

ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಎನ್ನುವ ಹೆಸರು ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಖ್ಯಾತನಾಮ ರಾಜಕಾರಣಿಗಳು, ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪರ–ವಿರೋಧದ ಚರ್ಚೆ ತಾರಕ ಮುಟ್ಟಿದೆ. ಜೆನ್ ಝೀಗಳ ಬೆಂಬಲ ಪಡೆದಿರುವ ಆನ್‌ಲೈನ್ ಆಂದೋಲನವು ನೋಂದಾಯಿತ ರಾಜಕೀಯ ಪಕ್ಷವಾಗಿ ಚುನಾವಣಾ ರಾಜಕೀಯಕ್ಕೆ ಇಳಿಯುವುದೇ ಅಥವಾ ಆರಂಭವಾದಂತೆ ದಿಢೀರ್ ಆಗಿಯೇ ಅಂತ್ಯವಾಗುವುದೇ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿ ಸಿಜೆಪಿಯ ’ಎಕ್ಸ್’ ಖಾತೆಯನ್ನು ಗುರುವಾರ ತಡೆ ಹಿಡಿಯಲಾಗಿದೆ. ಈ ಕ್ರಮದ ಬಗ್ಗೆಯೂ ಪರ –ವಿರೋಧ ಚರ್ಚೆ ನಡೆಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.