ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ‘ಅನರ್ಹ’ದಿಂದ ಸಚಿವ ಸ್ಥಾನದತ್ತ ಪಯಣ

Last Updated 6 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""
""

ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಆಗಿದೆ. ಉಪಚುನಾವಣೆಯಲ್ಲಿ ಗೆದ್ದ 10 ‘ಅರ್ಹ’ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಈ ಸಚಿವರು ಹಿಂದೆ ಯಾವೆಲ್ಲ ಪಕ್ಷಗಳಲ್ಲಿ ಇದ್ದರು ಎಂಬ ರಾಜಕೀಯ ಹಿನ್ನೆಲೆ, ಅವರ ಆದಾಯ ಎಷ್ಟಿದೆ, ಎಷ್ಟು ಆಸ್ತಿ ಹೊಂದಿದ್ದಾರೆ, ಅಪರಾಧ ಪ್ರಕರಣಗಳು ಏನೇನಿವೆ ಎಂಬ ಮಾಹಿತಿ ಇಲ್ಲಿದೆ

ಆನಂದ್‌ ಸಿಂಗ್‌ ವಿಜಯನಗರ (ಬಳ್ಳಾರಿ)

ವಯಸ್ಸು: 54 ವರ್ಷ

ವಿದ್ಯಾರ್ಹತೆ: ಪಿ.ಯು.ಸಿ

ಜಾತಿ: ರಜಪೂತ

ವೃತ್ತಿ: ಉದ್ಯಮಿ

ರಾಜಕೀಯ ಅನುಭವ: 2008, 2013ರಲ್ಲಿ ಸತತ ಎರಡು ಸಲ ಬಿಜೆಪಿಯಿಂದ ಗೆಲುವು.2012–13ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸಂಪುಟದಲ್ಲಿ ಕೆಲಕಾಲ ಪ್ರವಾಸೋದ್ಯಮ ಸಚಿವರಾಗಿದ್ದರು. 2018ರಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಜಯ ಸಾಧಿಸಿದರು. 2019ರಲ್ಲಿ ಪುನಃ ಬಿಜೆಪಿಗೆ ಸೇರ್ಪಡೆಯಾಗಿ, ಉಪಚುನಾವಣೆಯಲ್ಲಿ ಜಯ. ಸತತ ನಾಲ್ಕು ಸಲ ಗೆದ್ದಿರುವ ಆನಂದ್‌ ಸಿಂಗ್‌, ಎರಡನೇ ಸಲ ಸಚಿವರಾಗಿದ್ದಾರೆ.

ಶಿವರಾಮ ಹೆಬ್ಬಾರ್ (ಯಲ್ಲಾಪುರ )

ವಯಸ್ಸು: 62 ವರ್ಷ

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

ಜಾತಿ: ಬ್ರಾಹ್ಮಣ (ಹವ್ಯಕ)

ವೃತ್ತಿ: ಉದ್ಯಮ, ಕೃಷಿ

ಅನುಭವ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದವರು. 2008ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ. ಎರಡು ಬಾರಿ (2013 ಮತ್ತು 2018ರ ಚುನಾವಣೆ) ಶಾಸಕರಾದರು. ಪುನಃ ಬಿಜೆಪಿಗೆ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ (2019) ಆಯ್ಕೆಯಾಗಿದ್ದಾರೆ. ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಸಚಿವ.

ರಮೇಶ ಜಾರಕಿಹೊಳಿ (ಗೋಕಾಕ )

ವಯಸ್ಸು: 59 ವರ್ಷ

ವಿದ್ಯಾರ್ಹತೆ: ಬಿ.ಎ. ಮೊದಲ ವರ್ಷ

ಜಾತಿ: ವಾಲ್ಮೀಕಿ ನಾಯಕ (ಎಸ್‌.ಟಿ)

ವೃತ್ತಿ: ಕೃಷಿ, ಉದ್ಯಮ

ರಾಜಕೀಯ ಅನುಭವ: ಸತತ ಆರು ಸಲ ಶಾಸಕ. 1999, 2004, 2008, 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ. 2019ರಲ್ಲಿ ಮೊದಲ ಬಾರಿಗೆ ಪಕ್ಷಾಂತರ ಮಾಡಿದ ಅವರು, ಬಿಜೆಪಿಗೆ ಸೇರಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರದಲ್ಲಿಪೌರಾಡಳಿತ, ಸಹಕಾರ ಹಾಗೂ ಸಣ್ಣ ಕೈಗಾರಿಕೆ ಸಚಿವರಾಗಿದ್ದರು.

ಶ್ರೀಮಂತ ಪಾಟೀಲ (ಕಾಗವಾಡ)

ವಯಸ್ಸು: 64 ವರ್ಷ

ವಿದ್ಯಾರ್ಹತೆ: ಬಿ.ಎಸ್ಸಿ. (ಕೃಷಿ)

ಜಾತಿ: ಮರಾಠ

ವೃತ್ತಿ: ಸಕ್ಕರೆ ಕಾರ್ಖಾನೆ ಮಾಲೀಕ, ಕೃಷಿ

ರಾಜಕೀಯ ಅನುಭವ: ಜನತಾ ಪರಿವಾರದ ಮೂಲಕ ರಾಜಕೀಯ ರಂಗ ಪ್ರವೇಶ. 2008, 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವ. ಮೊದಲ ಬಾರಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು. 2018ರಲ್ಲಿ ಕಾಂಗ್ರೆಸ್‌ನಿಂದ ಜಯ. 2019ರಲ್ಲಿ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು. ಮೊದಲ ಬಾರಿಗೆ ಸಚಿವ.

ಡಾ.ಕೆ.ಸುಧಾಕರ್‌ (ಚಿಕ್ಕಬಳ್ಳಾಪುರ)

ವಯಸ್ಸು: 46

ವಿದ್ಯಾರ್ಹತೆ: ಎಂಬಿಬಿಎಸ್

ಜಾತಿ: ಒಕ್ಕಲಿಗ

ವೃತ್ತಿ: ವ್ಯವಹಾರ, ಸಮಾಜಸೇವೆ

ರಾಜಕೀಯ ಅನುಭವ: 2013, 2018ರಲ್ಲಿ ಕಾಂಗ್ರೆಸ್‌ನಿಂದ ಗೆಲುವು. ಬಂಡಾಯ ಎದ್ದು ಬಿಜೆಪಿಗೆ ಸೇರಿದ ಬಳಿಕಉಪಚುನಾವಣೆಯಲ್ಲಿ ಗೆಲುವು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಅವರುಸಚಿವರಾಗುತ್ತಿರುವುದು ಇದೇ ಮೊದಲು.

ಕೆ.ಸಿ.ನಾರಾಯಣ ಗೌಡ (ಕೆ.ಆರ್‌.ಪೇಟೆ)

ವಯಸ್ಸು: 58

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ

ಜಾತಿ: ಒಕ್ಕಲಿಗ

ವೃತ್ತಿ: ಮುಂಬೈನಲ್ಲಿ ಹೋಟೆಲ್‌ ಉದ್ಯಮ

ರಾಜಕೀಯ ಅನುಭವ: 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಸೋಲು. 2013, 2018ರಲ್ಲಿ ಜೆಡಿಎಸ್‌ನಿಂದ ಸತತ ಎರಡು ಬಾರಿ ಗೆಲುವು. ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಬಿಜೆಪಿ. ಇದೇ ಮೊದಲ ಬಾರಿಗೆ ಸಚಿವ ಸ್ಥಾನ.

ಬೈರತಿ ಬಸವರಾಜ್‌ (ಕೆ.ಆರ್‌.ಪುರ)

ವಯಸ್ಸು: 56 ವರ್ಷ

ವಿದ್ಯಾರ್ಹತೆ: ಬಿ.ಎ.

ಜಾತಿ: ಕುರುಬ

ವೃತ್ತಿ: ಕೃಷಿ, ವ್ಯವಹಾರ

ರಾಜಕೀಯ ಅನುಭವ: 2013ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದ ಬಸವರಾಜ್‌, 2018ರಲ್ಲಿ ಪುನರಾಯ್ಕೆ. ಇದೀಗ ಬಿಜೆಪಿಯಿಂದ ಗೆದ್ದುಬಂದು ಮೊದಲ ಬಾರಿಗೆ ಸಚಿವರಾಗಿದ್ದಾರೆ. 2007ರಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಅವರು, 2010ರಲ್ಲಿ ಬಿಬಿಎಂಪಿ ಹೂಡಿ ವಾರ್ಡ್‌ ಸದಸ್ಯರಾಗಿದ್ದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮೈಸೂರು ಸೋಪ್ ಅಂಡ್‌ ಡಿಜರ್ಜೆಂಟ್‌ ಲಿಮಿಟೆಡ್ ಅಧ್ಯಕ್ಷ.

ಎಸ್.ಟಿ.ಸೋಮಶೇಖರ್ (ಯಶವಂತಪುರ)

ವಯಸ್ಸು: 61

ವಿದ್ಯಾರ್ಹತೆ: ಬಿ.ಎಸ್ಸಿ. (ಎಲ್‌ಎಲ್‌ಬಿ)

ಜಾತಿ: ಒಕ್ಕಲಿಗ

ವೃತ್ತಿ: ಕೃಷಿ, ಸಹಕಾರ

ರಾಜಕೀಯ ಅನುಭವ:2013, 2018ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ದೆಯಾಗಿದ್ದ ಅವರು, ಇದೀಗ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವರು, ಕರ್ನಾಟಕ ರಾಜ್ಯ ಸಹಕಾರ ಗೃಹನಿರ್ಮಾಣ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು. ಇದೇ ಮೊದಲ ಬಾರಿಗೆ ಸಚಿವ ಸ್ಥಾನ.

ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್‌)

ವಯಸ್ಸು: 59

ವಿದ್ಯಾರ್ಹತೆ: ಬಿ.ಎಸ್ಸಿ.

ಜಾತಿ: ಒಕ್ಕಲಿಗ

ವೃತ್ತಿ: ಉದ್ಯಮ

ರಾಜಕೀಯ ಅನುಭವ: 2013ರಲ್ಲಿ ಮತ್ತು 2018ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದ ಗೋಪಾಲಯ್ಯ, ಇದೀಗ ಬಿಜೆಪಿಯಿಂದ ಆಯ್ಕೆಯಾಗಿ ಮೊದಲ ಬಾರಿಗೆ ಸಚಿವರಾಗಿದ್ದಾರೆ.1996ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದರು.

ಬಿ.ಸಿ.ಪಾಟೀಲ (ಹಿರೇಕೆರೂರು)

ವಯಸ್ಸು: 64 ವರ್ಷ

ವಿದ್ಯಾರ್ಹತೆ: ಬಿ.ಎ.

ಜಾತಿ: ಲಿಂಗಾಯತ (ಸಾದರ)

ವೃತ್ತಿ: ನಿವೃತ್ತ ಪೊಲೀಸ್ ಅಧಿಕಾರಿ, ಸಿನಿಮಾ ನಟ

ರಾಜಕೀಯ ಅನುಭವ: 2004ರಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿ ಶಾಸಕರಾಗಿ ಆಯ್ಕೆ. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ, ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಆಯ್ಕೆ. 2013ರಲ್ಲಿ ಸೋಲು. 2018ರಲ್ಲಿ ಸ್ಪರ್ಧಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ. 2019ರಲ್ಲಿ ಪಕ್ಷಾಂತರ; ಬಿಜೆಪಿ ಅಭ್ಯರ್ಥಿಯಾಗಿ ನಾಲ್ಕನೇ ಬಾರಿಗೆ ಶಾಸಕರಾಗಿ ಗೆಲುವು. ಮೊದಲ ಬಾರಿ ಸಚಿವ

ಆದಾಯ

2018–19 ₹ 48.63 ಲಕ್ಷ

₹ 4.55 ಕೋಟಿ ಸ್ಥಿರಾಸ್ತಿ ಮೌಲ್ಯ

₹ 2.04 ಕೋಟಿ ಚರಾಸ್ತಿ ಮೌಲ್ಯ

*ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣ ಬಾಕಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT