ಅನುಕರಣೀಯ ಸಾಧನೆ ಮಾಡಿದ ಮೇರು ವ್ಯಕ್ತಿ ಸಿದ್ದಗಂಗಾಶ್ರೀ

7

ಅನುಕರಣೀಯ ಸಾಧನೆ ಮಾಡಿದ ಮೇರು ವ್ಯಕ್ತಿ ಸಿದ್ದಗಂಗಾಶ್ರೀ

Published:
Updated:
Prajavani

ಮಾಗಡಿ: 'ತಾಲ್ಲೂಕಿನ ವೀರಾಪುರದಲ್ಲಿ ಜನಿಸಿ, ವಿಶ್ವದ ಗಮನ ಸೆಳೆದ ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಸರ್ವರಿಗೂ ಅನುಕರಣೀಯವಾಗಿದೆ' ಎಂದು ಡಾ.ಮುನಿರಾಜಪ್ಪ ಸ್ಮರಿಸಿದರು.

ಕನ್ನಡ ಸಹೃದಯ ಬಳಗದ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರೀಗಳಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ರೈತಾಪಿ ವರ್ಗದ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿದ ಮಾನವತಾವಾದಿ. ಬಸವಾದಿ ಶರಣರ ನಿಜ ಕಾಯಕವನ್ನು ಜನತೆಯಲ್ಲಿ ಬೆಳೆಸಲು ಶ್ರಮಿಸಿದ ಸ್ವಾಮೀಜಿ. ಸಿದ್ಧಗಂಗಾಮಠದ ಕಲಾವಿದರಿಂದ ಜಗಜ್ಯೋತಿ ಬಸವೇಶ್ವರ ಪೌರಾಣಿಕ ನಾಟಕ ಆಡಿಸಿ, ಜನತೆಯ ನಡುವೆ ಕುಳಿತು ನಾಟಕ ವೀಕ್ಷಿಸುತ್ತಿದ್ದ ಮೇರುಪುರುಷರು. ತವರೂರು ವೀರಾಪುರದಲ್ಲಿ ಗ್ರಂಥಾಲಯ ನಿರ್ಮಿಸಿದ ಶ್ರೀಗಳಿಗೆ ಗೌರವ ಸಲ್ಲಿಸಬೇಕು‘ ಎಂದರು.

ಬಳಗದ ಸಂಚಾಲಕ ಡಿ.ರಾಮಚಂದ್ರಯ್ಯ, ಖಜಾಂಚಿ ಎಂ.ಕೆ.ಶಿವಲಿಂಗಯ್ಯ, ಕಾರ್ಯದರ್ಶಿ ದೊಡ್ಡಬಾಣಗೆರೆ ಮಾರಣ್ಣ ಶ್ರೀಗಳನ್ನು ಕುರಿತು ಮಾತನಾಡಿದರು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಹೊಸಪೇಟೆ ಜವರೇಗೌಡ, ಮಾದೇಶ್‌, ಎನ್‌ಇಎಸ್‌ ಮೋಹನ್‌, ಕೆರೆಬೀದಿ ಈಶ, ಚೆನ್ನಮ್ಮನಪಾಳ್ಯದ ಗಿರೀಶ್‌, ಗವಿನಾಗಮಂಗಲದ ಸತೀಶ್‌, ಕುಂಚಿಟಿಗರ ಸಂಘದ ಮುಖಂಡ ಜಯಕುಮಾರ್‌, ಪುಷ್ಪ, ದೊಂಬಿದಾಸದ ಸಂಘದ ಅಧ್ಯಕ್ಷ ಮಾರಪ್ಪ, ಬೆಳಗುಂಬ ವಿಶ್ವನಾಥ, ಸಾತನೂರಿನ ರೂಪೇಶ್‌ ಕುಮಾರ್‌, ಮುನಿಯಪ್ಪ, ತಿರುಮಲೆ ಶ್ರೀನಿವಾಸ್‌, ಕುರುಬರ ಸಂಘದ ಕಾರ್ಯದರ್ಶಿ ಎಚ್‌.ಶಿವಕುಮಾರ್‌, ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮುಖಂಡ ಶಿವರಾಜ್‌, ಆನಂದ್‌ ಕುಮಾರ್‌, ಮರಲಗೊಂಡಲ ದೇವರಾಜು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !