ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನಿರುದ್ಯೋಗವೇ ಚುನಾವಣಾ ವಿಷಯ

Published 18 ಮೇ 2023, 19:45 IST
Last Updated 18 ಮೇ 2023, 19:45 IST
ಅಕ್ಷರ ಗಾತ್ರ

–ವಿಭಾ ಅತ್ರಿ ಮತ್ತು ಹಿಮಾಂಶು ಕಪೂರ್

ರಾಜ್ಯದಲ್ಲಿ 5 ವರ್ಷಗಳಲ್ಲಿ 33 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಕಳೆದ ಒಂದು ವರ್ಷದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ದೊಡ್ಡ ಬೆಂಬಲವಾಗಿ ನಿಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡದ ಐಐಟಿ ಉದ್ಘಾಟನೆ ಸಮಯದಲ್ಲಿ ಹೇಳಿದ್ದರು. ಈ ಕಾರಣದಿಂದ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಿದೆ ಎಂದು ಅವರು ಹೇಳಿದ್ದರು. ಆದರೆ, ಲೋಕನೀತಿ–ಸಿಎಸ್‌ಡಿಎಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ನಿರುದ್ಯೋಗವೇ ರಾಜ್ಯದ ಅತಿದೊಡ್ಡ ಚುನಾವಣಾ ವಿಷಯವಾಗಿತ್ತು ಎಂಬುದು ತಿಳಿದುಬಂದಿದೆ.

ರಾಜ್ಯದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಆರೋಪಗಳ ಬಗ್ಗೆ ಮೌನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದರು. ಆದರೆ ಭ್ರಷ್ಟಾಚಾರವು ಅತಿಮುಖ್ಯ ವಿಷಯ ಎಂದು ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ ಶೇ 4ರಷ್ಟು ಜನರು ಹೇಳಿದ್ದಾರೆ. 2018ರ ಚುನಾವಣೆಯ ವೇಳೆ ನಿರುದ್ಯೋಗವು ಚುನಾವಣೆಯಲ್ಲಿ ದೊಡ್ಡ ವಿಷಯವಾಗಿರಲಿಲ್ಲ. ಅಭಿವೃದ್ಧಿ ಆಗಿಲ್ಲ ಎಂಬುದೇ ಆಗ ದೊಡ್ಡ ಸಮಸ್ಯೆ ಎನಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ನಿರುದ್ಯೋಗವೇ ಮತದಾರರ ಮನಸ್ಸಿನಲ್ಲಿ ದೊಡ್ಡ ವಿಷಯ ಎನಿಸಿದೆ. 

ಮತ ಯಾರಿಗೆ ನಿರ್ಧರಿಸುವ ನಾಲ್ಕು ಮುಖ್ಯ ವಿಷಯಗಳು

ಚುನಾವಣೆಯಲ್ಲಿ ನಿರುದ್ಯೋಗ, ಬಡತನ, ಅಭಿವೃದ್ಧಿ ಕೊರತೆ ಹಾಗೂ ಬೆಲೆ ಏರಿಕೆ ಮುಖ್ಯ ವಿಷಯಗಳು ಎಂದು ಹೇಳಿದವರ ಪೈಕಿ, ಯಾವ ಸರ್ಕಾರವನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, ಅವರ ಮೊದಲ ಆಯ್ಕೆ ಕಾಂಗ್ರೆಸ್ ಆಗಿತ್ತು. ನಿರುದ್ಯೋಗ ಹಾಗೂ ಬಡತನ ವಿಚಾರಗಳೇ ಅತಿಮುಖ್ಯ ಎಂದು ಹೇಳಿದ ಹತ್ತರಲ್ಲಿ ಐದು ಜನರು ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ನಿರುದ್ಯೋಗ ಮುಖ್ಯ ವಿಷಯ ಎಂದ ಶೇ 47ರಷ್ಟು ಹಾಗೂ ಬಡತನ ಮುಖ್ಯ ವಿಷಯ ಎಂದ ಶೇ 46ರಷ್ಟು ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. 10ರಲ್ಲಿ ಮೂರು ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಬೆಲೆ ಏರಿಕೆ ಮುಖ್ಯ ಎಂದು ಹೇಳಿದ //ಶೇ 6ರಷ್ಟು ಜನರ ಪೈಕಿ// 10ರಲ್ಲಿ ಆರು ಜನರು ಕಾಂಗ್ರೆಸ್‌ಗೆ, 10ರಲ್ಲಿ ಮೂರು ಜನರು ಬಿಜೆಪಿಗೆ ಆದ್ಯತೆ ನೀಡಿದ್ದಾರೆ. 

ಆದರೆ, ಸರಿಯಾದ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದ ಶೇ 15ರಷ್ಟು ಜನರಲ್ಲಿ ಅರ್ಧದಷ್ಟು ಜನರು ತಾವು ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಾರೆ.  ಅವರಲ್ಲಿ ಕಾಂಗ್ರೆಸ್‌ಗೆ ಶೇ 29ರಷ್ಟು ಜನರು ಹಾಗೂ ಜೆಡಿಎಸ್‌ಗೆ ಶೇ 15ರಷ್ಟು ಜನರು ಆದ್ಯತೆ ನೀಡಿದ್ದಾರೆ. ನಿರುದ್ಯೋಗ ಹಾಗೂ ಬಡತನ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ಎಡವಿರುವುದೇ ಕಾಂಗ್ರೆಸ್‌ ಗೆಲುವಿಗೆ ಭಾಗಶಃ ನೆರವಾಗಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. 

*ಹತ್ತರಲ್ಲಿ ಮೂರು ಜನರು ನಿರುದ್ಯೋಗವೇ ದೊಡ್ಡ ವಿಷಯ ಎಂದು ಹೇಳಿದ್ದಾರೆ (ಶೇ 30)

*ಬಡತನವು ಎರಡನೇ ದೊಡ್ಡ ಚುನಾವಣಾ ವಿಷಯವಾಗಿದೆ. ಶೇ 21ರಷ್ಟು ಜನರು ಬಡತನದತ್ತ ಬೊಟ್ಟು ಮಾಡಿದ್ದಾರೆ

*ಬೆಲೆ ಏರಿಕೆಯು ಶೇ 6ರಷ್ಟು ಜನರಿಗೆ ದೊಡ್ಡ ವಿಷಯವಾಗಿದೆ

*ಅಭಿವೃದ್ಧಿ ಆಗಿಲ್ಲ ಎಂಬುದೇ ದೊಡ್ಡ ವಿಷಯ ಎಂದು ಶೇ 15ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ

*ಕಳಪೆ ಗುಣಮಟ್ಟದ ಶಿಕ್ಷಣ ಚುನಾವಣಾ ವಿಷಯ ಎಂದು ಹತ್ತರಲ್ಲಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ

ಲೇಖಕರು: ಲೋಕನೀತಿ–ಸಿಎಸ್‌ಡಿಎಸ್‌ನಲ್ಲಿ ಸಂಶೋಧಕರು

ನಿರುದ್ಯೋಗವೇ ದೊಡ್ಡ ಸಮಸ್ಯೆ (ಪೈ ಚಾರ್ಟ್)

2023ರ ಪ್ರಮುಖ ಚುನಾವಣಾ ವಿಷಯಗಳು 

ನಿರುದ್ಯೋಗ;30%

ಬಡತನ;21%

ಅಭಿವೃದ್ಧಿಯ ಕೊರತೆ;15%

ಬೆಲೆಏರಿಕೆ/ಹಣದುಬ್ಬರ;6%

ಶಿಕ್ಷಣ/ಶಾಲೆ/ಕಾಲೇಜು ಸಂಬಂಧಿತ ವಿಷಯ;6%

ಭ್ರಷ್ಟಾಚಾರ/ಹಗರಣ;4%

ಇತರೆ ವಿಷಯಗಳು;12%

ಪ್ರತಿಕ್ರಿಯೆ ಇಲ್ಲ;6%

–––––––– 

ಮತ ಯಾರಿಗೆ ನಿರ್ಧರಿಸುವ ನಾಲ್ಕು ಮುಖ್ಯ ವಿಷಯಗಳು

ವಿಷಯಗಳು;ಕಾಂಗ್ರೆಸ್;ಬಿಜೆಪಿ;ಜೆಡಿಎಸ್;ಇತರೆ

ನಿರುದ್ಯೋಗ; 47;30;18;5

ಬಡತನ; 48;33;12;7

ಅಭಿವೃದ್ಧಿಯ ಕೊರತೆ;29;48;15;8

ಬೆಲೆಏರಿಕೆ/ಹಣದುಬ್ಬರ; 60;28;8;4

(ಸಮೀಕ್ಷೆಯಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ನೀಡಲಾಗಿತ್ತು. ಉಳಿದ ವಿಷಯಗಳು ಇತರೆ ವರ್ಗದಲ್ಲಿದ್ದವು. ಈ ಚುನಾವಣೆಯಲ್ಲಿ ಯಾವ ಪಕ್ಷವನ್ನು ಆಯ್ಕೆ ಮಾಡಬೇಕು ಎಂದು ನೀವು ನಿರ್ಧರಿಸುವಾಗ, ನೀವು ಯಾವ ಮುಖ್ಯ ಚುನಾವಣಾ ವಿಷಯಗಳನ್ನು ಪರಿಗಣಿಸುತ್ತೀರಿ ಎಂಬ ಪ್ರಶ್ನೆ ಕೇಳಲಾಗಿತ್ತು)

––––

ಉದ್ಯೋಗ ಅವಕಾಶಗಳು ಹೆಚ್ಚಿವೆಯೇ? (ಪೈ)

ಹೆಚ್ಚಳ ಆಗಿವೆ;28%

ಹಾಗೆಯೇ ಇವೆ;42%

ಕಡಿಮೆ ಆಗಿವೆ;26%

ಪ್ರತಿಕ್ರಿಯಿಸದವರು;4%

(ಕಳೆದ ಐದು ವರ್ಷಗಳಲ್ಲಿ, ನಿಮ್ಮ ಪ್ರದೇಶದಲ್ಲಿ ಈ ವಿಷಯವು ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ?) (ಚುನಾವಣೆಗೆ ಮುನ್ನ ಕೇಳಲಾಗಿದ್ದ ಪ್ರಶ್ನೆ)

–––––––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT