




ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಶುಕ್ರವಾರ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು


ಪಾಲಿಕೆ ವಿಭಜನೆಯಾಗದಿದ್ದರೆ ಕೇಂದ್ರದ 16ನೇ ಹಣಕಾಸು ಆಯೋಗದಡಿ ಈ ಪಾಲಿಕೆಗೆ ಹೆಚ್ಚು ಅನುದಾನ ಲಭಿಸಲಿದೆ ಎಂಬುದು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ. ವಿಶೇಷ ಅನುದಾನಕ್ಕೆ ಗುರುತಿಸಿರುವ ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಇಲ್ಲ. ಪರಿಣಾಮಕಾರಿ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯಾಗಲೇಬೇಕುವೆಂಕಟೇಶ ಮಾಚಕನೂರ, ಪ್ರತ್ಯೇಕ ಪಾಲಿಕೆ ಹೋರಾಟಗಾರ

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಸರ್ವಾನುಮತದ ನಿರ್ಣಯವಾಗಿದೆ. ರಾಜ್ಯಪಾಲರು ಪ್ರಸ್ತಾವಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಯಾವ ಪಕ್ಷದವರೂ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆಬಿ.ಡಿ.ಹಿರೇಮಠ, ವಕೀಲ

ಪಾಲಿಕೆಯನ್ನು ಒಡೆದರೆ ಧಾರವಾಡ ಸಣ್ಣ ಪಾಲಿಕೆಯಾಗುತ್ತದೆ. ಇಲ್ಲಿನ ಜನಸಂಖ್ಯೆ ಕಡಿಮೆ ಇದೆ. ಕೇಂದ್ರ ಸರ್ಕಾರವು ಜನಸಂಖ್ಯೆ ಆಧರಿಸಿ ಯೋಜನೆಗಳಿಗೆ ಅನುದಾನದ ಪ್ರಮಾಣ ನಿಗದಿಪಡಿಸುತ್ತದೆ. ಇಲ್ಲಿಗೆ ಕಡಿಮೆ ಅನುದಾನ ಲಭಿಸುತ್ತದೆ. ಎರಡೂ ನಗರಗಳು ಕೂಡುವ ಹಂತದಲ್ಲಿವೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ಬೃಹತ್ ಪಾಲಿಕೆಯಾಗಿಸುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದುಈರೇಶ ಅಂಚಟಗೇರಿ, ಸಭಾ ನಾಯಕ ಮಹಾನಗರ ಪಾಲಿಕೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಪ್ರಸ್ತಾವ ಅನುಮೋದಿಸುವಂತೆ ಬೆಂಗಳೂರಿನ ಲೋಕಭವನದಲ್ಲಿ ಮಂಗಳವಾರ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯವರು ಮನವಿ ಮಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ನೇಗಿನಾಳ ಶಾಸಕ ಅರವಿಂದ ಬೆಲ್ಲದ ಗುರುರಾಜ ಹುಣಶಿಮರದ ಹಿರಿಯ ವಕೀಲ ಬಿ.ಡಿ.ಹಿರೇಮಠ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದ್ದರು.
ಆಡಳಿತದಲ್ಲಿ ಹಿಡಿತ ಉತ್ತಮ ಆಡಳಿತಕ್ಕಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವುದು ಅಗತ್ಯವಾಗಿದೆ. ಆಡಳಿತ ವಿಕೇಂದ್ರೀಕರಣ ಮತ್ತು ಧಾರವಾಡದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರವು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕುಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಧಾರವಾಡ


ಹುಬ್ಬಳ್ಳಿ–ಧಾರವಾಡ ಮಹಾನಗರ
ಪಾಲಿಕೆಯ ನಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.