ಅಮೆರಿಕದ ಡೊನಾಲ್ಡ್ ಟ್ರಂಪ್ ಅವರ ಸರ್ಕಾರವು ಗ್ರೀನ್ ಕಾರ್ಡ್ಗೆ ಸಂಬಂಧಿಸಿ ಮತ್ತೊಂದು ಹೊಸ ನಿಯಮ ತಂದಿದ್ದು, ಅದು ಹಲವು ರೀತಿಯ ಆತಂಕ, ಗೊಂದಲಕ್ಕೆ ಕಾರಣವಾಗಿದೆ. ತಾತ್ಕಾಲಿಕ ವೀಸಾ ಅಡಿ ಅಮೆರಿಕದಲ್ಲಿದ್ದು, ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವವರು ತಮ್ಮ ಮಾತೃದೇಶದಿಂದಲೇ ಪ್ರಕ್ರಿಯೆ ಮುಂದುವರಿಸಬೇಕು ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ ವಿಭಾಗವು (ಯುಎಸ್ಸಿಐಎಸ್) ಘೋಷಿಸಿದೆ. ಆ ನಿಯಮವು ಅಮೆರಿಕದಲ್ಲಿರುವ ಅನೇಕ ಭಾರತೀಯರಿಗೆ ಸಹಜವಾಗಿಯೇ ಆತಂಕ ಮೂಡಿಸಿದೆ. ವಾರದ ನಂತರ ಅಮೆರಿಕ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಅಷ್ಟು ಭಯಪಡಬೇಕಿಲ್ಲ ಎಂದು ಹೇಳಿದೆ....

ಅಮೆರಿಕ ಪೌರತ್ವ ಮತ್ತ ವಲಸೆ ಸೇವೆಗಳ ವಿಭಾಗವು (ಯುಎಸ್ಸಿಐಎಸ್) ನೀಡಿದ ಒಂದು ಪುಟ್ಟ ಪ್ರಕಟಣೆ ಲಕ್ಷಾಂತರ ಅಮೆರಿಕ ವಾಸಿಗಳಲ್ಲಿ ತಲ್ಲಣ ಉಂಟುಮಾಡಿದೆ. ಎಚ್1 ಬಿ ವೀಸಾ ಸೇರಿದಂತೆ ತಾತ್ಕಾಲಿಕ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿದ್ದು, ಗ್ರೀನ್ ಕಾರ್ಡ್ (ಕಾಯಂ ನಿವಾಸಿ ಪ್ರಮಾಣಪತ್ರ) ಪಡೆಯಲು ಅರ್ಜಿ ಸಲ್ಲಿಸಿರುವವರು/ಸಲ್ಲಿಸಲಿರುವವರು ತಮ್ಮ ಮಾತೃದೇಶಗಳಿಗೆ ಹಿಂದಿರುಗಿ, ಅಲ್ಲಿನ ಕಾನ್ಸುಲೇಟ್ ಕಚೇರಿಯ ಮೂಲಕ ಪ್ರಕ್ರಿಯೆ ಮುಂದುವರಿಸಬೇಕು ಎನ್ನುವುದು ಆ ಪ್ರಕಟಣೆಯ ಸಾರ. ತಾತ್ಕಾಲಿಕ ವೀಸಾ ಆಧಾರದಲ್ಲಿ ಅಮೆರಿಕದಲ್ಲಿರುವವರು, ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದು, ಗಂಡ/ಹೆಂಡತಿ, ಮಕ್ಕಳ ಪ್ರಾಯೋಜಕತ್ವದ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ದೇಶ ತೊರೆಯಬೇಕಿದೆ.

ಎಚ್–1ಬಿ, ಎಲ್–1 ವೀಸಾ ಮತ್ತು ವಿದ್ಯಾರ್ಥಿ ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಬಂದವರೂ ದೇಶದಲ್ಲಿಯೇ ಉಳಿದುಕೊಂಡು ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಮತ್ತು ಪಡೆಯಲು ಇದುವರೆಗೆ ಅವಕಾಶವಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವೀಸಾ ಕುರಿತ ವಿಳಂಬ, ಗೊಂದಲ ಇತ್ಯಾದಿ ಇಲ್ಲದಂತೆ ನಿರ್ವಿಘ್ನವಾಗಿ ಕೆಲಸ ಮಾಡಲು ಈ ನಿಯಮವು ಅನುಕೂಲಕರವಾಗಿತ್ತು.

ಅಮೆರಿಕಕ್ಕೆ ಎಚ್–1ಬಿ ವೀಸಾ ಅಡಿ ತೆರಳುವವರ ಪೈಕಿ ಭಾರತೀಯರೇ ಹೆಚ್ಚು (ಶೇ 70). ಹೀಗಾಗಿ ಭಾರತೀಯರಲ್ಲಿ ಇದು ಆತಂಕ ಮೂಡಿಸಿದೆ. ತಾತ್ಕಾಲಿಕ ವೀಸಾ ಮೇಲೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರು, ಕೆಲಸ ಅರಸುತ್ತಿರುವವರು ತಕ್ಷಣವೇ ದೇಶ ತೊರೆಯಬೇಕಾದಂಥ ಪರಿಸ್ಥಿತಿ ಉದ್ಭವಿಸಿತ್ತು. ಆದರೆ, ಮೇ 21ರಂದು ಘೋಷಿಸಿದ್ದ ಈ ನಿಯಮಕ್ಕೆ ಅಮೆರಿಕದವರಿಂದಲೇ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಪ್ರಗತಿಗೆ ಇದು ಮಾರಕ ಎಂದು ಸಂಘಸಂಸ್ಥೆಗಳು ಟೀಕಿಸಿದವು. ಅದರ ಬೆನ್ನಲ್ಲೇ ಅಮೆರಿಕ ಸರ್ಕಾರವು ಈ ನಿಯಮವನ್ನು ಸಡಿಲಿಸಿದೆ. ಈ ಬಗ್ಗೆ ಯುಎಸ್ಸಿಐಎಸ್ ಸ್ಪಷ್ಟೀಕರಣ ನೀಡಿದೆ. ‘ಅಮೆರಿಕದಲ್ಲಿ ವೃತ್ತಿಪರರಾಗಿದ್ದು, ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವವರೆಲ್ಲರೂ ದೇಶ ತೊರೆಯಬೇಕಾದ ಅಗತ್ಯವೇನಿಲ್ಲ. ತಮ್ಮ ವೃತ್ತಿಯಿಂದ ಅಮೆರಿಕದ ಆರ್ಥಿಕತೆಗೆ ಲಾಭವಾಗುತ್ತಿದೆ ಎಂದು, ತಮ್ಮ ಕೆಲಸ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಸಾಬೀತುಪಡಿಸಿದರೆ, ಅಂಥವರಿಗೆ ಅಮೆರಿಕದಲ್ಲಿಯೇ ಉಳಿಯಲು ಅವಕಾಶ ನೀಡಲಾಗುತ್ತದೆ’ ಎಂದು ಸ್ಪಷ್ಟೀಕರಣದಲ್ಲಿ ಹೇಳಲಾಗಿದೆ.

ಯುಎಸ್ಸಿಐಎಸ್ ಸ್ಪಷ್ಟೀಕರಣದ ನಂತರವೂ ಹೊಸ ನಿಯಮದ ವಿಚಾರದಲ್ಲಿ ಗೊಂದಲ ಇದೆ. ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದ ನಂತರ ವಲಸೆ ನೀತಿಯಲ್ಲಿ ಭಾರಿ ಬದಲಾವಣೆಗಳು ಘಟಿಸುತ್ತಿವೆ. ‘ಅಮೆರಿಕ ಮೊದಲು’ ಎನ್ನುವ ಪ್ರತಿಪಾದನೆಯೊಂದಿಗೆ ವಲಸಿಗರನ್ನು ಶತ್ರುಗಳಂತೆ ನೋಡುವ ಪರಿಪಾಟ ಅಮೆರಿಕದಲ್ಲಿ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಹಲವು ವರ್ಷಗಳಿಂದ ನೆಲಸಿ, ಅಲ್ಲಿಯೇ ಮನೆ ನಿರ್ಮಿಸಿಕೊಂಡು, ನೆಲೆ ಕಂಡುಕೊಂಡಿರುವ ಅನೇಕ ಭಾರತೀಯ ಕುಟುಂಬಗಳಲ್ಲಿ ಇದು ಅನಿಶ್ಚಿತತೆ, ಆತಂಕ ಸೃಷ್ಟಿಸಿದೆ.

ಗ್ರೀನ್ ಕಾರ್ಡ್ ಕನಸು

ಅಮೆರಿಕಕ್ಕೆ ಹೋಗುವ ಬಹುತೇಕರಿಗೆ ಗ್ರೀನ್ ಕಾರ್ಡ್ ಪಡೆಯುವುದು ಒಂದು ಕನಸು. ಗ್ರೀನ್ ಕಾರ್ಡ್ ಎಂದರೆ, ಕಾನೂನುಬದ್ಧ ಕಾಯಂ ನಿವಾಸಿ ಪ್ರಮಾಣ ಪತ್ರ. ಇದನ್ನು ಹೊಂದಿರುವವರು ಅಮೆರಿಕದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧ ವೀಸಾಗಳ ಆಧಾರದಲ್ಲಿ ಅಮೆರಿಕಕ್ಕೆ ಭೇಟಿ ನೀಡುವವರು ಗ್ರೀನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ, ದಶಕಗಟ್ಟಲೇ ಕಾಯುತ್ತಾರೆ. ಯಾವ ವೀಸಾದಡಿ ಅಮೆರಿಕಕ್ಕೆ ಭೇಟಿ ನೀಡಲಾಗಿದೆ, ಅವರು ಅರ್ಜಿ ಸಲ್ಲಿಸಿ ಎಷ್ಟು ದಿನವಾಗಿದೆ (ಸೀನಿಯಾರಿಟಿ) ಎನ್ನುವುದರ ಆಧಾರದ ಮೇಲೆ ಗ್ರೀನ್ ಕಾರ್ಡ್ ನೀಡಲಾಗುತ್ತದೆ.

ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಅಮೆರಿಕ ಈ ವಿಚಾರದಲ್ಲಿ ಕೆಲವು ನಿಯಮಗಳನ್ನು ಅನುಸರಿಸುತ್ತದೆ. ವಾರ್ಷಿಕವಾಗಿ 1.4 ಲಕ್ಷ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ಗಳನ್ನು ಮಾತ್ರ ನೀಡಲಾಗುತ್ತಿದ್ದು, ಪ್ರತಿ ದೇಶಕ್ಕೆ ಶೇ 7ರ ಕೋಟಾ ನಿಗದಿಪಡಿಸಿದೆ. ಅಮೆರಿಕಕ್ಕೆ ವಲಸೆ ಹೋಗುವವರ ಪೈಕಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಹಜವಾಗಿಯೇ ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರ ಪೈಕಿ ಕೂಡ ಭಾರತೀಯರು ಹೆಚ್ಚಾಗಿದ್ದು, ಹಿರಿತನದ ಸರದಿ ಬರಲು ಬಹಳ ವರ್ಷ ಕಾಯಬೇಕಾಗುತ್ತದೆ.

ಕ್ಯಾಟೊ ಇನ್ಸ್ಟಿಟ್ಯೂಟ್ನ 2022ರ ವರದಿಯ ಪ್ರಕಾರ, ಅಮೆರಿಕದಲ್ಲಿ ಒಟ್ಟು 7.20 ಲಕ್ಷ ಭಾರತೀಯರು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಪ್ರತಿ ದೇಶಕ್ಕೂ ನಿಗದಿತ ಪ್ರಮಾಣದಲ್ಲಿ ಮಾತ್ರ ಗ್ರೀನ್ ಕಾರ್ಡ್ ವಿತರಿಸುತ್ತಿರುವುದರಿಂದ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಮಂದಿ ಭಾರತೀಯರು ಸುಮಾರು 90 ವರ್ಷ ಕಾಯಬೇಕು. ಅಂದರೆ, ಗ್ರೀನ್ ಕಾರ್ಡ್ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಅನೇಕರು ಮರಣ ಹೊಂದಿರುತ್ತಾರೆ. ಪ್ರಸ್ತುತ ಗ್ರೀನ್ ಕಾರ್ಡ್ಗಾಗಿ ಸಲ್ಲಿಸಲಾಗಿರುವ 18 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಈಗ ಏಕೆ ಹೊಸ ನಿಯಮ?

ವಿದ್ಯಾರ್ಥಿಗಳು, ಕಾಯಂ ನೌಕರಿ ಇಲ್ಲದವರು, ಪ್ರವಾಸಿ ವೀಸಾಗಳ ಅಡಿಯಲ್ಲಿ ಅಮೆರಿಕಕ್ಕೆ ಬಂದವರು ನಿರ್ದಿಷ್ಟ ಉದ್ದೇಶದಿಂದ ಅಲ್ಪಕಾಲದ ವಾಸ್ತವ್ಯಕ್ಕಾಗಿ ಬರುತ್ತಾರೆ. ಅವರು ತಮ್ಮ ಕೆಲಸ ಮುಗಿದ ನಂತರ ದೇಶವನ್ನು ತೊರೆಯಬೇಕು. ನಮ್ಮ ವ್ಯವಸ್ಥೆ ಇರುವುದೇ ಹಾಗೆ. ಆದರೆ, ಈ ಪೈಕಿ ಅನೇಕರು ಇದು ಗ್ರೀನ್ ಕಾರ್ಡ್ ಪಡೆಯಲು ಮೊದಲ ಹಂತ ಎಂದು ಭಾವಿಸಿದ್ದಾರೆ. ಇವರ ಪ್ರಕರಣಗಳನ್ನು ನಿಭಾಯಿಸುವುದೇ ವಿದೇಶಾಂಗ ಇಲಾಖೆಗೆ ದೊಡ್ಡ ಕೆಲಸವಾಗಿದೆ. ಈ ಕೆಲಸವನ್ನು ವಿದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳು ನಿರ್ವಹಿಸಿದರೆ, ಯುಎಸ್ಸಿಐಎಸ್ ತನ್ನ ಸಿಬ್ಬಂದಿ ಮತ್ತು ಸಂಪನ್ಮೂಲವನ್ನು ಇತರೆ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಲು ಬಳಸಬಹುದು ಎನ್ನುವುದು ಅಮೆರಿಕ ಸರ್ಕಾರದ ವಾದ.

ಅಮೆರಿಕದಲ್ಲೇ ವಿರೋಧ

ಟ್ರಂಪ್ ಆಡಳಿತದ ಹೊಸ ನೀತಿಗೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗಿದೆ.

ಹೊಸ ನಿಯಮವು ಅನಗತ್ಯ ಗೊಂದಲ ಸೃಷ್ಟಿ ಮಾಡಲಿದೆ. ತಾತ್ಕಾಲಿಕ ವೀಸಾಗಳ ಅಡಿಯಲ್ಲಿ ದೀರ್ಘ ಸಮಯದಿಂದ ಇಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡುತ್ತಿರುವ ವಲಸಿಗರ ಮೇಲೆ ಹೆಚ್ಚುವರಿ ವೆಚ್ಚವನ್ನು ಹೊರಿಸಲಿದೆ. ಕೌಶಲ ಉಳ್ಳ ವಿದೇಶಿ ಉದ್ಯೋಗಿಗಳನ್ನು ಅವಲಂಬಿಸಿರುವ ಉದ್ದಿಮೆಗಳು, ವಿಶೇಷವಾಗಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಮೇಲೆ ಇದು ತೀವ್ರ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯವನ್ನು ವಲಸಿಗರ ಪರವಾಗಿ ಕೆಲಸ ಮಾಡುವ ಕಂಪನಿಗಳು ಮತ್ತು ಉದ್ಯಮಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.

ಇದು ಕಾನೂನುಬದ್ಧ ವಲಸೆ ವ್ಯವಸ್ಥೆಯ ಮೇಲಿನ ವಿಲಕ್ಷಣ ದಾಳಿಯಾಗಿದ್ದು, ತಾತ್ಕಾಲಿಕ ವೀಸಾದಡಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವವರ ಕುಟುಂಬಗಳಿಗೆ ತೊಂದರೆ ಉಂಟು ಮಾಡಲಿದೆ. ಈ ಕ್ರಮದಿಂದಾಗಿ ಹೊರದೇಶಗಳಿಂದ ಬಂದು ಇಲ್ಲಿ ವೈದ್ಯರು, ಶಿಕ್ಷಕರು ಮತ್ತು ವಿಜ್ಞಾನಿಗಳಾಗಿ ಕೆಲಸ ಮಾಡುತ್ತಿರುವವರು ವಾಪಸ್ ಅವರ ದೇಶಕ್ಕೆ ಹೋಗಬೇಕಾಗಿರುವುದರಿಂದ ಅವರ ಸಂಖ್ಯೆ ಕಡಿಮೆಯಾಗಲಿದೆ. ಅಲ್ಲದೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಮೆರಿಕದ ಸ್ಪರ್ಧಾತ್ಮಕತೆ ಕುಂಠಿತವಾಗಲಿದೆ ಎಂದು, ಜಾಗತಿಕ ಆನ್ಲೈನ್ ಕಲಿಕಾ ಪ್ಲಾಟ್ಫಾರ್ಮ್ ಕೋರ್ಸೆರಾದ ಸಂಸ್ಥಾಪಕ, ಸ್ಟಾನ್ಫೋರ್ಡ್ ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅರೆಕಾಲಿಕ ಪ್ರಾಧ್ಯಾಪಕ ಆ್ಯಂಡ್ರ್ಯೂ ಎನ್ಜಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

‘ಕೆಲವು ಲೋಪಗಳನ್ನು ಸರಿಪಡಿಸುತ್ತೇವೆ ಎಂಬ ನೆಪವನ್ನು ಮುಂದಿಟ್ಟುಕೊಂಡು ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಕೆಲಸಗಳಿಗೆ ಅಡ್ಡಿಪಡಿಸಲು ಕಂಡುಕೊಂಡ ಅತ್ಯಂತ ಕೆಟ್ಟ ಮಾರ್ಗ ಇದು’ ಎಂದು ಉದ್ಯಮಿ ನಿಕ್ ಡೇವಿಡೊವ್ ಹೇಳಿದ್ದಾರೆ.

ಆಧಾರ: ಯುಎಸ್ಸಿಐಎಸ್,ಯುಎಸ್ ವೀಸಾ ಸರ್ವಿಸಸ್, ಸ್ಟೇಟ್ಲೈನ್.ಒಆರ್ಜಿ, ವಿದೇಶಾಂಗ ಸಚಿವಾಲಯದ ದತ್ತಾಂಶಗಳು, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.