ಆನ್‌ಲೈನ್‌ನಲ್ಲಿ ಪರೀಕ್ಷಾ ತಯಾರಿ

7

ಆನ್‌ಲೈನ್‌ನಲ್ಲಿ ಪರೀಕ್ಷಾ ತಯಾರಿ

Published:
Updated:

ಬೆಂಗಳೂರು: ದ್ವಿತೀಯ ಪಿ.ಯು.ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳ ಪಠ್ಯಾಭ್ಯಾಸಕ್ಕೆ ಅನುಕೂಲವಾಗುವ ಆನ್‌ಲೈನ್‌ ವೇದಿಕೆಯೊಂದನ್ನು ಐಪೊಮೊ ಕಂಪನಿಯು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ರೂಪಿಸಿದೆ.

ಅಭ್ಯಾಸದ ಬಗೆ: ಈ ಕಂಪನಿಯು ipomo OnBimba ಎಂಬ ಆ್ಯಪ್‌ ರೂಪಿಸಿದೆ. ಇದನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 5 ಪ್ರಶ್ನೆಗಳು ಪ್ರತಿದಿನ ಸಂಜೆ 6ಕ್ಕೆ ಬಿತ್ತರವಾಗುತ್ತವೆ. ಆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳಲ್ಲಿ ಉತ್ತರಿಸಬಹುದು. ಆ ಉತ್ತರಗಳ ಹಾಳೆಯ ಚಿತ್ರಗಳನ್ನು ಮೊಬೈಲ್‌ ಅಥವಾ ಕಂಪ್ಯೂಟರ್‌
ಮೂಲಕ ಆ್ಯಪ್‌ ಅಥವಾ ಬಿಂಬ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಬಹುದಾಗಿದೆ.

ಪ್ರತಿದಿನ ಸಂಜೆ ಬಿತ್ತರವಾಗುವ 5 ಪ್ರಶ್ನೆಗಳಿಗೆ ಮರುದಿನ ಬೆಳಿಗ್ಗೆ 10 ಗಂಟೆಗೆ ಮಾದರಿ ಉತ್ತರಗಳು ಆನ್‌ಲೈನ್‌ನಲ್ಲಿಯೇ ಪ್ರಕಟ
ಗೊಳ್ಳಲಿವೆ. ಆ ಪ್ರಶ್ನೋತ್ತರಗಳನ್ನು ಪರಿಣಿತ ಉಪನ್ಯಾಸಕರು ತಯಾರಿಸಲಿದ್ದಾರೆ. ವಿಷಯ ತಜ್ಞರ ಉತ್ತರಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ಉತ್ತರಗಳನ್ನು ಹೋಲಿಸಿಕೊಂಡು ತಾವು ಎಲ್ಲಿ ಸುಧಾರಿಸಿಕೊಳ್ಳಬೇಕಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

ಹಾಗೆಯೇ ಇಲ್ಲಿನ ಪ್ರಶ್ನೋತ್ತರಗಳಿಗೆ ಕಮೆಂಟ್‌ ಮಾಡಿ ಸಂದೇಹಗಳನ್ನು ಬಗೆಹರಿಸಿಕೊಳ್ಳುವ ಮತ್ತು ಮುಖ್ಯ ಪ್ರಶ್ನೋತ್ತರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಚನ್ನಾಗಿ ಉತ್ತರ ಬರೆದ ವಿದ್ಯಾರ್ಥಿಗೆ ಲೈಕ್‌ಗಳ ಮೂಲಕ ಶಭಾಸ್‌ಗಿರಿ ನೀಡಬಹುದಾಗಿದೆ.  

ಕಂಪನಿಯ ಈ ಕಲಿಕಾ ಯೋಜನೆ ರೂಪಿಸುವಲ್ಲಿ ಶೇಷಾದ್ರಿಪುರ, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮತ್ತು ಎಂ.ಇ.ಎಸ್‌. ಕಾಲೇಜಿನ ಉಪನ್ಯಾಸಕರು ಕೈಜೋಡಿಸಿದ್ದಾರೆ. ಇವರು ಈ ಹಿಂದೆಯೂ ಹಲವಾರು ಮಾದರಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ, ನೂರಾರು ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಲು ನೆರವಾಗಿದ್ದರು.

ಮಾಹಿತಿಗೆ: https://onbimba.com/Qber

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !