ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶದಲ್ಲಿ ‘ನೀಟ್’ ಜಾರಿಯಾದ ನಂತರ ಮೊದಲ ಬಾರಿಗೆ ಮರುಪರೀಕ್ಷೆ ನಡೆಯುತ್ತಿದೆ. ಅಪಾರ ಒತ್ತಡ ಭರಿಸಿ, ಹಣ ವ್ಯಯಿಸಿ, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಗೋಪುರ ಕುಸಿದಿದ್ದು, ಭರವಸೆಗೆ ಭಂಗ ಉಂಟಾಗಿದೆ. ಇದು ದೇಶದ ಪರೀಕ್ಷಾ ವ್ಯವಸ್ಥೆಯ ಬಗ್ಗೆಯೇ ವಿದ್ಯಾರ್ಥಿಗಳು ಭ್ರಮನಿರಸನಗೊಳ್ಳುವಂತೆ ಮಾಡಿದೆ. ವಿದ್ಯಾರ್ಥಿಗಳ ಬದುಕು ಬದಲಿಸುವ ಪರೀಕ್ಷೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ಎನ್‌ಟಿಎ ಅನ್ನು ರದ್ದು ಮಾಡಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ. ಜತೆಗೆ, ಕೇಂದ್ರೀಕೃತ ಪ್ರವೇಶ ಪರೀಕ್ಷೆಗಳ ಬಗ್ಗೆಯೂ ಮರುಚಿಂತನೆ ಮಾಡುವ ಅಗತ್ಯ ಸೃಷ್ಟಿಸಿದೆ...