ಮತಗಟ್ಟೆ ಸಮೀಕ್ಷೆಗೂ ಇತಿಮಿತಿಗಳಿವೆ

ಬುಧವಾರ, ಜೂನ್ 26, 2019
29 °C

ಮತಗಟ್ಟೆ ಸಮೀಕ್ಷೆಗೂ ಇತಿಮಿತಿಗಳಿವೆ

Published:
Updated:
Prajavani

ಮತಗಟ್ಟೆ ಸಮೀಕ್ಷೆಗಳಿಗೂ ಅವುಗಳದ್ದೇ ಆದ ಇತಿಮಿತಿಗಳಿವೆ. ಅವುಗಳು ಹೇಳುವುದೇ ಅಂತಿಮ ಸತ್ಯ ಎಂದು ಭಾವಿಸುವ ಅಗತ್ಯವಿಲ್ಲ. ಆದರೆ, ಸತ್ಯಕ್ಕೆ ಹತ್ತಿರದಲ್ಲಿರಬೇಕು ಎಂದು ನಿರೀಕ್ಷಿಸುವುದು ಸಹಜ. ಅವು ಜನರ ಒಟ್ಟಾರೆ ಅಭಿಪ್ರಾಯಗಳ ಸಣ್ಣ ಸುಳಿವು ನೀಡುತ್ತವೆಯೇ ಹೊರತು ಅತ್ಯಂತ ನಿಖರವಾದ ಅಂಕಿ, ಸಂಖ್ಯೆಗಳನ್ನು ನೀಡುತ್ತವೆ ಎಂದು ಹೇಳಲಾಗದು. ಮಾನವ ಸಹಜ ತಪ್ಪುಗಳು ನುಸುಳುವುದು ಸಾಮಾನ್ಯ. ಯಾವ ರಾಜಕೀಯ ಪಕ್ಷ ಮುನ್ನಡೆ ಸಾಧಿಸಬಹುದು, ಯಾವ ಪಕ್ಷ ಹಿನ್ನಡೆ ಅನುಭವಿಸಬಹುದು ಎಂದು ಅಭಿಪ್ರಾಯವನ್ನು ಸೂಚ್ಯವಾಗಿ ಹೇಳಬೇಕಾಗುತ್ತದೆ.

ರಾಜಕೀಯ ಸಮೀಕ್ಷೆಗಳು ಹೆಚ್ಚು ನಿಖರ ಮತ್ತು ವೈಜ್ಞಾನಿಕವಾಗಿರಬೇಕು. ಸಮೀಕ್ಷೆ ನಡೆಸುವ ಸಂಸ್ಥೆಗಳು ವೃತ್ತಿಪರ ವಾಗಿರಬೇಕು ಮತ್ತು ತಟಸ್ಥ ರಾಜಕೀಯ ಧೊರಣೆ ಹೊಂದಿರಬೇಕು. ಕಾಟಾಚಾರದ ಸಮೀಕ್ಷೆಗಳ ಕಾರಣ ಇತ್ತೀಚಿನ ಹೆಚ್ಚಿನ ರಾಜಕೀಯ ಭವಿಷ್ಯಗಳು ಬುಡಮೇಲಾಗುತ್ತಿವೆ. ಸಮೀಕ್ಷೆ ನಡೆಸುವ ಕೆಲವು ಸಂಸ್ಥೆಗಳು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಸಿದ್ಧಾಂತಗಳ ಜತೆ ಗುರುತಿಸಿಕೊಂಡಿರುವ ಕಾರಣ ಪೂರ್ವಗ್ರಹದ ಛಾಯೆ ಸಮೀಕ್ಷೆಗಳ ಮೇಲೆಯೂ ಕಾಣಿಸಿಕೊಳ್ಳು ತ್ತದೆ. ಸಮೀಕ್ಷೆಗಳು ನಿಜಕ್ಕೂ ಸಂಸ್ಥೆಗಳ ವೃತ್ತಿಪರತೆಯನ್ನು ಒರೆಗೆ ಹಚ್ಚುತ್ತವೆ. ಈ ಕಾರ್ಯ ಅತ್ಯಂತ ಕಷ್ಟದ ಕೆಲಸ. ಅತಿಹೆಚ್ಚು ಮಾನವ ಸಂಪನ್ಮೂಲ, ಅಧಿಕ ಸಮಯ ಮತ್ತು ಕ್ಷೇತ್ರ ಕಾರ್ಯವನ್ನು ಬೇಡುತ್ತವೆ. ಹೆಚ್ಚಿನ ಸಮೀಕ್ಷಾ ಸಂಸ್ಥೆಗಳು ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ಕುಳಿತು ದೂರವಾಣಿಯಲ್ಲಿ ಅಭಿಪ್ರಾಯ ಪಡೆಯುವ ರೂಢಿ ಮಾಡಿಕೊಂಡಿವೆ. ಇದರಿಂದ ಊಹೆ ಏರುಪೇರಾಗುತ್ತವೆ.

ಸಂಸ್ಥೆಗಳು ಸಮೀಕ್ಷೆಗೆ ಆಯ್ಕೆ ಮಾಡಿ ಕೊಳ್ಳುವ ಮಾದರಿಗಳು (ಸ್ಯಾಂಪಲ್‌) ಅಂದರೆ, ಕ್ಷೇತ್ರ, ಜನರು ಮತ್ತು ಸಮಯ ಮುಖ್ಯ ಪಾತ್ರ ವಹಿಸುತ್ತವೆ. ‘ಅನ್ನ ಬೆಂದಿದೆ ಎಂದು ನೋಡಲು ಒಂದು ಅಗಳು ನೋಡಿದರೆ ಸಾಕು’ ಎನ್ನುವುದು ಸಮೀಕ್ಷಾ ಕಾರ್ಯದಲ್ಲಿ ತೊಡಗಿದವರ ವಾದ. ಅಲ್ಲಿ ಅಕ್ಕಿ, ಪಾತ್ರೆ, ನೀರು, ಶಾಖ ಒಂದೇ ತೆರನಾಗಿರುತ್ತದೆ. ಮತದಾರರು ಆ ರೀತಿ ಅಲ್ಲ. ಹಲವು ಜಾತಿ, ಧರ್ಮ, ಪ್ರದೇಶ, ಭಾಷೆ ಮತ್ತು ಸಿದ್ಧಾಂತಗಳಿಗೆ ಸೇರಿದವ ರಾಗಿರುತ್ತಾರೆ. ನಮ್ಮದು ಗುಪ್ತ ಮತದಾನ ವ್ಯವಸ್ಥೆಯಾದ ಕಾರಣ ಮತದಾರರು ಸುಲಭವಾಗಿ ಗುಟ್ಟು ಬಿಟ್ಟು ಕೊಡಲಾರರು. 

ಮತಗಟ್ಟೆ ಸಮೀಕ್ಷೆಗಳು ಕೂಡ ತಾವು ನೀಡುವ ಅಂಕಿ, ಸಂಖ್ಯೆಗಳನ್ನೇ ಅಂತಿಮ ಸತ್ಯ ಎಂದು ಹೇಳಿಕೊಳ್ಳುವುದಿಲ್ಲ. ಜನರ ಮನೋಭಾವ ಕಟ್ಟಿಕೊಡುವ ಪ್ರಯತ್ನ ಎಂದು ಹೇಳುತ್ತವೆ.

ಸದ್ಯದ 10ಕ್ಕೂ ಹೆಚ್ಚು ಮತಗಟ್ಟೆ ಸಮೀಕ್ಷೆಗಳು ಒಂದೊಕ್ಕೊಂದು ತಾಳೆಯಾಗುವುದಿಲ್ಲ. ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ.  ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ಸಮೀಕ್ಷೆ ನಡೆಸಿದಾಗ ಹೀಗಾಗುವುದಿಲ್ಲ. ಸಾಕಷ್ಟು ಅಂಶಗಳು ಸಮೀಕ್ಷೆ ಮೇಲೆ ಪರಿಣಾಮ ಬೀರುವುದರಿಂದ ಎಲ್ಲ ವರ್ಗ, ಮತ್ತು ವಯೋಮಾನದವರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಆಯ್ದ ಮಾದರಿ ಪದ್ಧತಿಗಿಂತ ಎಲ್ಲರನ್ನೂ ಒಳಗೊಂಡ ಮಾದರಿ ಪದ್ಧತಿ ಹೆಚ್ಚು ಕರಾರುವಾಕ್ಕಾದ ಫಲಿತಾಂಶ ನೀಡುತ್ತದೆ.

ಹೆಚ್ಚಿನ ಸಮೀಕ್ಷೆಗಳು ನಗರ ಕೇಂದ್ರೀತವಾಗಿವೆ. ಗ್ರಾಮೀಣ ಜನರ ಅಭಿಪ್ರಾಯಗಳನ್ನು ಇವು ಧ್ವನಿಸುವುದಿಲ್ಲ. ನಗರದ ಯುವ ಮತದಾರರಿಗೆ ಬಡತನ, ಸಾಮಾಜಿಕ ಪ್ರಜ್ಞೆ, ಆರ್ಥಿಕ ಸಮಸ್ಯೆ ಅರಿವು ಇರುವುದಿಲ್ಲ. ಹಳೆಯ ತಲೆಮಾರಿನ ಮತದಾರರನ್ನು ಸಮೀಕ್ಷೆ ನಡೆಸುವ ಸಂಸ್ಥೆಗಳು ತಲುಪುವುದಿಲ್ಲ.

– ಪ್ರೊ. ಅಬ್ದುಲ್‌ ಅಜೀಜ್‌, ಚೇರ್‌ ಪ್ರೊಫೆಸರ್‌, ರಾಷ್ಟ್ರೀಯ ಕಾನೂನು ಶಾಲೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !