ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಅವರು ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ. ತಮಿಳುನಾಡು ಬಿಜೆಪಿಯ ಭವಿಷ್ಯ ಎಂದೇ ಅವರು ಕರೆಸಿಕೊಂಡಿದ್ದರು. ಆದರೆ, ನಡುಹಾದಿಯಲ್ಲೇ ಪಕ್ಷದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಅವರಂತೆ ನಾಗರಿಕ ಸೇವಾ ಅಧಿಕಾರಿಗಳಾಗಿ ಕೆಲಸ ಮಾಡಿ, ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯದಲ್ಲಿ ಯಶಸ್ಸು ಗಳಿಸುವ ಹುಮ್ಮಸ್ಸಿನಿಂದ ಬಂದವರ ಪೈಕಿ ಮುಖ್ಯಮಂತ್ರಿ, ಮಂತ್ರಿ ಆದವರೂ ಇದ್ದಾರೆ. ದೇಶದ ಪ್ರಮುಖ ರಾಜಕಾರಣಿಗಳಾಗಿ ಬದಲಾದ ಕೆಲವು ಮಾಜಿ ಅಧಿಕಾರಿಗಳ ಪರಿಚಯ ಇಲ್ಲಿದೆ...

ಕೆ.ಅಣ್ಣಾಮಲೈ...

ತಮಿಳುನಾಡಿನ ಕರೂರು ಜಿಲ್ಲೆಯ ಕೆ.ಅಣ್ಣಾಮಲೈ ಎಂಜಿನಿಯರಿಂಗ್, ಎಂಬಿಎ ಪದವೀಧರರು. 2011ರಲ್ಲಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಪಾಸಾಗಿ, ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡರು. ಚಿಕ್ಕಮಗಳೂರು ಮತ್ತು ಉಡುಪಿ ಎಸ್ಪಿ ಆಗಿ, ಬೆಂಗಳೂರಿನಲ್ಲಿ ಡಿಸಿಪಿ ಆಗಿ ಕೆಲಸ ಮಾಡಿದರು. 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ತಮಿಳುನಾಡಿಗೆ ಹಿಂದಿರುಗಿದ ಅವರು ಮುಂದಿನ ಕೆಲವೇ ತಿಂಗಳಲ್ಲಿ ಬಿಜೆಪಿ ಸೇರಿದರು. ಪಕ್ಷ ಸೇರಿದ ಒಂದೇ ವರ್ಷದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು. ತಮ್ಮ ಛಡಿಯೇಟಿನ ಪ್ರತಿಭಟನೆ, ಪಾದಯಾತ್ರೆ ಇತ್ಯಾದಿಯಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಅಣ್ಣಾಮಲೈ, ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯ ಎಂದೇ ಹೆಸರಾಗಿದ್ದರು. ಆದರೆ, 2021ರ ಚುನಾವಣೆಯಲ್ಲಿ ಅರವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲು ಕಂಡರು. ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಅಣ್ಣಾಮಲೈ, ನರೇಂದ್ರ ಮೋದಿ ಅವರ ಬಗ್ಗೆ ಭಾರಿ ಹೆಮ್ಮೆಯಿಂದ ಮಾತನಾಡುತ್ತಿದ್ದರು. 2024ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ಅವರನ್ನು 2025ರಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಪಕ್ಷವು ಕೆಳಗಿಳಿಸಿತು. ಎಐಎಡಿಎಂಕೆ ಜತೆಗಿನ ಮೈತ್ರಿ ಕಾರಣಕ್ಕೆ ಪಕ್ಷವು ಅವರನ್ನು ನಿರ್ಲಕ್ಷ್ಯ ಮಾಡಿತು ಎನ್ನುವ ವಿಶ್ಲೇಷಣೆಗಳು ಕೇಳಿಬಂದವು. ಇದರಿಂದ ನೊಂದ ಅಣ್ಣಾಮಲೈ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಶಾ ಫೈಸಲ್...

ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ ಜಮ್ಮು ಮತ್ತು ಕಾಶ್ಮೀರದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾ ಫೈಸಲ್ ಅವರು 2009ನೇ ಬ್ಯಾಚ್ನ ಐಎಎಸ್ ಅಧಿಕಾರಿ. 2019ರಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿದ್ದ ಹತ್ಯೆಗಳು ಮತ್ತು ಮುಸ್ಲಿಮರ ವಿರುದ್ಧ ನಡೆಸಲಾಗುತ್ತಿರುವ ತಾರತಮ್ಯವನ್ನು ಖಂಡಿಸಿ ಭಾರತೀಯ ಆಡಳಿತ ಸೇವೆಗೆ (ಐಎಎಸ್) ರಾಜೀನಾಮೆ ನೀಡಿದರು. ನಂತರ ಜಮ್ಮು ಆ್ಯಂಡ್ ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ (ಜೆಕೆಪಿಎಂ) ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. 2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಫೈಸಲ್ ಅವರನ್ನು ಕೂಡ ಬಂಧನದಲ್ಲಿಡಲಾಗಿತ್ತು. 2020ರ ಆಗಸ್ಟ್ನಲ್ಲಿ ಅವರು ರಾಜಕೀಯ, ಪಕ್ಷವನ್ನು ತೊರೆದರು. ಅವರು ನೀಡಿದ್ದ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿರಲಿಲ್ಲ. ಹಾಗಾಗಿ, ಮತ್ತೆ ಅವರು ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಗೊಂಡರು. ಸದ್ಯ, ಅವರು ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಸಿಕಾಂತ್ ಸೆಂಥಿಲ್...

ತಮಿಳುನಾಡಿನವಾರದ ಶಶಿಕಾಂತ್ ಸೆಂಥಿಲ್ ಅವರು ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದವರು. 2008ರ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಎಂಟನೇ ರ್ಯಾಂಕ್ ಗಳಿಸಿದ ಹೆಗ್ಗಳಿಕೆ ಅವರದ್ದು. ದಕ್ಷಿಣ ಕನ್ನಡ, ರಾಯಚೂರು ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತಿರುವುದು ತಮ್ಮ ರಾಜೀನಾಮೆಗೆ ಕಾರಣ ಎಂದು ಹೇಳಿದ್ದರು. 2020ರ ನವೆಂಬರ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷದ ಚಿಂತಕರ ಚಾವಡಿಯಲ್ಲಿ ಗುರುತಿಸಿಕೊಂಡಿದ್ದ ಅವರು ಚುನಾವಣಾ ತಂತ್ರಗಾರಿಕೆಯಲ್ಲೂ ಮುಂಚೂಣಿಯಲ್ಲಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದಿಂದ ಜಯಗಳಿಸಿ, ಈಗ ಸಂಸದರಾಗಿದ್ದಾರೆ.

ಮೀರಾ ಕುಮಾರ್...

ಭಾರತದ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ (ಸಭಾಧ್ಯಕ್ಷೆ) (2009–2014) ಎಂಬ ಮುಕುಟವನ್ನು ಮುಡಿಗೇರಿಸಿಕೊಂಡಿದ್ದ ಮೀರಾ ಕುಮಾರ್ ಮೂಲತಃ ಭಾರತೀಯ ವಿದೇಶಾಂಗ ಸೇವೆಯ (ಐಎಫ್ಎಸ್) ಅಧಿಕಾರಿ. ಉಪಪ್ರಧಾನಿಯಾಗಿದ್ದ ಬಾಬು ಜಗಜೀವನ ರಾಂ ಅವರ ಮಗಳಾದ ಮೀರಾ ಕುಮಾರ್ 1973ರಲ್ಲಿ ಐಎಫ್ಎಸ್ಗೆ ಸೇರ್ಪಡೆಗೊಂಡಿದ್ದರು. 12 ವರ್ಷಗಳ ಕರ್ತವ್ಯ ನಿರ್ವಹಣೆಯ ಬಳಿಕ, 1985ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಉತ್ತರ ಪ್ರದೇಶದ ಬಿಜನೋರ್ ಕ್ಷೇತ್ರದ ಉಪಚುನಾವಣೆಯಲ್ಲಿ ರಾಮ ವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯವರನ್ನು ಸೋಲಿಸಿ ದೇಶದ ಗಮನ ಸೆಳೆದಿದ್ದರು. 2004ರಲ್ಲಿ ಯುಪಿಎ ಮೊದಲ ಅವಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆಯಾಗಿದ್ದರು. 2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯೂ ಆಗಿದ್ದರು. ಆದರೆ, ರಾಮನಾಥ ಕೋವಿಂದ್ ವಿರುದ್ಧ ಸೋಲು ಅನುಭವಿಸಿದರು.

ಅಲ್ಫೋನ್ಸ್ ಕಣ್ಣಂದಾನಂ...

ಕೇರಳಂನ ಕೊಟ್ಟಾಯಂ ಜಿಲ್ಲೆಯವರಾದ ಅಲ್ಫೋನ್ಸ್ ಕಣ್ಣಂದಾನಂ ಅವರು, 1979ರ ಬ್ಯಾಚ್ನ ಐಎಎಸ್ ಅಧಿಕಾರಿ. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ (1990) ಅವರ ಹೆಸರು ಜನಪ್ರಿಯವಾಗಿತ್ತು. ದೆಹಲಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ನೆಲಸಮ ಮಾಡಿ, ಸುಮಾರು ₹10,000 ಕೋಟಿ ಮೌಲ್ಯದ ಜಾಗವನ್ನು ಅವರು ಸರ್ಕಾರದ ಸುಪರ್ದಿಗೆ ಪಡೆದು, ‘ಡೆಮಾಲಿಷನ್ ಮ್ಯಾನ್’ ಎಂದೇ ಹೆಸರಾಗಿದ್ದರು. 2006ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕೊಟ್ಟಾಯಂನ ಕಾಂಜಿರಪ್ಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಡಪಕ್ಷಗಳ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2011ರಲ್ಲಿ ಬಿಜೆಪಿ ಸೇರ್ಪಡೆಯಾದ ಅವರು ಆರು ವರ್ಷಗಳ ನಂತರ ರಾಜ್ಯಸಭೆಯ ಸದಸ್ಯರಾದರು. ಆ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವರಾಗಿದ್ದರು. 2019ರಲ್ಲಿ ಎರ್ನಾಕುಲಂ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡರು.

ಅಜಿತ್ ಜೋಗಿ...

ಛತ್ತೀಸಗಢದ ಮೊದಲ ಮುಖ್ಯಮಂತ್ರಿಯಾಗಿದ್ದ ಅಜಿತ್ ಜೋಗಿ ಐಎಎಸ್ ಅಧಿಕಾರಿಯಾಗಿದ್ದವರು. ಆದಿವಾಸಿ ಸಮುದಾಯದ ಜೋಗಿ ಅವರು 1968ನೇ ಬ್ಯಾಚ್ನ ಅಧಿಕಾರಿ. ರಾಜೀವ್ ಗಾಂಧಿ ಅವರ ಆಹ್ವಾನದ ಮೇರೆಗೆ 1986ರಲ್ಲಿ ಅವರು ಕಾಂಗ್ರೆಸ್ಗೆ ಸೇರಿದ್ದರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಿದ್ದವು. 2016ರಲ್ಲಿ ಅವರ ಮಗ ಅಮಿತ್ ಅವರನ್ನು ಪಕ್ಷವು ಆರು ವರ್ಷಗಳವರೆಗೆ ಪಕ್ಷದಿಂದ ಉಚ್ಚಾಟಿಸಿತ್ತು. ಆ ನಂತರ ಅಜಿತ್ ಜೋಗಿ ಕಾಂಗ್ರೆಸ್ ತೊರೆದು ಛತ್ತೀಸಗಢ ಜನತಾ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

ಇತರ ಪ್ರಮುಖರು...

ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ (ಐಎಎಸ್), ಮಣಿಶಂಕರ ಅಯ್ಯರ್ (ಐಎಫ್ಎಸ್), ದಿವಂಗತ ನಟವರ ಸಿಂಗ್ (ಐಎಫ್ಎಸ್), ಸಚಿವ ಆರ್.ಕೆ.ಸಿಂಗ್ (ಐಎಎಸ್), ಸತ್ಯಪಾಲ್ ಸಿಂಗ್ (ಐಪಿಎಸ್), ರಾಮಚಂದ್ರ ಪ್ರಸಾದ್ ಸಿಂಗ್ (ಐಎಎಸ್) ಅವರು ಭಾರತೀಯ ನಾಗರಿಕ ಸೇವೆಗಳ ಹುದ್ದೆಗಳಲ್ಲಿದ್ದು, ನಂತರ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದವರು.

ಈಗ ಸಚಿವರಾಗಿರುವ ಎಸ್.ಜೈಶಂಕರ್, ಹರದೀಪ್ ಸಿಂಗ್ ಪುರಿ ಅವರು ಐಎಫ್ಎಸ್ ಅಧಿಕಾರಿಗಳಾಗಿ ನಿವೃತ್ತರಾಗಿ ನಂತರ ರಾಜಕೀಯಕ್ಕೆ ಸೇರಿದವರು.

ಕರ್ನಾಟಕದಲ್ಲಿ...

ಐಎಎಸ್ ಅಧಿಕಾರಿಯಾಗಿದ್ದ ಜಿ. ಕುಮಾರ ನಾಯಕ ಅವರು ನಿವೃತ್ತಿಯ ಬಳಿಕ ಕಾಂಗ್ರೆಸ್ ಪಕ್ಷ ಸೇರಿ, 2024ರ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಸಂಸದರಾಗಿದ್ದಾರೆ.

ಐಎಎಸ್ ಅಧಿಕಾರಿಗಳಾಗಿದ್ದ ಬಿ.ಎಸ್.ಪಾಟೀಲ, ರತ್ನಪ್ರಭಾ (ಇಬ್ಬರೂ ಮುಖ್ಯ ಕಾರ್ಯದರ್ಶಿ ಆಗಿದ್ದವರು), ಪಿ.ಸಿದ್ದಯ್ಯ, ಬಿ.ಎಚ್.ಅನಿಲ್ ಕುಮಾರ್, ಕೆ. ಶಿವರಾಂ, ಐಪಿಎಸ್ ಅಧಿಕಾರಿಗಳಾದ ರೇವಣ್ಣ ಸಿದ್ದಯ್ಯ, ಶಂಕರ ಬಿದರಿ, ಜ್ಯೋತಿ ಪ್ರಕಾಶ್ ಮಿರ್ಜಿ, ಭಾಸ್ಕರ ರಾವ್, ಪಿ.ಕೋದಂಡರಾಮ್ಯ, ಕೆ.ಸಿ.ರಾಮಮೂರ್ತಿ ಸೇರಿದಂತೆ ಇನ್ನೂ ಕೆಲವರು ಕರ್ತವ್ಯದಿಂದ ನಿವೃತ್ತಿಗೊಂಡ ಬಳಿಕ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು (ಈಗಲೂ ಕೆಲವರು ರಾಜಕೀಯದಲ್ಲೇ ಇದ್ದಾರೆ).

ಪಕ್ಷ ಕಟ್ಟಿದ ಗಟ್ಟಿಗರು...

ನಾಗರಿಕ ಸೇವಾ ಅಧಿಕಾರಿಗಳಾಗಿ ವೃತ್ತಿಜೀವನ ಆರಂಭಿಸಿ, ನಂತರ ರಾಜಕೀಯಕ್ಕೆ ಬಂದು, ತಾವೇ ಪಕ್ಷ ಕಟ್ಟಿ ಸೋಲು ಗೆಲುವು ಕಂಡ ಗಟ್ಟಿಗರೂ ಕೆಲವರಿದ್ದಾರೆ. ಅವರಲ್ಲಿ ಅರವಿಂದ ಕೇಜ್ರಿವಾಲ್, ಜಯಪ್ರಕಾಶ್ ನಾರಾಯಣ್, ಕೆ.ಶಿವಗಾಮಿ ಪ್ರಮುಖರು.

ಖರಗ್ಪುರದ ಐಐಟಿಯಿಂದ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಪದವೀಧರರಾದ ಅರವಿಂದ್ ಕೇಜ್ರಿವಾಲ್, 1992ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಆರ್ಎಸ್ ಅಧಿಕಾರಿಯಾದರು. 2006ರಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಆಯುಕ್ತರಾಗಿದ್ದ ಅವರು ಹುದ್ದೆ ತೊರೆದು ಸಾರ್ವಜನೀಕ ಜೀವನ ಪ್ರವೇಶಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿ, ಅದಕ್ಕೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿದ್ದ ಕೇಜ್ರಿವಾಲ್, ನಂತರ ಲೋಕಪಾಲ ಮಸೂದೆಗಾಗಿ ನಡೆದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದರು. 2012ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪಿಸಿ, 2013ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಪದವಿಗೇರಿದರು. ಆದರೆ, ಬಹುಮತ ಕೊರತೆಯಿಂದ ಕೇವಲ 49 ದಿನಗಳಲ್ಲಿ ಪದವಿ ಕಳೆದುಕೊಂಡರು. 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ದಾಖಲೆ ಗೆಲುವು ಸಾಧಿಸುವುದರೊಂದಿಗೆ ದೆಹಲಿ ಮುಖ್ಯಮಂತ್ರಿಯಾದರು. 2020ರಲ್ಲಿಯೂ ಪಕ್ಷ ಗೆಲ್ಲುವುದರೊಂದಿಗೆ ಮೂರನೇ ಬಾರಿ ಮುಖ್ಯಮಂತ್ರಿಯಾದರು. 2024ರಲ್ಲಿ ಅವರು ಅಬಕಾರಿ ಹಗರಣ ಸಂಬಂಧ ಜೈಲಿಗೂ ಹೋಗಿಬಂದರು. ಅವರ ಪಕ್ಷ ಪಂಜಾಬ್ನ 2022ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅಧಿಕಾರ ನಡೆಸುತ್ತಿದೆ.

ಆಂಧ್ರ ಪ್ರದೇಶದ ಜಯಪ್ರಕಾಶ್ ನಾರಾಯಣ್, ವೃತ್ತಿಯಿಂದ ವೈದ್ಯರು. ಯುಪಿಎಸ್ಸಿಯಲ್ಲಿ ನಾಲ್ಕನೇ ರ್ಯಾಂಕ್ ಪಡೆದು 1980ರಲ್ಲಿ ಐಎಎಸ್ ಅಧಿಕಾರಿಯಾದರು. ತಮ್ಮ 16 ವರ್ಷದ ಸೇವೆಯಲ್ಲಿ ಅವರು ಕೃಷಿ, ನೀರಾವರಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಾಕಷ್ಟು ಕೆಲಸ ಮಾಡಿದರು. ಎನ್ಟಿಆರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ಯದರ್ಶಿಯೂ ಆಗಿದ್ದರು. ಮತದಾನದ ಮಹತ್ವ, ಹಕ್ಕುಗಳು, ಸರ್ಕಾರದ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 1996ರಲ್ಲಿ ಲೋಕಸತ್ತಾ ಆಂದೋಲನ ಸ್ಥಾಪಿಸಿ, 2006ರಲ್ಲಿ ಲೋಕಸತ್ತಾ ಪಕ್ಷ ಸ್ಥಾಪನೆ ಮಾಡಿದರು. ಹಣ, ಮದ್ಯ, ಜಾತಿಯ ಸೋಂಕಿಲ್ಲದ ರಾಜಕಾರಣ ಮಾಡುವುದು ತಮ್ಮ ಗುರಿ ಎಂದು ಪ್ರತಿಪಾದಿಸಿದ ಅವರು, ಚುನಾವಣಾ ರಾಜಕಾರಣದಲ್ಲಿ ಯಶಸ್ಸು ಗಳಿಸಲಿಲ್ಲ. ಚುನಾವಣಾ ಅಕ್ರಮಗಳ ತಡೆಗೆ ಶ್ರಮಿಸಿದ ಅವರು, ಲೇಖಕರೂ ಹೌದು.

1980ರ ಬ್ಯಾಚ್ನ ಐಎಎಸ್ ಅಧಿಕಾರಿ ಕೆ.ಶಿವಗಾಮಿ ತಮಿಳುನಾಡಿನವರು. 28 ವರ್ಷ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅವರು, 2008ರಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. 2009ರಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸೇರಿದ ಅವರು, ನಂತರ ಅಲ್ಲಿಂದ ಹೊರಬಂದು ಸಮುಗ ಸಮತ್ವ ಪಡೈ (ಎಸ್ಎಸ್ಪಿ) ಸ್ಥಾಪಿಸಿದರು. ದಲಿತರು ಮತ್ತು ಮಹಿಳೆಯರ ಏಳಿಗೆಯೇ ತಮ್ಮ ಪಕ್ಷದ ಮುಖ್ಯ ಆಶಯ ಎಂದು ಘೋಷಿಸಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಅವರು ಡಿಎಂಕೆ ಚಿಹ್ನೆಯ ಅಡಿ ಪೆರಂಬಲೂರ್ ಕ್ಷೇತ್ರದಿಂದ ಸ್ಪರ್ಧಿಸಿ, ಸೋತರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರು ಈಗಲೂ ಸಕ್ರಿಯವಾಗಿ ಸ್ಪಂದಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.