ಇದು ಕೂಡುವಳಿ ಸರ್ಕಾರ: ಈಶ್ವರಪ್ಪ

7

ಇದು ಕೂಡುವಳಿ ಸರ್ಕಾರ: ಈಶ್ವರಪ್ಪ

Published:
Updated:
Deccan Herald

ಚಾಮರಾಜನಗರ: ‘ಗಂಡ ಸತ್ತ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡ ಕೂಡುವಳಿ ಮಾಡಿಕೊಂಡು ಜೀವನ ನಡೆಸುವುದು ನಮಗೆ ಗೊತ್ತಿದೆ. ಇಬ್ಬರೂ ಕೂಡ ಸಂತೋಷವಾಗಿ ಜೀವನ ಬದುಕಲು ಬಯಸುತ್ತಾರೆ. ಆದರೆ, ಇಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳು ನಾಚಿಕೆ ಮಾನ ಮರ್ಯಾದೆ ಬಿಟ್ಟು ಸಂಸಾರ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದರು.

ನಂದಿ ಭವನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿ ನಿತ್ಯ ಜೆಡಿಎಸ್‌ನವರನ್ನು ಕಾಂಗ್ರೆಸ್‌ನವರು, ಜೆಡಿಎಸ್‌ನವರನ್ನು ಕಾಂಗ್ರೆಸ್‌ನವರು ಬೈದಾಡಿಕೊಳ್ಳುತ್ತಿದ್ದಾರೆ. ಇಬ್ಬರಲ್ಲೂ ಹೊಂದಾಣಿಕೆ ಇಲ್ಲ. ಈ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಪತನಗೊಂಡು, ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಎಂಬ ಕೊರಗು ಬೇಡ. ನಾವೆಲ್ಲರೂ ಸೇರಿ ಪಕ್ಷದ ಸಂಘಟನೆಗೆ ದುಡಿಯೋಣ. ಕಹಿ ಘಟನೆ ಮರೆಯಬೇಕು. ಸಂಘಟನೆಯ ಮೂಲಕ ಮೂಲಕ ಉತ್ತಮ ಬೀಜ ಬಿತ್ತಿದ್ದೇವೆ. ಸಮೃದ್ಧ ಫಸಲು ಲೋಕಸಭಾ ಚುನಾವಣೆಯ ಫಲತಾಂಶದಲ್ಲಿ ಸಿಗಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ಭಾರತೀಯರು ವಿದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿನ ಜನತೆ ನಮ್ಮನ್ನು ಬಡ ರಾಷ್ಟ್ರದಿಂದ ಬಂದವರು ಎಂದು ಗೇಲಿ ಮಾಡುತ್ತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಲ್ಲಿನ ಭಾರತೀಯರನ್ನು ಗೌರವದಿಂದ ಕಾಣುತ್ತಿದ್ದಾರೆ. ಇದಕ್ಕೆ ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಸಾಕ್ಷಿ’ ಎಂದರು. 

‘ಹಿಂದುಳಿದವರ ಅಭಿವೃದ್ಧಿ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಿಗೆ ಕಠಿಣ ಶಿಕ್ಷೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಭಿವೃದ್ಧಿಯನ್ನು ಕಂಡು ಕಾಂಗ್ರೆಸ್‌ ಬೆಚ್ಚಿಬಿದ್ದಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !