ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಾಯುಮಾಲಿನ್ಯ ಜಾಗೃತಿಗೆ ಜನ ಅಭಿಯಾನ

Last Updated 30 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಟ್ಟ ಮತ್ತು ಆರೋಗ್ಯದ ಮೇಲೆ ಬೀರುತ್ತಿರುವ ಸುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕ್ಲೀನ್‌ ಏರ್‌ ಪ್ಲಾಟ್‌ಫಾರ್ಮ್‌ (ಸಿಎಪಿ) ನಾಗರಿಕರಿಗೆ ವಿಜ್ಞಾನ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಅಭಿಯಾನದ ಮೂಲಕ ಸಿಎಪಿ ನಗರದ ವಿವಿಧ ಸ್ಥಳಗಳಲ್ಲಿಯ ವಾಯುಮಾಲಿನ್ಯ ಗುಣಮಟ್ಟ ಮತ್ತು ದುಷ್ಪರಿಣಾಮಗಳ ಅಂಕಿ, ಸಂಖ್ಯೆಗಳ ಮಾಹಿತಿ ಕಲೆ ಹಾಕುತ್ತಿದೆ. ಇದರ ಆಧಾರದ ಮೇಲೆ ವಾಯು ಮಾಲಿನ್ಯ ತಡೆ, ಗಾಳಿಯ ಗುಣಮಟ್ಟ ಕಾಪಾಡುವ ಮತ್ತು ಜನರ ಆರೋಗ್ಯ ರಕ್ಷಣೆ ಕುರಿತು ಮೇ ತಿಂಗಳಾದ್ಯಂತ ವಿವಿಧ ಚಟುವಟಿಕೆ ಆಯೋಜಿಸಿದೆ.

#WhatAreYouBreathing ಹೆಸರಿನ ಈ ಅಭಿಯಾನದಲ್ಲಿ ಮಾಲಿನ್ಯಕಾರಕ ಅಂಶಗಳನ್ನು ಅಳೆಯಲು ಸಂಸ್ಥೆ ಮೂರು ವಿಧಾನಗಳನ್ನು ಅನುಸರಿಸಲಿದೆ. ಬೆಂಗಳೂರಿನ ಹಿತಕರ ವಾತಾವರಣ ಮೇಲ್ನೋಟಕ್ಕೆ ತೃಪ್ತಿಕರವಾಗಿ ಕಂಡರೂ ನೈಜ ಚಿತ್ರಣ ಅದಲ್ಲ ಎಂದು ಸಿಎಪಿ ಸಿಇಒ ಯೋಗೇಶ್‌ ರಂಗನಾಥ್‌ ಹೇಳಿದ್ದಾರೆ.

‘ನಾವು ಉಸಿರಾಡುವ ಗಾಳಿಯಲ್ಲಿರುವಸಾರಜನಕ (NO2) ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭ್ರೂಣಗಳ ಬೆಳವಣಿಗೆ ಕುಂಠಿತಗೊಳಿಸುತ್ತದೆ’ ಎಂದುಹೆಲ್ದಿ ಎನರ್ಜಿ ಇನಿಶಿಯೇಟಿವ್‌ ಸಂಯೋಜಕಿ ಶ್ವೇತಾ ನಾರಾಯಣ್‌ ಆತಂಕ ವ್ಯಕ್ತಪಡಿಸಿದರು.

ಅಭಿಯಾನದಲ್ಲಿ ಪಾಲ್ಗೊಳ್ಳಲು ಬಯಸುವವರು https://cleanairplatform.org/community-based-air-quality-monitoring/ ಲಾಗಿನ್‌ ಆಗಿ ಹೆಸರು ನೋಂದಾಯಿಸಬಹುದು. asavari@cleanairplatform.org ಮೇಲ್‌ ಮಾಡಿ ಅಥವಾ 9930698616 ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT