ಕೊಪ್ಪಳ: ‘ಅಭಿವೃದ್ಧಿ ಕಲ್ಪನೆಯೇ ತೀರಾ ವಿಚಿತ್ರವಾಗಿದೆ, ಅಭಿವೃದ್ಧಿ ವಿಷಯ ಮರುವ್ಯಾಖ್ಯಾನ ಆಗಬೇಕಿದೆ, ಹವಾಮಾನ ವೈಪರೀತ್ಯಗಳು ಕಂಡು ಕೇಳರಿಯದಂತೆ ಆಗುತ್ತಿವೆ’ ಎಂದು ಚಿಂತಕ ಶಿವಸುಂದರ್ ವಿಷಾದಿಸಿದರು.

ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ಹಾಗೂ ಅವುಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿಯ 184ನೇ ದಿನದ ಹೋರಾಟದಲ್ಲಿ ಶನಿವಾರ ಮಾತನಾಡಿ, ‘ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಕ್ಕಿನ ಅದಿರಿನಿಂದ, ಕೊಪ್ಪಳ ಕಾರ್ಖಾನೆಗೆ ವಶಪಡಿಸಿಕೊಂಡ ಭೂಮಿಯಿಂದ ಯಾರು ಶ್ರೀಮಂತರಾಗಿದ್ದಾರೆ. ಸರ್ಕಾರಗಳು ಕಾರ್ಪೊರೇಟ್ ಕುಳಗಳನ್ನು ಶ್ರೀಮಂತಗೊಳಿಸಿವೆ. ಇಲ್ಲಿನ ಜನ ಹೋರಾಡಿ ಆರೋಗ್ಯ, ಜೀವ ಉಳಿಸಿಕೊಳ್ಳುವಾಗ ರಾಜ್ಯದ ಪ್ರಜ್ಞಾವಂತರು ನಿಮ್ಮ ಬೆಂಬಲಕ್ಕೆ ಇರುತ್ತಾರೆ’ ಎಂದರು. ಭಾನುವಾರ 185ನೇ ದಿನದ ಹೋರಾಟ ಜರುಗಿತು.

ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ. ರತ್ನಾಕರ, ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಶುಕರಾಜ ತಾಳಕೇರಿ, ಎಂ.ಡಿ. ಸಿರಾಜ್ ಸಿದ್ದಾಪುರ, ಮಹಾಂತೇಶ ಕೊತಬಾಳ, ಮದ್ದಾನಯ್ಯ ಹಿರೇಮಠ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ, ಸಾವಿತ್ರಿ ಮುಜುಮದಾರ, ಸಲೀಮಾ ಜಾನ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-35-488681143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.