ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ: ಕುಡಿತದ ಅಭ್ಯಾಸ ಮಹಿಳೆಯರಲ್ಲಿ ಅತ್ಯಲ್ಪ

Last Updated 16 ಮೇ 2022, 19:45 IST
ಅಕ್ಷರ ಗಾತ್ರ

ದೇಶದ ಒಟ್ಟು ಪುರುಷರಲ್ಲಿ ಸರಾಸರಿ ಶೇ 18.8ರಷ್ಟು ಮಂದಿ ಕುಡಿತದ ಅಭ್ಯಾಸವಿರಿಸಿಕೊಂಡಿದ್ದಾರೆ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ–5ರ ವರದಿ. ಈ ಸಮೀಕ್ಷೆ ಅಡಿ ಇದೇ ಮೊದಲ ಬಾರಿಗೆ ಕುಡಿತದ ಅಭ್ಯಾಸವಿರುವವರ ದತ್ತಾಂಶಗಳನ್ನು ಸೇರಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವವರ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಮಹಿಳೆಯರಲ್ಲಿ ಕುಡಿತದ ಅಭ್ಯಾಸವಿರುವವರ ದತ್ತಾಂಶವನ್ನೂ ಈ ವರದಿಯಲ್ಲಿ ನೀಡಲಾಗಿದೆ. ಪುರುಷರಿಗೆ ಹೋಲಿಸಿದರೆ, ದೇಶದ ಎಲ್ಲಾ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ ಇದೆ.

ಪುರುಷರಲ್ಲಿ ಕುಡಿತದ ಪ್ರಮಾಣ (ಶೇಕಡವಾರು ಪ್ರಮಾಣದಲ್ಲಿ)

*ದೇಶದ ಎಲ್ಲಾ ರಾಜ್ಯಗಳ ಪುರುಷರಲ್ಲಿ ಕುಡಿತದ ಅಭ್ಯಾಸ ಒಂದೇ ರೀತಿಯಲ್ಲಿ ಇಲ್ಲ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಅತ್ಯಧಿಕವಾಗಿದ್ದರೆ, ಕೆಲವು ರಾಜ್ಯಗಳಲ್ಲಿ ತೀರಾ ಕಡಿಮೆ ಇದೆ

*ದೇಶದ ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಕುಡಿತದ ಅಭ್ಯಾಸವಿರುವ ಪುರುಷರ ಪ್ರಮಾಣ ಹೆಚ್ಚು. ಕೆಲವು ರಾಜ್ಯಗಳಲ್ಲಿ ಈ ವ್ಯತ್ಯಾಸ ಕಡಿಮೆ ಇದೆ. ಕೆಲವು ರಾಜ್ಯಗಳಲ್ಲಿ ಹೆಚ್ಚು

*ಅರುಣಾಚಲ ಪ್ರದೇಶದಲ್ಲಿ ಶೇ 54ಕ್ಕಿಂತಲೂ ಹೆಚ್ಚು ಪುರುಷರಿಗೆ ಕುಡಿತದ ಅಭ್ಯಾಸವಿದೆ. ಇದು ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚು

*ಈಶಾನ್ಯ ಭಾರತದ ರಾಜ್ಯಗಳ ಪುರುಷರಲ್ಲಿ ಕುಡಿತದ ಪ್ರಮಾಣ ಹೆಚ್ಚು. ಕೆಲವು ರಾಜ್ಯಗಳ ಪುರುಷರಲ್ಲಿ ಕುಡಿತದ ಅಭ್ಯಾಸ ಇರುವವರ ಪ್ರಮಾಣ ಶೇ 40ಕ್ಕಿಂತಲೂ ಹೆಚ್ಚು

*ಪೂರ್ವ ಕರಾವಳಿಯ ರಾಜ್ಯಗಳಲ್ಲೂ ಕುಡಿತದ ಅಭ್ಯಾಸವಿರುವ ಪುರುಷರ ಪ್ರಮಾಣ ಹೆಚ್ಚು ಇದೆ. ಈ ರಾಜ್ಯಗಳಿಗೆ ಹೋಲಿಸಿದರೆ, ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಪುರುಷರ ಪ್ರಮಾಣ ಕಡಿಮೆ

ಮಹಿಳೆಯರಲ್ಲಿ ಕುಡಿತದ ಪ್ರಮಾಣ (ಶೇಕಡವಾರು ಪ್ರಮಾಣದಲ್ಲಿ)

*ದೇಶದ ಬಹುತೇಕ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಒಂದೇ ರೀತಿಯಲ್ಲಿದೆ. ಬಹುತೇಕ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇದೆ

*ದೇಶದ ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಹೆಚ್ಚು. ಕೆಲವು ರಾಜ್ಯಗಳಲ್ಲಿ ಈ ವ್ಯತ್ಯಾಸ ಕಡಿಮೆ ಇದೆ. ಕೆಲವು ರಾಜ್ಯಗಳಲ್ಲಿ ಹೆಚ್ಚು

*ಅರುಣಾಚಲ ಪ್ರದೇಶದಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಶೇ 24ಕ್ಕಿಂತಲೂ ಹೆಚ್ಚು. ಇದು ದೇಶದ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚು

*ಕೇರಳದಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಶೇ 0.2ರಷ್ಟು ಮಾತ್ರ. ಇದು ದೇಶದ ಎಲ್ಲಾ ರಾಜ್ಯಗಳಿಗಿಂತ ಕಡಿಮೆ

*ಈಶಾನ್ಯ ಭಾರತ ಮತ್ತು ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಹೆಚ್ಚು. ಈ ರಾಜ್ಯಗಳಿಗೆ ಹೋಲಿಸಿದರೆ, ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ಕುಡಿತದ ಅಭ್ಯಾಸವಿರುವ ಮಹಿಳೆಯರ ಪ್ರಮಾಣ ಕಡಿಮೆ

ನಿಷೇಧವಿದ್ದರೂ ಮದ್ಯಪಾನ

ಗುಜರಾತ್‌, ಬಿಹಾರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಎಲ್ಲಾ ಸ್ವರೂಪದ ಮದ್ಯಪಾನ ನಿಷೇಧ ಜಾರಿಯಲ್ಲಿದೆ. ಆದರೆ ಈ ನಾಲ್ಕೂ ರಾಜ್ಯಗಳಲ್ಲಿ ನಿಷೇಧದ ನಡುವೆಯೂ ಕುಡಿತದ ಅಭ್ಯಾಸ ಇದೆ. ಈ ರಾಜ್ಯಗಳಲ್ಲಿ ನಿಷೇಧವಿದ್ದರೂ, ಮದ್ಯ ದೊರೆಯುತ್ತದೆ ಎಂಬುದನ್ನು ಈ ಸಮೀಕ್ಷೆಯ ವರದಿ ತೋರಿಸಿದೆ.

ಗುಜರಾತಿನ ಶೇ 5.8ರಷ್ಟು ಪುರುಷರು, ಶೇ 0.9ರಷ್ಟು ಮಹಿಳೆಯರು ಕುಡಿತದ ಅಭ್ಯಾಸ ಇರಿಸಿಕೊಂಡಿದ್ದಾರೆ. ಪಶ್ಚಿಮ ಮತ್ತು ವಾಯವ್ಯ ಭಾರತದ ರಾಜ್ಯಗಳಲ್ಲಿ ಕುಡಿತದ ಅಭ್ಯಾಸ ಇರಿಸಿಕೊಂಡಿರುವ ಮಹಿಳೆಯರ ಪ್ರಮಾಣ ಗುಜರಾತಿನಲ್ಲೇ ಹೆಚ್ಚು.

ಬಿಹಾರದ ಶೇ 15.5ರಷ್ಟು ಪುರುಷರು ಮತ್ತು ಶೇ 0.4ರಷ್ಟು ಮಹಿಳೆಯರು ಕುಡಿತದ ಅಭ್ಯಾಸವಿರಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ನಿಷೇಧ ಜಾರಿಯಲ್ಲಿರುವ ನಾಗಾಲ್ಯಾಂಡ್‌ ಮತ್ತು ಮಿಜೋರಾಂಗಳಲ್ಲಿ ಕುಡಿತದ ಅಭ್ಯಾಸವಿರುವ ಪುರುಷರ ಪ್ರಮಾಣಶೇ 24ರಷ್ಟಿದೆ. ಎರಡೂ ರಾಜ್ಯಗಳ ಶೇ 0.9ರಷ್ಟು ಮಹಿಳೆಯರು ಕುಡಿತದ ಅಭ್ಯಾಸವಿರಿಸಿಕೊಂಡಿದ್ದಾರೆ.

ಆಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5 ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT