ಶನಿವಾರ, ಅಕ್ಟೋಬರ್ 19, 2019
22 °C
‘ಪಿಯರ್ಸನ್ ಗ್ಲೋಬಲ್ ಲರ್ನರ್’ ಸಂಸ್ಥೆ ಅಧ್ಯಯನ ಸಮೀಕ್ಷೆ

ಶೈಕ್ಷಣಿಕ ಕ್ಷೇತ್ರದ ಸ್ಥಿತ್ಯಂತರಕ್ಕೆ ಆರ್ಥಿಕತೆ ಕಾರಣ

Published:
Updated:
Prajavani

ಶಿಕ್ಷಣ, ಉದ್ಯೋಗ ಮತ್ತು ನಿವೃತ್ತಿ ನಂತರದ ಜೀವನ ಹಾಗೂ ತಂತ್ರಜ್ಞಾನ ಕುರಿತು ಭಾರತೀಯರು ಸೇರಿದಂತೆ ಜಾಗತಿಕ ಮಟ್ಟದಲ್ಲಿ ಯಾವ ನಿಲುವಿದೆ ಎನ್ನುವ ಕುರಿತು ‘ಪಿಯರ್ಸನ್ ಗ್ಲೋಬಲ್ ಲರ್ನರ್’ ಸಂಸ್ಥೆ ಹೊಸ ಅಧ್ಯಯನ ಸಮೀಕ್ಷೆ ಬಿಡುಗಡೆಗೊಳಿಸಿದೆ.

ಆರ್ಥಿಕ ಕ್ಷೇತ್ರದಲ್ಲಿ ಆಗುತ್ತಿರುವ ಪರಿವರ್ತನೆಗಳು, ಜಾಗತಿಕ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿನ ಬದಲಾವಣೆಗಳಿಗೂ ಕಾರಣವಾಗುತ್ತಿವೆ.

ಈಗಿನ ಶಿಕ್ಷಣ ಪದ್ಧತಿ ಸಮಕಾಲೀನವಾಗಿಲ್ಲ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿದೆ. ತಂತ್ರಜ್ಞಾನದ ಪ್ರಭಾವದಿಂದಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ತಾವೇ ನಿಯಂತ್ರಿಸಲು (do-it-yourself ಮನೋಭಾವ) ಮುಂದಾಗುತ್ತಿದ್ದಾರೆ. ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಸ್ವಯಂ ಕಲಿಕೆ, ಅಲ್ಪಾವಧಿ ತರಬೇತಿಗಳು ಹಾಗೂ ಅಂತರ್ಜಾಲದ ಮೂಲಕ ಜ್ಞಾನ ಸಂಪಾದಿಸಿಕೊಳ್ಳಲು ಈಗಿನ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಈ ಮೂಲಕ ಹೊಸ ಆರ್ಥಿಕತೆಯ ಸವಾಲು ಮತ್ತು ಬೇಡಿಕೆಗಳಿಗೆ (talent economy) ತಕ್ಕಂತೆ ತಮ್ಮ ಕೌಶಲ ರೂಪಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಂಕಿ–ಅಂಶ
19: ರಾಷ್ಟ್ರಗಳಲ್ಲಿ ಸಮೀಕ್ಷೆ
11,000: ಜನರು ಸಮೀಕ್ಷೆಯಲ್ಲಿ ಭಾಗಿ
1,000: ಸಮೀಕ್ಷೆಯಲ್ಲಿ ಭಾಗಿಯಾದ ಭಾರತೀಯರು
16–70: ವಯೋಮಾನದವರು ಸಮೀಕ್ಷೆಗೆ ಆಯ್ಕೆಯಾದವರು

ಭಾರತೀಯರ ನಿಲುವೇನು?
75%: 
ವೃತ್ತಿಜೀವನ ಪೂರ್ತಿ ಒಂದೇ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುವುದು ಹಾಗೂ ಸಾಂಪ್ರದಾಯಿಕ ನಿವೃತ್ತಿ ಜೀವನ ಹಳೆಯ ಮಾದರಿ
76%: ಕಳೆದ ಎರಡು ವರ್ಷಗಳಲ್ಲಿ ಉದ್ಯೋಗಕ್ಕಾಗಿ ಹೆಚ್ಚಿನ ಶಿಕ್ಷಣ ಪಡೆಯಲು ಮುಂದಾದವರು
78%: ಕೌಶಲ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ
25%: ನಿವೃತ್ತಿ ಬಳಿಕ ತಮ್ಮಿಷ್ಟದ ಕ್ಷೇತ್ರದಲ್ಲಿ ಎರಡನೇ ಬಾರಿ ವೃತ್ತಿಜೀವನ ಆರಂಭಿಸಲು ಆಸಕ್ತಿ
84%: ಪ್ರಾವೀಣ್ಯ ಗಳಿಸಿದ ಕ್ಷೇತ್ರದಲ್ಲಿಯೇ ಉದ್ಯೋಗ ಆಯ್ಕೆ ಮಾಡಿಕೊಳ್ಳುವವರು
31%: ಭಿನ್ನವಾದ ವೃತ್ತಿಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು
78%: ತಂತ್ರಜ್ಞಾನದ ನೆರವಿನಿಂದ ಈಗಿನ ವಿದ್ಯಾರ್ಥಿಗಳ ಕಲಿಕೆ ಸುಲಭ ಎನ್ನುವ ನಂಬಿಕೆ
74–79%: ಕಲಿಕೆಯ ಪ್ರಾಥಮಿಕ ಸಂಪನ್ಮೂಲವಾಗಿ ಯುಟ್ಯೂಬ್‌ ಬಳಕೆಯಾಗಲಿದೆ
59%: ಈಗಿನ ಶಿಕ್ಷಣ ಪದ್ಧತಿ ಸೂಕ್ತವಾಗಿದೆ
25%: ನಿವೃತ್ತಿ ಬಳಿಕ ಸ್ವಂತ ಉದ್ದಿಮೆ ಆರಂಭಿಸಲು ಆಸಕ್ತಿ
15%: ನಿವೃತ್ತಿ ನಂತರ ಅಲ್ಪಾವಧಿ ಉದ್ಯೋಗ ನಿರ್ವಹಿಸಲು ಆಸಕ್ತಿ

ಜನರ ನಿಲುವೇನು?
22%: ಸಾಂಪ್ರದಾಯಿಕ ಶಿಕ್ಷಣ ಇದ್ದರೆ ಉತ್ತಮ ಆದರೆ ಅವಶ್ಯಕವಲ್ಲ ಎನ್ನುವ ಅಭಿಪ್ರಾಯ
22%: ಸಾಂಪ್ರದಾಯಿಕ ಶಿಕ್ಷಣ ಇಲ್ಲದೆಯೂ ಉದ್ಯೋಗದಲ್ಲಿ ಯಶಸ್ಸು ಕಾಣಬಹುದು
39%: ಪುನಃ ಅವಕಾಶ ದೊರೆತರೆ ಕಾಲೇಜ್ ಶಿಕ್ಷಣದ ಬದಲಿಗೆ ವಾಣಿಜ್ಯ ಅಥವಾ ಉದ್ಯಮ ತರಬೇತಿ ಪಡೆಯಲು ಆಸಕ್ತಿ
15%: ಪ್ರೌಢಶಿಕ್ಷಣ ಪೂರ್ಣಗೊಳಿಸಿದ ತಕ್ಷಣ ಉದ್ಯೋಗ ಆರಂಭಿಸಲು ಆಸಕ್ತಿ

–––––

ಮಾಹಿತಿ: ‘ಪಿಯರ್ಸನ್ ಗ್ಲೋಬಲ್ ಲರ್ನರ್’ ಸಮೀಕ್ಷೆ

Post Comments (+)