ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮೇಲ್ವಿಚಾರಣೆಗೆ ಸ್ಮಾರ್ಟ್ ತಂತ್ರಜ್ಞಾನ

Last Updated 31 ಮೇ 2019, 19:45 IST
ಅಕ್ಷರ ಗಾತ್ರ

ನೀರಿನ ಶುದ್ಧತೆ ಈಗ ಆದ್ಯತೆಯ ವಿಷಯವಾಗಿದೆ. ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು ಆವಿಷ್ಕರಿಸಿದಗ್ರೀನ್ ಎನ್ವಿರಾನ್‌ಮೆಂಟ್ ಇನ್ನೊವೇಷನ್‌ ಹಾಗೂ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್‌ಅಭಿವೃದ್ಧಿಪಡಿಸಿದ ಸ್ಮಾರ್ಟ್ ತಂತ್ರಜ್ಞಾನವುತ್ಯಾಜ್ಯ ನೀರಿನ ಸಮರ್ಥ ಮರುಬಳಕೆಯನ್ನು ಸಾಧ್ಯವಾಗಿಸಿವೆ.

ನೀರಿನ ಮೇಲ್ವಿಚಾರಣೆ ನಡೆಸುವುದು, ಕಟ್ಟಡದೊಳಗಿನ ನೀರಿನ ಸಂಪರ್ಕಗಳಲ್ಲಿರುವ ದೋಷಗಳನ್ನು ಕಂಡುಹಿಡಿದು ಪರಿಹಾರ ಒದಗಿಸುವುದು ಈ ತಂತ್ರಜ್ಞಾನದ ಕೆಲಸ. ತ್ಯಾಜ್ಯ ನೀರಿನ ಸ್ಥಾವರದ ಮೇಲ್ವಿಚಾರಣೆ ಮತ್ತು ಸ್ಮಾರ್ಟ್ ವಾಟರ್ ಮ್ಯಾನೇಜ್‌ಮೆಂಟ್‌ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಐಒಟಿ-ಆಧಾರಿತ ತಂತ್ರಜ್ಞಾನಗಳು ಮಾಲ್‌ಗಳ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿವೆ.

ಮಾಲ್‌ಗಳಂತಹ ವಾಣಿಜ್ಯ ಕಟ್ಟಡಗಳ ನೀರಿನ ಗುಣಮಟ್ಟದಲ್ಲಿ ಏರುಪೇರು ಸಂಭವಿಸಿದಂತೆ ತಡೆಯುವ ಕೆಲಸವನ್ನು ಈ ತಂತ್ರಜ್ಞಾನ ಮಾಡುತ್ತದೆ. ನೀರಿನ ಸಂಸ್ಕರಣಾ ಘಟಕದ ಸಮರ್ಥ ಕಾರ್ಯಾಚರಣೆಗಾಗಿ ಇದು ನೆರವಿಗೆ ಬರುತ್ತದೆ. ಒರಾಯನ್ ಮಾಲ್‌ನಲ್ಲಿ ಇದನ್ನು ಬಳಸಲಾಗುತ್ತಿದ್ದು, ನೀರು ಹಾಗೂ ತ್ಯಾಜ್ಯ ನಿರ್ವಹಣೆಗೆ ಪರಿಹಾರ ಒದಗಿಸಿದೆ. ಈ ಮೂಲಕ ಐದು ತಿಂಗಳಲ್ಲಿ 3 ಕೋಟಿ 42 ಲಕ್ಷ ಲೀಟರ್ ನೀರನ್ನು ಉಳಿಸಿದೆ.

ಪ್ರಯೋಗಾಲಯದಲ್ಲಿ ನೀರಿನ ನಿಖರತೆಯನ್ನು ಪರೀಕ್ಷಿಸಲಾಯಿತು.ನಿತ್ಯ 3.8 ಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ಗಿಡಗಳಿಗೆ ನೀರುಣಿಸಲು ಹಾಗೂಇತರೆ ಕೆಲಸಗಳಿಗೆ ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೇ 25ರಷ್ಟು ನೀರನ್ನು ಉಳಿಸುವ ಜೊತೆಗೆ ಶೇ 30ರಷ್ಟು ನೀರು ಮರುಬಳಕೆಗೆ ಕಾರಣವಾಗಿದೆ.

‘ಐಒಟಿ ಸೊಲ್ಯೂಷನ್ ಎಂಬ ತಂತ್ರಜ್ಞಾವನ್ನು ಟ್ಯಾಂಕರ್, ನೀರಿನ ಸಂಸ್ಕರಣ ಘಟಕ ಮತ್ತು ಕೂಲಿಂಗ್ ಟವರ್‌ಗಳಲ್ಲಿ ಅಳವಡಿಸಲಾಗಿದೆ. ಇದರ ಮೇಲ್ವಿಚಾರಣೆಗೆ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದೇವೆ’ ಎಂದು ಬ್ರಿಗೇಡ್ ಗ್ರೂಪ್‌ ಫೆಸಿಲಿಟಿ ಜನರಲ್ ಮ್ಯಾನೇಜರ್ ಮನು ನಾಯರ್ ಹೇಳಿದರು.

‘ರಿಯಲ್ ಟೈಮ್ ಮಾನಿಟರಿಂಗ್ ಸಿಸ್ಟಮ್, ರಿಯಲ್-ಟೈಮ್ ಡೇಟಾ ಸಂಗ್ರಹಣೆ, ವಿಶ್ಲೇಷಣೆ ಮತ್ತು ನಿಯಂತ್ರಣ ಸಾಧನಗಳನ್ನು ಇದು ಒಳಗೊಂಡಿದೆ’ ಎಂದು ಗ್ರೀನ್‌ ಎನ್ವಿರಾನ್‌ಮೆಂಟ್ ಇಂಡಿಯಾ ಸಿಇಒ ವರುಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT