ಹಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 10 ಮೀಟರ್ಸ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡವು ಚಿನ್ನ ಗೆದ್ದಿದೆ.
ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರ ತಂಡವು ಚೀನಾ ತಂಡವನ್ನು ಸೋಲಿಸುವ ಮೂಲಕ ಪದಕ ಜಯಿಸಿತು. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕವನ್ನು ಗಳಿಸಿಕೊಟ್ಟಿತು.
ಇಂದಿನ ಯಶಸ್ಸಿನೊಂದಿಗೆ ಭಾರತದ ಶೂಟರ್‌ಗಳು ಇದುವರೆಗೆ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಭಾರತದ ತಂಡವು ಒಟ್ಟು 1734 ಅಂಕಗಳನ್ನು ಪಡೆಯುವ ಮೂಲಕ ಚೀನೀ ತಂಡಕ್ಕೆ ಕೇವಲ ಒಂದು ಅಂಕದಿಂದ ಸೋಲುಣಿಸಿತು. ವಿಯೆಟ್ನಾಂ 1730 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿತು.
ಸರಬ್ಜೋತ್ ಮತ್ತು ಅರ್ಜುನ್ ಎಂಟು ಶೂಟರ್‌ಗಳ ಫೈನಲ್‌ಗೂ ಪ್ರವೇಶಿಸಿದ್ದು, ವೈಯಕ್ತಿಕ ಪದಕಗಳಿಗೂ ಸ್ಪರ್ಧೆಯಲ್ಲಿದ್ದಾರೆ.