ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮೀಸಲಾತಿ ಬದಲಾವಣೆ ಪರಿಣಾಮ ಬೀರಿದ್ದೆಷ್ಟು?

ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷೆಯಲ್ಲಿ, ಬಿಜೆಪಿ ಸರ್ಕಾರದ ಮೀಸಲಾತಿ ನೀತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.
Published 18 ಮೇ 2023, 19:40 IST
Last Updated 18 ಮೇ 2023, 19:40 IST
ಅಕ್ಷರ ಗಾತ್ರ

-ವೀಣಾ ದೇವಿ, ನಾಗೇಶ್ ಕೆ.ಎಲ್‌.

ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷೆಯಲ್ಲಿ, ಬಿಜೆಪಿ ಸರ್ಕಾರದ ಮೀಸಲಾತಿ ನೀತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಸರ್ಕಾರದ ಮೀಸಲಾತಿ ನೀತಿಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಗ್ರಹಿಸುವುದೇ ಈ ಪ್ರಶ್ನೆಯ ಹಿಂದಿನ ಉದ್ದೇಶವಾಗಿತ್ತು. ಆದರೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರಲ್ಲಿ ಮೂರನೇ ಒಂದರಷ್ಟು ಜನರು ಮಾತ್ರ ಬಿಜೆಪಿ ಸರ್ಕಾರದ ಮೀಸಲಾತಿಯ ಬಗ್ಗೆ ಕೇಳಿದ್ದೇವೆ ಎಂದು ಉತ್ತರ ನೀಡಿದ್ದರು.

ಮೀಸಲಾತಿಯ ಬಗ್ಗೆ ಕೇಳಿದ್ದೇವೆ ಎಂದವರಿಗೆ ಪೂರಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಲಿಂಗಾಯತರು ಮತ್ತು ಒಕ್ಕಲಿಗರಿಗೆ ಪ್ರತ್ಯೇಕ ಮೀಸಲಾತಿ ಹಾಗೂ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳವನ್ನು ಮೂರನೇ ಎರಡರಷ್ಟು ಜನರು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಸ್ವಲ್ಪ ಬೆಂಬಲಿಸುತ್ತೇವೆ ಎಂದು ಹೇಳಿದ್ದರು. ಮುಸ್ಲಿಮರ ಮೀಸಲಾತಿ ರದ್ದತಿಯನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರ ಪ್ರಮಾಣ ಸರಿಸುಮಾರು ಒಂದೇ ರೀತಿ ಇದೆ.

ಬಿಜೆಪಿ ಸರ್ಕಾರದ ಮೀಸಲಾತಿ ನೀತಿಯನ್ನು ಬೆಂಬಲಿಸಿದವರು, ಮತದಾನದ ವೇಳೆ ಬಿಜೆಪಿಗೇ ಮತ ಹಾಕಲು ನಿರ್ಧರಿಸಿರಬಹುದು. ಅದರಂತೆಯೇ ಮೀಸಲಾತಿ ನೀತಿಯನ್ನು ವಿರೋಧಿಸುವವರು, ಕಾಂಗ್ರೆಸ್‌ಗೆ ಮತ ನೀಡಲು ನಿರ್ಧರಿಸಬಹುದು. ಬಿಜೆಪಿ ಸರ್ಕಾರದ ಮೀಸಲಾತಿ ನೀತಿಯ ಬಗ್ಗೆ ಗೊತ್ತಿದ್ದವರ ಪ್ರಮಾಣವೇ ಕಡಿಮೆ ಇತ್ತು. ಅಂತಹವರಲ್ಲಿ ಅರ್ಧದಷ್ಟು ಜನರು ಬಿಜೆಪಿಯನ್ನು ಬೆಂಬಲಿಸಿರುವ ಸಾಧ್ಯತೆ ಇದೆ.

ಲೇಖಕರು: ವೀಣಾ ದೇವಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್‌, ಡಾ.ನಾಗೇಶ್ ಕೆ.ಎಲ್‌. ಅವರು ಉಪನ್ಯಾಸಕ

ಹೊಸ ಮೀಸಲಾತಿ ನೀತಿಯ ಬಗ್ಗೆ ಅರಿವು

33% ಹೊಸ ಮೀಸಲಾತಿ ನೀತಿಯ ಬಗ್ಗೆ ಕೇಳಿದ್ದೇವೆ ಎಂದವರ ಪ್ರಮಾಣ

67% ಹೊಸ ಮೀಸಲಾತಿ ನೀತಿಯ ಬಗ್ಗೆ ಕೇಳಿಲ್ಲ/ಆ ಬಗ್ಗೆ ಗೊತ್ತಿಲ್ಲ ಎಂದವರ ಪ್ರಮಾಣ

––––––

ಹೊಸ ಮೀಸಲಾತಿ ನೀತಿಯ ವಿವಿಧ ಬದಲಾವಣೆಗಳಿಗೆ ಮತದಾರರ ಬೆಂಬಲದ ಸ್ವರೂಪ

ಬದಲಾವಣೆ;ಸಂಪೂರ್ಣ ಬೆಂಬಲ;ಸ್ವಲ್ಪ ಬೆಂಬಲ;ಸ್ವಲ್ಪ ವಿರೋಧ;ಸಂಪೂರ್ಣ ವಿರೋಧ;ಪ್ರತಿಕ್ರಿಯೆ ನೀಡದವರು

ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ;28%;45%;12%;12%;3%

ಒಕ್ಕಲಿಗರಿಗೆ ಪ್ರತ್ಯೇಕ ಮೀಸಲಾತಿ;27%;37%;20%;13%;3%

ಪರಿಶಿಷ್ಟ ಜಾತಿಗಳ ಮೀಸಲಾತಿ ಏರಿಕೆ;27%;41%;17%;13%;2%

ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಏರಿಕೆ;26%;41%;18%;12%;3%

ಮುಸ್ಲಿಮರ ಮೀಸಲಾತಿ ರದ್ದು;24%;25%;23%;24%;6%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT