
ಅರ್ಹ ಮತದಾರರನ್ನಷ್ಟೇ ಮತದಾರರ ಪಟ್ಟಿಯಲ್ಲಿ ಉಳಿಸುವುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಮೂಲ ಉದ್ದೇಶ. ಅರ್ಹರನ್ನಷ್ಟೇ ಗುರುತಿಸುವ ರೀತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ರೂಪಿಸಲಾಗಿದ್ದು, ಅದು ಸಂಪೂರ್ಣವಾಗಿ ನಿಯಮಬದ್ಧವಾಗಿಯೇ ನಡೆಯುತ್ತದೆ. ಪ್ರಕ್ರಿಯೆ ಅಂತಿಮಗೊಂಡಾಗ ಅರ್ಹ ಮತದಾರರಷ್ಟೇ ಉಳಿಯುತ್ತಾರೆ, ಅನರ್ಹರು ಅಲ್ಲ ಎನ್ನುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಸ್ಪಷ್ಟ ನುಡಿ. ಎಸ್‌ಐಆರ್ ಕುರಿತ ವಿವರಗಳನ್ನು ‘ಪ್ರಜಾವಾಣಿ’ ಯೊಂದಿಗೆ ಅವರು ಹಂಚಿಕೊಂಡಿದ್ದಾರೆ.
ಎಸ್‌ಐಆರ್‌ನ ಮೂಲ ಉದ್ದೇಶವೇನು? ಮತದಾರರನ್ನು ಸೇರಿಸುವುದೋ ಅಥವಾ ಕೈಬಿಡುವುದೋ?
ದೇಶದ ಎಲ್ಲ ಅರ್ಹ ಮತದಾರರಿಗೂ ಮತದಾನದ ಹಕ್ಕು ದೊರೆಯಬೇಕು ಎಂಬುದು ಎಸ್‌ಐಆರ್‌ನ ಮೂಲ ಉದ್ಧೇಶ. ದೇಶದಲ್ಲಿ ಈವರೆಗೆ ಒಂಬತ್ತು ಬಾರಿ ಎಸ್‌ಐಆರ್ ನಡೆದಿದೆ. ರಾಜ್ಯದಲ್ಲಿ ಹಿಂದಿನ ಎಸ್‌ಐಆರ್ ನಡೆದಿದ್ದು 2002ರಲ್ಲಿ. ಈಗ ಮತ್ತೆ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಭಾರತೀಯ ಚುನಾವಣಾ ಆಯೋಗವು ರೂಪಿಸಿರುವ ನಿಯಮಗಳಿಗೆ ಬದ್ಧವಾಗಿಯೇ ಈ ಪ್ರಕ್ರಿಯೆ ನಡೆಯುತ್ತದೆ. ಮತದಾರರ ಅರ್ಹತೆಯನ್ನು ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಅವರನ್ನು ಸೇರಿಸುವುದು ಮತ್ತು ಅವರ ವಿವರಗಳು ತಪ್ಪಾಗಿದ್ದರೆ, ಅದನ್ನು ಸರಿಪಡಿಸುವ ಕೆಲಸ ಎಸ್‌ಐಆರ್‌ನಲ್ಲಿ ಆಗಲಿದೆ. ಆಗ ಅರ್ಹ ಮತದಾರರಷ್ಟೇ, ಮತದಾರರ ಪಟ್ಟಿಯಲ್ಲಿ ಉಳಿಯಲಿದ್ದಾರೆ. ಅನರ್ಹರು ಪಟ್ಟಿಯಲ್ಲಿ ಇರುವುದಿಲ್ಲ.
ಮತದಾರರನ್ನು ಅನರ್ಹ ಎಂದು ನಿರ್ಧರಿಸುವುದು ಹೇಗೆ?
ಮತದಾರರು ಗಣತಿ ನಮೂನೆ ಅಥವಾ ದಾಖಲೆ ಪತ್ರಗಳನ್ನು ಸಲ್ಲಿಸದೇ ಇದ್ದಾಗ ಅಥವಾ ಬದಲಿ ಸಂದರ್ಭದಲ್ಲಿ (Otherwise) ಇಆರ್‌ಒ/ಎಇಆರ್‌ಒಗಳು ಅವರ ಅರ್ಹತೆಯನ್ನು ಶಂಕಿಸಿ ನೋಟಿಸ್ ನೀಡಬಹುದು ಎಂದು ಎಸ್‌ಐಆರ್ ಕೈಪಿಡಿಯಲ್ಲಿ ಇದೆ. ಈ ‘ಬದಲಿ ಸಂದರ್ಭ’ (Otherwise) ಎಂಬುದರ ವ್ಯಾಪ್ತಿ ಏನು?
ನೋಟಿಸ್ ನೀಡಿದಾಕ್ಷಣ ಮತ ಪಟ್ಟಿಯಿಂದ ತೆಗೆದುಹಾಕುತ್ತೇವೆ ಎಂಬರ್ಥವಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ, ‘ನಿಮ್ಮನ್ನು ಮತದಾರರ ಪಟ್ಟಿಯಿಂದ ಏಕೆ ತೆಗೆದುಹಾಕಬಾರದು (why should not be deleted)’ ಎಂದು ನೋಟಿಸ್ ನೀಡಬಹುದು ಎಂದು ಎಸ್‌ಐಆರ್ ಕೈಪಿಡಿಯಲ್ಲಿ ಸ್ಪಷ್ಟವಾಗಿ ಇದೆಯಲ್ಲ?
ಶಂಕಿತ–ಅನರ್ಹ ಮತದಾರರ ಪ್ರಕರಣದಲ್ಲಿ ಮತದಾರರ ನೋಂದಣಾಧಿಕಾರಿಯು (ಇಆರ್‌ಒ) ಗುರುತಿನ ದಾಖಲೆ ಪತ್ರ ಅಥವಾ ಮನೆ ಭೇಟಿ ಅಥವಾ ಬದಲಿ ವಿಧಾನದ (Otherwise) ಮೂಲಕ ಅರ್ಹತೆಯನ್ನು ನಿರ್ಧರಿಸಬಹುದು ಎಂದು ಕೈಪಿಡಿಯಲ್ಲಿದೆ. ದಾಖಲೆಯಲ್ಲಿ ವಿವರ ವ್ಯತ್ಯಾಸವಿದ್ದ ಸಂದರ್ಭದಲ್ಲಿ ಮನೆ ಭೇಟಿಯಿಂದ ಅರ್ಹತೆ ಹೇಗೆ ದೃಢಪಡುತ್ತದೆ ಮತ್ತು ಇಲ್ಲಿ ‘ಬದಲಿ ವಿಧಾನ’ (Otherwise) ಎಂಬುದರ ವ್ಯಾಖ್ಯಾನವೇನು?
ಕರಡು ಮತದಾರರ ಪಟ್ಟಿ ಪ್ರಕಟಣೆಯ ನಂತರ ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಬಹುದು ಎಂದು ಹೇಳಿದ್ದೀರಿ. ಒಬ್ಬರ ಬಗ್ಗೆ ಮತ್ತೊಬ್ಬ ಮತದಾರ ಎತ್ತುವ ಆಕ್ಷೇಪವನ್ನು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ? ಅಂತಿಮ ಪಟ್ಟಿಯ ಮೇಲೆ ಇದು ಬೀರುವ ಪರಿಣಾಮ ಎಂಥದ್ದು?
ಮತದಾರರ ಹಕ್ಕನ್ನು ಇಆರ್‌ಒ ಖಚಿತಪಡಿಸಿದಾಗ, ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಎಂದು ನಿಯಮವಿದೆ. ಆದರೆ, ಒಬ್ಬರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಾಗ ಇಂತಹ ಹೊಣೆಗಾರಿಕೆ ಏಕಿಲ್ಲ?
ರಾಜ್ಯದಲ್ಲಿ ಎಸ್‌ಐಆರ್‌ಗೆ ಪೂರ್ವತಯಾರಿಯಾಗಿ ಮ್ಯಾಪಿಂಗ್ ನಡೆಸಿದ್ದೀರಿ. ಮ್ಯಾಪಿಂಗ್ ಆದವರೆಲ್ಲರೂ ಮತದಾರರ ಪಟ್ಟಿಯಲ್ಲಿ ಉಳಿಯುತ್ತಾರೆಯೇ?
ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದವರು, ನೋಟಿಸ್ ಬಂದವರು ಏನು ಮಾಡಬೇಕು?
ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ದಾಖಲೆ ಪತ್ರಗಳಲ್ಲಿ ಕೆಲವರ ಬಳಿ ಯಾವುದೂ ಇಲ್ಲ ಎಂಬ ಮಾಹಿತಿ ಇದೆ. ಬೇರೆ ರಾಜ್ಯಗಳಲ್ಲಿ ಎಸ್‌ಐಆರ್ ಸಂದರ್ಭದಲ್ಲಿ ಇಂತಹ ನಿದರ್ಶನಗಳು ಇದ್ದವು. ದಾಖಲೆ ಇಲ್ಲ ಎಂಬ ಕಾರಣಕ್ಕೆ ಪಟ್ಟಿಯಿಂದ ಕೈಬಿಡುವುದಾದರೆ, ಅರ್ಹರು ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.