ಸತತ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡು ಭಾರತ ತಂಡ ಚಾರಿತ್ರಿಕ ಸಾಧನೆಗೆ ಪಾತ್ರವಾಗಿದ್ದು ಈಗ ಇತಿಹಾಸ. ಆದರೆ ತವರಿನಲ್ಲಿ ನಡೆದ ಅಭಿಯಾನದ ಲೀಗ್ ಹಂತದಲ್ಲಿ ಭಾರತ ತಂಡ ಪಡೆದ ಗೆಲುವುಗಳು ಪ್ರಯಾಸದ ನಂತರ ಸಿಕ್ಕಿದ್ದವು. ಕೆಲವು ಪಂದ್ಯಗಳಲ್ಲಿ ದುರ್ಬಲ ಎದುರಾಳಿಗಳನ್ನು ಆಲೌಟ್ ಮಾಡಲೂ ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಎದುರು ಟೂರ್ನಿಯ ಏಕೈಕ ಸೋಲು ಸಹ ದಾಖಲಾಯಿತು.

ಆದರೆ, ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬ ಆಟಗಾರ ‘ಸಾಹಸ’ ಮೆರೆದು ತಂಡ ಉಳಿದೆಲ್ಲಾ ಹಣಾಹಣಿಗಳಲ್ಲಿ ಸೋಲದಂತೆ ನೋಡಿಕೊಂಡರು. ಬೌಲರ್ಗಳಲ್ಲಿ ಜಸ್ಪ್ರೀತ್ ಬೂಮ್ರಾ ಎಂದಿನಂತೆ ಕೈಹಿಡಿದರು. ಅಂತಿಮವಾಗಿ ಈ ಅಭಿಯಾನಕ್ಕೆ ಕಳಶವಿಟ್ಟಂತೆ ಭಾರತ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಏಕಪಕ್ಷೀಯವಾದ ಗೆಲುವು ಸಾಧಿಸಲು ಕಾರಣವಾಗಿದ್ದು ಟೂರ್ನಿಯಲ್ಲಿ ಮೊದಲ ಬಾರಿ ಕಂಡ ಸಾಂಘಿಕ ಪ್ರದರ್ಶನ.

ಕಳೆದ ಆವೃತ್ತಿಯಲ್ಲಿ (2024) ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ನಲ್ಲಿ ಭಾರತ ಏಳು ರನ್ಗಳಿಂದ ಜಯಗಳಿಸಿತ್ತು. ಈ ಬಾರಿ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ ಏಳು ರನ್ಗಳ ಜಯ ಮಾತ್ರ ರೋಚಕ ಕ್ಷಣಗಳಲ್ಲಿ ಒಂದೆನಿಸಿತು.

ಈ ವಿಶ್ವಕಪ್ನ ವಿವಿಧ ಹಂತಗಳಲ್ಲಿ ಭಾರತ ತಂಡದ ಗೆಲುವಿಗೆ ಕಾರಣರಾದ ಕೆಲವು ಆಟಗಾರರ ಪ್ರದರ್ಶನದ ಮೇಲೊಂದು ನೋಟ ಇಲ್ಲಿದೆ.

ಸಂಜು ಸ್ಯಾಮ್ಸನ್

ಲೀಗ್ ಹಂತದಲ್ಲಿ ಒಂದು ಪಂದ್ಯ ಮಾತ್ರ ಆಡಿದ್ದ ಸಂಜು ಸ್ಯಾಮ್ಸನ್ ಅವರ ಸ್ಥಾನ ತಂಡದಲ್ಲಿ ಗಟ್ಟಿಯಾಗಿರಲಿಲ್ಲ. ಆದರೆ, ಟೂರ್ನಿ ಮುಗಿಯುವ ಹೊತ್ತಿಗೆ ಅವರು ಮೂರು ಬಾರಿ ಪಂದ್ಯದ ಆಟಗಾರನಾದರಷ್ಟೇ ಅಲ್ಲ, ಟೂರ್ನಿಯ ಆಟಗಾರ ಹಿರಿಮೆಗೂ ಪಾತ್ರರಾದರು. ಸ್ಫೋಟಕ ಇನಿಂಗ್ಸ್ ಆಡುವ ಅಭಿಷೇಕ್ ಶರ್ಮಾ ಅವರ ವೈಫಲ್ಯ ಕೂಡ ಮರೆಮಾಚಿದರು. ಕೇವಲ 5 ಪಂದ್ಯಗಳಿಂದ ಅವರು ಪೇರಿಸಿದ್ದು 321 ರನ್. ಭಾರತದ ಪರ ಗರಿಷ್ಠ ರನ್ ಗಳಿಕೆದಾರರಲ್ಲಿ ಕೇರಳದ ಈ ಬ್ಯಾಟರ್ಗೆ ಅಗ್ರಸ್ಥಾನ.

ಅಭಿಷೇಕ್ ಶರ್ಮಾ ಅಲಭ್ಯರಾಗಿದ್ದ ಕಾರಣ ನಮೀಬಿಯಾ ವಿರುದ್ಧ ಆಡುವ ಅವಕಾಶ ಪಡೆದ ಅವರು ಆ ಪಂದ್ಯದಲ್ಲಿ 8 ಎಸೆತಗಳಲ್ಲಿ 22 ರನ್ ಗಳಿಸಿದ್ದರು. ಆದರೆ ಸೂಪರ್ ಎಂಟರ ಕೊನೆಯ ಎರಡು ಪಂದ್ಯಗಳಲ್ಲಿ ಮರಳಿ ಸ್ಥಾನ ಪಡೆದರು. ಜಿಂಬಾಬ್ವೆ ವಿರುದ್ಧ 24 ರನ್. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ‘ಕ್ವಾರ್ಟರ್ಫೈನಲ್’ ಎಂಬಂತಿದ್ದ ಸೂಪರ್ ಎಂಟರ ಪಂದ್ಯದಲ್ಲಿ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಅದು ಬಹುತೇಕ ಏಕಾಂಗಿ ಸಾಹಸವಾಗಿತ್ತು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಮತ್ತೆ 42 ಎಸೆತಗಳಲ್ಲಿ 89 ರನ್ ಗಳಿಸಿದರು. ಫೈನಲ್ನಲ್ಲಿ 46 ಎಸೆತಗಳಲ್ಲಿ ಗಳಿಸಿದ್ದು 89 ರನ್. ಎಲ್ಲವೂ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಸ್ಕೋರ್ಗಳು.

ಇಶಾನ್ ಕಿಶನ್

ವಿಶ್ವಕಪ್ಗೆ ಮೊದಲು ದೇಶೀಯ ಟೂರ್ನಿಗಳಲ್ಲಿ ತೋರಿದ ಉತ್ತಮ ಪ್ರದರ್ಶನ ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಸ್ಥಾನ ದೊರಕಿಸಿಕೊಟ್ಟಿತು. ಪದೇ ಪದೇ ವಿಫಲರಾಗಿದ್ದ ಉಪನಾಯಕ ಶುಭಮನ್ ಗಿಲ್ ಅವರನ್ನು ಕೈಬಿಟ್ಟು ವಿಶ್ವಕಪ್ ತಂಡಕ್ಕೆ ಇಶಾನ್ ಅವರಿಗೆ ಮಣೆಹಾಕಿದ್ದು ವ್ಯರ್ಥವಾಗಲಿಲ್ಲ. ಪಾಕಿಸ್ತಾನ ವಿರುದ್ಧ ಅವರ ಸ್ಫೋಟಕ ಆಟ (40 ಎಸೆತಗಳಲ್ಲಿ 77) ತಂಡ ಸವಾಲಿನ ಮೊತ್ತ ಗಳಿಸಲು ವೇದಿಕೆ ಒದಗಿಸಿತು.

ಫೈನಲ್ ಪಂದ್ಯದಲ್ಲೂ 25 ಎಸೆತಗಳಲ್ಲಿ ಅರ್ಧ ಶತಕಗಳಿಸಿ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಲು ತಮ್ಮ ಕಾಣಿಕೆಯನ್ನೂ ನೀಡಿದರು. ಮೂರು ಅಮೋಘ ಕ್ಯಾಚ್ಗಳನ್ನು ಪಡೆದರು. ಸೆಮಿಫೈನಲ್ನಲ್ಲಿ 4 ಸಿಕ್ಸರ್, ಎರಡು ಬೌಂಡರಿಗಳಿದ್ದ 18 ಎಸೆತಗಳಲ್ಲಿ 34 ರನ್ ಕೂಡ ಗಮನಾರ್ಹವೇ.

ಸೂರ್ಯಕುಮಾರ್ ಯಾದವ್

ಅಂಥ ಅನುಭವ ಹೊಂದಿಲ್ಲದ ಅಮೆರಿಕ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ 77 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದಾಗ ನಾಯಕ ಸೂರ್ಯಕುಮಾರ್ ಯಾದವ್ ಅವರು ಆಡಿದ ಆಟ ಮರೆಯುವಂತಿರಲಿಲ್ಲ. 49 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ್ದರಿಂದ ತಂಡ 161 ರನ್ಗಳ ಸವಾಲಿನ ಮೊತ್ತ ಗಳಿಸಿತು. 10 ಬೌಂಡರಿ,4 ಸಿಕ್ಸರ್ಗಳು ಆ ಆಟದಲ್ಲಿದ್ದವು.

ನಾಯಕತ್ವದಲ್ಲೂ ಅವರು ಗಮನಸೆಳೆದರು. ಒತ್ತಡದ ಸ್ಥಿತಿಯಲ್ಲೂ ಸಂಯಮದಿಂದ ತಂಡವನ್ನು ಮುನ್ನಡೆಸಿದರು. ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪವರ್ಪ್ಲೇ ಅವಧಿಯಲ್ಲಿ ಬೌಲರ್ಗಳನ್ನು ಚಾಣಾಕ್ಷತೆಯಿಂದ ಬಳಸಿದ್ದು ಅವರ ತಂತ್ರಗಾರಿಕೆಗೆ ನಿದರ್ಶನ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ತಂಡದ ಆಯ್ಕೆಯಲ್ಲೂ ಅವರು ಎಚ್ಚರಿಕೆ ವಹಿಸಿದ್ದು ಫಲ ನೀಡಿತು.

ಜಸ್ಪ್ರೀತ್ ಬೂಮ್ರಾ

ಬೂಮ್ರಾ 2024ರ ವಿಶ್ವಕಪ್ನಲ್ಲೂ ಭಾರತದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದರು. ಆರಂಭದಲ್ಲೇ ಆಗಲಿ, ಡೆತ್ ಓವರ್ಗಳಲ್ಲೇಆಗಲಿ ತಮ್ಮ ಕರಾರುವಾಕ್ ಯಾರ್ಕರ್, ಲೆಂಗ್ತ್ಗಳಿಂದ ಎದುರಾಳಿ ಬ್ಯಾಟರ್ಗಳನ್ನು ತಬ್ಬಿಬ್ಬುಗೊಳಿಸುವ ಬೂಮ್ರಾ ಭಾರತದ ಪಾಲಿಗೆ ಟ್ರಂಪ್ಕಾರ್ಡ್.

ಎಂಟು ಪಂದ್ಯಗಳಲ್ಲಿ 14 ವಿಕೆಟ್ ಪಡೆದ 32 ವರ್ಷ ವಯಸ್ಸಿನ ಈ ವೇಗಿ ಯಶಸ್ವಿ ಬೌಲರ್ಗಳ ಪಟ್ಟಿಯಲ್ಲಿ ಅರ್ಹವಾಗಿ ಅಗ್ರಸ್ಥಾನ ಪಡೆದರು. 2024ರ ಫೈನಲ್ನಲ್ಲಿ ಅವರು 4 ಓವರುಗಳಲ್ಲಿ 14 ರನ್ನಿತ್ತು 2 ವಿಕೆಟ್ ಪಡೆದಿದ್ದರು. ಅಂಥದ್ದೇ ಲಯವನ್ನು ಕಾಪಾಡಿಕೊಂಡಿದ್ದು ಅವರ ಹೆಚ್ಚುಗಾರಿಕೆ. ಇಂಗ್ಲೆಂಡ್ ವಿರುದ್ಧ ಅವರು ಮಾಡಿದ ಕೊನೆಯ ಎರಡು ಓವರ್ಗಳು ಭಾರತ ತಂಡದ ಗೆಲುವಿಗೆ ಕಾರಣವಾದವು.

ಅಕ್ಷರ್ ಪಟೇಲ್

ಬೌಲರ್ ಆಗಿ ವಿಕೆಟ್ ಪಡೆಯುವಲ್ಲಿ ಸ್ವಲ್ಪ ಹಿಂದೆ ಬಿದ್ದರೂ, ‘ಟೀಮ್ ಮ್ಯಾನ್’ ಆಗಿ ಅಕ್ಷರ್ ಪಟೇಲ್ ನಿರಾಸೆಗೊಳಿಸಲಿಲ್ಲ. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಅಪಾಯಕಾರಿ ಆಟಗಾರ ಫಿನ್ ಅಲೆನ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ಗಳನ್ನು ಪವರ್ಪ್ಲೇ ಅವಧಿಯೊಳಗೆ ಪಡೆದು ಭಾರತಕ್ಕೆ ನಿರ್ಣಾಯಕ ಮೇಲುಗೈ ಒದಗಿಸಿದರು.

ಆದರೆ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಫೀಲ್ಡಿಂಗ್ನಲ್ಲಿ ಮಿಂಚಿದರು. ಕಿಕ್ಕಿರಿದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಪಾಯಿಂಟ್ನಿಂದ ಹಿಮ್ಮುಖವಾಗಿ ಓಡಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರ ಕ್ಯಾಚನ್ನು ಪಡೆದಿದ್ದು ಗಮನ ಸೆಳೆದಿತ್ತು. ಇನ್ನೊಬ್ಬ ಅಪಾಯಕಾರಿ ಆಟಗಾರ ವಿಲ್ ಜ್ಯಾಕ್ಸ್ ಅವರ ವಿಕೆಟ್ ಪಡೆಯುವಲ್ಲೂ ಅಕ್ಷರ್ ಅವರ ಪಾತ್ರವಿತ್ತು. ಬೌಂಡರಿಲೈನ್ ಬಳಿ ಓಡುತ್ತ ಕ್ಯಾಚ್ ಹಿಡಿದ ಅವರು ಆಯತಪ್ಪಿ ಬೌಂಡರಿ ಲೈನ್ ದಾಟುವ ಹಂತದಲ್ಲಿರುವಾಗ ಅದನ್ನು ಶಿವಂ ದುಬೆ ಅವರಿಗೆ ‘ಹಸ್ತಾಂತರಿಸಿದ’ ರೀತಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂಥದ್ದು.

ಹಾರ್ದಿಕ್ ಪಾಂಡ್ಯ

ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಯನ್ನೂ ಈ ವಿಶ್ವಕಪ್ನಲ್ಲಿ ಮರೆಯುವಂತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ರನ್ ವೇಗ ಹೆಚ್ಚಿಸಲು ನೆರವಾಗುವ ಅವರು ಎರಡು ಅರ್ಧಶತಕಗಳನ್ನು ಗಳಿಸಿದರು. ಹೆಚ್ಚಿನ ಪಂದ್ಯಗಳಲ್ಲಿ ಆರಂಭದಲ್ಲೇ ದಾಳಿಗಿಳಿದು ಒಟ್ಟು 9 ವಿಕೆಟ್ಗಳನ್ನು ಪಡೆದರು.

ಜಿಂಬಾಬ್ವೆ ವಿರುದ್ಧ ಅಜೇಯ 50 ರನ್ ಗಳಿಸಿದ್ದ ಅವರು, ನಮೀಬಿಯಾ ವಿರುದ್ಧ 21 ರನ್ನಿಗೆ 2 ವಿಕೆಟ್ ಪಡೆದರು. ಆ ಪಂದ್ಯದಲ್ಲಿ 28 ಎಸೆತಗಳಲ್ಲಿ 52 ರನ್ ಹೊಡೆದು ಪಂದ್ಯದ ಆಟಗಾರ ಗೌರವಕ್ಕೂ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.