನ ಹಣ್ಣಿನ ಜತೆಗೆ, ಹಲಸಿನ ಹಣ್ಣಿನಿಂದ ತಯಾರಿಸಿದ ಚಿಪ್ಸ್, ಕೇಕ್, ಬಿಸ್ಕೆಟ್‌ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗುತ್ತಿದೆ.

’ನಮ್ಮ ದೇಶದಲ್ಲಿ ಇಷ್ಟೊಂದು ಮಾವು, ಹಲಸಿನ ತಳಿ ಇದೆ ಎಂಬುದು ಜನರಿಗೆ ಗೊತ್ತಾಗಬೇಕು. ತಳಿಗಳನ್ನು ರಕ್ಷಿಸಬೇಕೆಂಬ ಮನೋಭಾವ ಬೆಳೆಸಬೇಕು. ನಗರದ ನಾಗರಿಕರಿಗೆ, ಮಕ್ಕಳಿಗೆ ನಮ್ಮ ನಡುವಿರುವ ಸಸ್ಯ, ತಳಿ ವೈವಿಧ್ಯದ ಬಗ್ಗೆ ಜ್ಞಾನ ಮೂಡಿಸಬೇಕು. ಈ ಹಿನ್ನಲೆಯಲ್ಲಿ ಮಹಾನಗರದಲ್ಲೂ ಇಂಥ ಮೇಳ ಆಯೋಜಿಸಲಾಗುತ್ತಿದೆ’ ಎಂದು ಕರುಣಾಕರ್ ತಿಳಿಸಿದ್ದಾರೆ.

**

ಮಾವು–ಹಲಸು ಮೇಳದ ವಿವವರ

ಇಂದು ಮತ್ತು ನಾಳೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಮಾವು ಮತ್ತು ಹಲಸಿನ ಮೇಳ ಆಯೋಜಿಸಲಾಗಿದೆ.

ಎರಡೂ ದಿನ ಬೆಳಿಗ್ಗೆ 9.30ಯಿಂದ ಸಂಜೆ 5.30ರೆಗೆ ಮೇಳ ನಡೆಯುತ್ತದೆ.

ಮೇಳಕ್ಕೆ ಪ್ರವೇಶ ಉಚಿತ

***

ಚಿತ್ರಕಲಾ ಪರಿಷತ್ತಿನಲ್ಲಿಮೇಳ

ಜೂನ್‌ 1 ಮತ್ತು 2 ರಂದು ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಮಾವು ಮತ್ತು ಹಲಸಿನ ಮೇಳ ಆಯೋಜಿಸಲಾಗಿದೆ. ಎರಡೂ ದಿನ ಬೆಳಿಗ್ಗೆ 9.30ಯಿಂದ ಸಂಜೆ 5.30ರೆಗೆ ಮೇಳ ನಡೆಯುತ್ತದೆ. ಮೇಳಕ್ಕೆ ಪ್ರವೇಶ ಉಚಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT