ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ; ಸಾಮಾಜಿಕ ಪರಿಣಾಮಗಳೂ ಗಣನೆಗೆ
ಕೆ.ಪಿ.ಕೃಷ್ಣನ್
Published : 28 ಏಪ್ರಿಲ್ 2026, 21:30 IST
Last Updated : 28 ಏಪ್ರಿಲ್ 2026, 21:30 IST
ADVERTISEMENT
ಫಾಲೋ ಮಾಡಿ
Comments
ರಾಜ್ಯ ಸರ್ಕಾರವು ಮದ್ಯದ ಮೇಲಿನ ಅಬಕಾರಿ ಸುಂಕದ ಸ್ವರೂಪದಲ್ಲಿ ಬದಲಾವಣೆ ತರಲು ಮುಂದಾಗಿದೆ. ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಮತ್ತು ಅದು ಉಂಟುಮಾಡುವ ಸಾಮಾಜಿಕ ಪರಿಣಾಮಗಳನ್ನೂ ಪರಿಗಣಿಸಿ ತೆರಿಗೆ ವಿಧಿಸುವ ಸಂಬಂಧ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ಹೆಚ್ಚು ಆಲ್ಕೋಹಾಲ್ ಇರುವ, ಸಮಾಜದ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುವ ಮದ್ಯದ ಮೇಲಿನ ತೆರಿಗೆ ಪ್ರಮಾಣ ಹೆಚ್ಚಾಗಲಿದೆ. ಮದ್ಯ ನಿಷೇಧದ ಬದಲಿಗೆ ಬೇರೊಂದು ರೀತಿಯಲ್ಲಿ ಕುಡಿತದ ಸಮಸ್ಯೆ–ಸವಾಲುಗಳನ್ನು ಎದುರಿಸಲು ಪೂರಕವಾಗುವಂತೆ ಹೊಸ ನಿಯಮಗಳನ್ನು ರೂಪಿಸಲಾಗಿದೆ.