‘ಬಂಗಾಳವು ನಮಗೆ (ಬಿಜೆಪಿಗೆ) ರಾಜಕೀಯ ಸಮರವಲ್ಲ. ಅದು ನಾಗರಿಕತೆಯ ಕದನ. ನಾವು ಈ ಹಣಾಹಣಿಯನ್ನು ಅದೇ ದೃಷ್ಟಿಯಲ್ಲಿ ನೋಡುತ್ತೇವೆ. ಭಾರತವನ್ನು ಉಳಿಸಬೇಕಾದರೆ ನಾವು ಬಂಗಾಳವನ್ನು ಗೆಲ್ಲಲೇ ಬೇಕು. ಜನಸಂಖ್ಯೆ ಸ್ವರೂಪಕ್ಕೆ ಸಂಬಂಧಿಸಿದಂತೆ ಅಲ್ಲಿ ಸವಾಲು ಇದ್ದರೂ, ನಾವು ಅದನ್ನು ಗೆಲ್ಲಬೇಕು. ನಿಮ್ಮೆಲ್ಲರ ಆಶೀರ್ವಾದದಿಂದ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇವೆ.’

– ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು 2025ರ ಡಿಸೆಂಬರ್ನಲ್ಲಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಇದು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬಂದ ನಂತರ ಉತ್ತರ ಪ್ರದೇಶ ಸೇರಿದಂತೆ ದೇಶದ ಉತ್ತರ ಭಾಗದ ದೊಡ್ಡ ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಾ ಬಂದ ಬಿಜೆಪಿಗೆ ಪಶ್ಚಿಮ ಬಂಗಾಳ ದೊಡ್ಡ ಸವಾಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಇಡೀ ದೇಶದಲ್ಲಿ ಸಮರ್ಥವಾಗಿ ಎದುರಿಸುತ್ತಿದ್ದ ಪ್ರಮುಖರಲ್ಲಿ ಮಮತಾ ಬ್ಯಾನರ್ಜಿ ಒಬ್ಬರು. ಅಲ್ಲಿ ಟಿಎಂಸಿಯನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬಿಜೆಪಿಯ ಕೇಂದ್ರ ನಾಯಕರ ಪರಮ ಉದ್ದೇಶವಾಗಿತ್ತು. ಸಂತೋಷ್ ಅವರ ಹೇಳಿಕೆ ಅದನ್ನು ಒತ್ತಿ ಹೇಳುತ್ತದೆ.

ಮೊದಲ ಹಂತದ ಮತದಾನಕ್ಕೂ ಮೊದಲು ಏಪ್ರಿಲ್ ಎರಡನೇ ವಾರದಲ್ಲಿ ಮಾಧ್ಯಮಗಳಲ್ಲಿ ಒಂದು ವರದಿ ಪ್ರಕಟವಾಗಿತ್ತು. ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯ ಪ್ರಕಾರ, ಪಕ್ಷವು 100ರಷ್ಟು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು’ ಎಂದು ಹೇಳಲಾಗಿತ್ತು. ಆದರೆ, ಅದೀಗ ಸುಳ್ಳಾಗಿದೆ. ಈ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗಳಿಸಿ (206) ಪ್ರಚಂಡ ಬಹುಮತದೊಂದಿಗೆ ಬಂಗಾಳದ ನೆಲದಲ್ಲಿ ಅಧಿಕಾರಕ್ಕೆ ಏರಲು ಬಿಜೆಪಿ ಸಜ್ಜಾಗಿದೆ. 12 ವರ್ಷಗಳ ಸತತ ಪ್ರಯತ್ನ, ಶ್ರಮದಿಂದ ಅದು ಸಾಧ್ಯವಾಗಿದೆ.

34 ವರ್ಷಗಳಷ್ಟು ಸುದೀರ್ಘ ಅವಧಿಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ್ದ ಸಿಪಿಎಂ, 2006ರ ವಿಧಾನಸಭೆಯ ಚುನಾವಣೆಯವರೆಗೂ ರಾಜ್ಯದ ರಾಜಕೀಯದಲ್ಲಿ ಬಿಗಿಯಾದ ಹಿಡಿತ ಹೊಂದಿತ್ತು. ಆದರೆ, 1998ರ ಜನವರಿಯಲ್ಲಿ ಕಾಂಗ್ರೆಸ್ ತೊರೆದ ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ – ಆಡು ಮಾತಿನಲ್ಲಿ ಟಿಎಂಸಿ) ಪಕ್ಷದ ಮುಂದೆ ಮುಂದಿನ ಐದು ವರ್ಷಗಳಲ್ಲಿ ಸಿಪಿಎಂ ದುರ್ಬಲವಾಯಿತು. ಇದೇ ಸಮಯದಲ್ಲಿ ಕಾಂಗ್ರೆಸ್ ಕೂಡ ಬಂಗಾಳದಲ್ಲಿ ನೆಲೆ ಕಳೆದುಕೊಳ್ಳಲು ಆರಂಭಿಸಿತು. 2011ರಲ್ಲಿ 184 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತದೊಂದಿಗೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಅಧಿಕಾರದ ಗದ್ದುಗೆ ಏರಿತು.

ಸಿಪಿಎಂ ಮತ್ತು ಕಾಂಗ್ರೆಸ್ನ ವೈಫಲ್ಯದ ಲಾಭ ಪಡೆಯಲು ಯತ್ನಿಸಿದ ಬಿಜೆಪಿ 2011ರಿಂದೀಚೆಗೆ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಬೇರುಗಳನ್ನು ಬಿಡಲು ಯತ್ನಿಸಿತು. ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅದಕ್ಕೆ ಸಿಕ್ಕಿದ್ದು ಶೇ 4.09ರಷ್ಟು ಮತಗಳು ಮಾತ್ರ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪಕ್ಷವು ಪಶ್ಚಿಮ ಬಂಗಾಳಕ್ಕೆ ಹೆಚ್ಚು ಒತ್ತು ನೀಡಲಾರಂಭಿಸಿತು. 2016ರಲ್ಲಿ ಅದರ ಮತಗಳಿಕೆ ಪ್ರಮಾಣ ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಾಯಿತು. ಮೂರು ಸ್ಥಾನಗಳನ್ನು ಗೆಲ್ಲುವಲ್ಲೂ ಯಶಸ್ವಿಯಾಯಿತು.

ಹಲವು ಸವಾಲು: ಹಿಂದುತ್ವದ ಆಧಾರದಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದ ಬಿಜೆಪಿಯನ್ನು ಪಶ್ಚಿಮ ಬಂಗಾಳದ ಮತದಾರರು ಬಹುಬೇಗ ಒಪ್ಪಲಿಲ್ಲ. ಬಿಜೆಪಿ ಹೊರಗಿನ ಪಕ್ಷ ಎಂಬ ಭಾವನೆ ಅವರಲ್ಲಿತ್ತು. ಸಾಂಸ್ಕೃತಿಕವಾಗಿಯೂ ಪಕ್ಷಕ್ಕೆ ಅಲ್ಲಿನ ಜನರೊಂದಿಗೆ ಬೆರೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ 27ರಷ್ಟು ಮುಸ್ಲಿಮರು ಇರುವುದು ಕೂಡ ಅದರ ಮುಂದಿದ್ದ ಮತ್ತೊಂದು ಸವಾಲು. ತಳಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಕಟ್ಟುವುದರ ಜೊತೆಗೆ, ಮಮತಾ ಬ್ಯಾನರ್ಜಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ಶಾರದಾ ಚಿಟ್ ಹಗರಣ, ನಾರದ ಕುಟುಕು ಕಾರ್ಯಾಚರಣೆ ಹಗರಣಗಳಲ್ಲಿ ಆರೋಪಿಯಾಗಿದ್ದ ಸುವೇಂದು ಅಧಿಕಾರಿ ಹಾಗೂ ಟಿಎಂಸಿಯ ಇತರ ಹಲವು ಶಾಸಕರು, ಮುಖಂಡರನ್ನು 2020ರ ಡಿಸೆಂಬರ್ನಲ್ಲಿ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯದಲ್ಲಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿತು. ಇದು 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಫಲವನ್ನೂ ನೀಡಿತು. ಶೇ 37.97ರಷ್ಟು ಮತಗಳಿಕೆಯೊಂದಿಗೆ 77 ಸ್ಥಾನಗಳನ್ನು ಪಡೆಯಲು ಬಿಜೆಪಿ ಶಕ್ತವಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತ ಪಡೆಯದೇ ಹಿನ್ನಡೆ ಅನುಭವಿಸಿದ್ದ ಬಿಜೆಪಿ, ನಂತರ ತನ್ನ ಚುನಾವಣಾ ಕಾರ್ಯತಂತ್ರವನ್ನು ಬದಲಿಸಿತು. ಬಿಹಾರ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಅದು ಯಶಸ್ವಿಯಾಗಿತ್ತು. ಈಗ ಚುನಾವಣೆ ನಡೆದಿರುವ ಐದು ವಿಧಾನಸಭಾಗಳ ಪೈಕಿ ಅದು ‘ಕಮಲ’ ಪಾಳಯ ಹೆಚ್ಚು ಗಮನ ಹರಿಸಿದ್ದು ಪಶ್ಚಿಮ ಬಂಗಾಳಕ್ಕೆ. ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷ ಕಟ್ಟುವುದರ ಜೊತೆಗೆ ಚುನಾವಣೆಗೂ ಕೆಲವು ತಿಂಗಳುಗಳ ಮೊದಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಸಿದ್ಧತೆಗಳ ಮೇಲ್ವಿಚಾರಣೆ ನೋಡಿಕೊಂಡಿದ್ದರು. ಮತದಾನಕ್ಕೂ ಮುನ್ನ ಅಮಿತ್ ಶಾ ಅವರು 15 ದಿನ ಪಶ್ಚಿಮ ಬಂಗಾಳದಲ್ಲೇ ಉಳಿದುಕೊಂಡು ಚುನಾವಣಾ ಸಿದ್ಧತೆಗಳಲ್ಲಿ ಭಾಗಿಯಾಗಿದ್ದರು.

ಎಸ್ಐಆರ್ ಪ್ರಭಾವ ಎಷ್ಟು?

ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ತೀವ್ರ ವಿವಾದ ಹುಟ್ಟುಹಾಕಿತ್ತು.

ಚುನಾವಣೆಯಲ್ಲಿ ಟಿಎಂಸಿಯನ್ನು ಸೋಲಿಸುವುದಕ್ಕಾಗಿ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ಎಸ್ಐಆರ್ ನಡೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದರು.

ಚುನಾವಣಾ ಆಯೋಗ ಮಾತ್ರವಲ್ಲದೇ, ಬಂಗಾಳದಲ್ಲಿ ಗೆಲ್ಲಲು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದೂ ಆಪಾದಿಸಿದ್ದರು.

ಎಸ್ಐಆರ್ ಪ್ರಕ್ರಿಯೆ ವಿರುದ್ಧ ಮಮತಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಎಸ್ಐಆರ್ ಮೂಲಕ ಚುನಾವಣಾ ಆಯೋಗವು 90.83 ಲಕ್ಷದಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿತ್ತು. ಈ ಪೈಕಿ ಸೂಕ್ತ ದಾಖಲೆಗಳು ಇಲ್ಲದ ಕಾರಣಕ್ಕೆ 27.06 ಲಕ್ಷ ಮತದಾರರ ಬಗ್ಗೆ ನಿರ್ಧಾರ ಕೈಗೊಳ್ಳದೇ, ಪರಿಶೀಲನೆಯ ಹಂತದಲ್ಲಿರಿಸಿತ್ತು. ಇವರಿಗೆ ಮತದಾನದ ಹಕ್ಕನ್ನೂ ನೀಡಲಾಗಿರಲಿಲ್ಲ. ಹೆಸರು ಕೈಬಿಟ್ಟವರಲ್ಲಿ ಮುಸ್ಲಿಮರು ಮತ್ತು ಮತುವಾ ಸಮುದಾಯದವರಿದ್ದರು.

ಈ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗಳನ್ನು ರಚಿಸಿದ್ದರೂ, ಪ್ರಕರಣಗಳು ವಿಲೇವಾರಿಯಾಗಿರಲಿಲ್ಲ.

ಹೀಗಾಗಿ, ಇಷ್ಟು ಮತದಾರರು ಪಟ್ಟಿಯಿಂದ ಹೊರಗುಳಿದಿರುವುದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಕಡಿಮೆ ಮತಗಳ ಅಂತರದ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಇದು ಗೆಲುವಿನ ಸಾಧ್ಯತೆಯನ್ನು ಬುಡಮೇಲು ಮಾಡಬಹುದು. ಇದರಿಂದ ಟಿಎಂಸಿಗೆ ಹೆಚ್ಚು ತೊಂದರೆಯಾಗಬಹುದು ಎಂದೂ ಹೇಳಲಾಗಿತ್ತು.

ಆದರೆ, ಬಿಜೆಪಿ ಗೆದ್ದಿರುವ ಒಟ್ಟಾರೆ ಕ್ಷೇತ್ರಗಳು ಮತ್ತು ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚು ಹೆಸರುಗಳನ್ನು ಕೈಬಿಟ್ಟಿರುವ ಕ್ಷೇತ್ರಗಳ ಫಲಿತಾಂಶವನ್ನು ನೋಡಿದರೆ ಕಡಿಮೆ ಮತಗಳ ಅಂತರದಲ್ಲಿ ಫಲಿತಾಂಶ ನಿರ್ಧಾರವಾದ ಕ್ಷೇತ್ರಗಳಲ್ಲಿ ಇದು ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉದಾಹರಣೆಗೆ, ಎಸ್ಐಆರ್ನಿಂದ ಹೆಚ್ಚು ಮತದಾರರನ್ನು ಕಳೆದುಕೊಂಡ ಜಿಲ್ಲೆಯಲ್ಲಿ ಮುರ್ಷಿದಾಬಾದ್ ಪ್ರಮುಖವಾದುದು. ಅಲ್ಲಿ ನಾಲ್ಕು ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಲ್ಲಿ 22 ಕ್ಷೇತ್ರಗಳಿದ್ದು, ಬಿಜೆಪಿ ಕಳೆದ ಬಾರಿ ಇಲ್ಲಿ ಎರಡು ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಅದು ಒಂಬತ್ತು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಳೆದಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಟಿಎಂಸಿಗೆ ಈ ಸಲ ಸಿಕ್ಕಿದ್ದು ಒಂಬತ್ತು ಸ್ಥಾನಗಳು ಮಾತ್ರ.

ಫಲಿತಾಂಶದ ಬಳಿಕ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ಬಿಜೆಪಿಯು ಚುನಾವಣಾ ಆಯೋಗದ ನೆರವಿನಿಂದ 100 ಕ್ಷೇತ್ರಗಳನ್ನು ಲೂಟಿ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮುಸ್ಲಿಂ ಮತ ವಿಭಜನೆ: ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ಈ ಬಾರಿಯೂ ಟಿಎಂಸಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಿಜೆಪಿಯು ಕಳೆದ ಸಲಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಮುಸ್ಲಿಂ ಮತದಾರರು ಶೇ 50ಕ್ಕಿಂತಲೂ ಹೆಚ್ಚಿರುವ 32 ಸ್ಥಾನಗಳಿವೆ. ಇಲ್ಲಿ ಈ ಬಾರಿ ಮತದಾರರ ಪ್ರಮಾಣವೂ ಹೆಚ್ಚಾಗಿದೆ. 2021ರಲ್ಲಿ ಎಲ್ಲ ಸ್ಥಾನಗಳನ್ನು ಟಿಎಂಸಿ ಗೆದ್ದಿದ್ದರೆ, ಈ ಬಾರಿ 23 ಸ್ಥಾನಗಳಷ್ಟೇ ಅದಕ್ಕೆ ಸಿಕ್ಕಿದೆ. ಕಾಂಗ್ರೆಸ್, ಜೆಯುಜೆಪಿ, ಸಿಪಿಎಂಗಳು ಇಲ್ಲಿ ಗೆಲವು ಸಾಧಿಸಿವೆ. ಮುಸ್ಲಿಂ ಮತಗಳು ವಿಭಜನೆಯಾಗಿರುವುದನ್ನು ಇದು ತೋರಿಸುತ್ತದೆ.

ಮತಗಳಿಕೆ ಅಂತರ ಕಡಿಮೆ, ಆದರೆ...

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಎಂಸಿಗಳು ಗಳಿಸಿರುವ ಮತಗಳ ಪ್ರಮಾಣದಲ್ಲಿ ಶೇ 5ರಷ್ಟು ವ್ಯತ್ಯಾಸವಿದೆಯಷ್ಟೆ. ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಯು ಟಿಎಂಸಿಗಿಂತ 32 ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆದಿದೆ. ಆದರೆ, ಗೆದ್ದಿರುವ ಕ್ಷೇತ್ರಗಳನ್ನು ಲೆಕ್ಕಹಾಕಿದರೆ ಈ ಅಂತರ (127) ಗಣನೀಯವಾಗಿದೆ.

ಟಿಎಂಸಿ ಸೋತಿದ್ದೇಕೆ?

ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಅತಿಯಾದ ಆತ್ಮವಿಶ್ವಾಸ

ಮಹಿಳೆಯರು (ಕನ್ಯಶ್ರೀ, ಲಕ್ಷ್ಮಿಭಂಡಾರದಂತಹ ಯೋಜನೆಗಳು) ಮತ್ತು ಮುಸ್ಲಿಮರ ಕಲ್ಯಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದ ಕಾರಣದಿಂದ, ಈ ಎರಡು ಸಮುದಾಯಗಳು ಪಕ್ಷದ ಕೈ ಬಿಡುವುದಿಲ್ಲ ಎಂದು ನಂಬಿದ್ದು

ಫಲ ನೀಡದ ಬಂಗಾಳಿ ಅಸ್ಮಿತೆಯ ನಿರೂಪಣೆ

ಆರ್.ಜಿ.ಕರ್ ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು

ಜನ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ, ಉದ್ಯಮಕ್ಕೆ ಉತ್ತೇಜನ, ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳದೇ ಇದ್ದುದು

ಚುನಾವಣಾ ಆಯೋಗ ನಡೆಸಿದ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆಯು ಮುಸ್ಲಿಂ ಬಾಹುಳ್ಯದ ಹಲವು ಕ್ಷೇತ್ರಗಳಲ್ಲಿ ಬೀರಿದ ಪರಿಣಾಮ

ಮುಸ್ಲಿಂ ಮತಗಳು ವಿಭಜನೆಯಾಗಿದ್ದು. ಕಾಂಗ್ರೆಸ್, ಎಜೆಯುಪಿ, ಸಿಪಿಎಂ, ಎಐಎಸ್ಎಫ್ ಈ ಬಾರಿಗೆ ಕ್ರಮವಾಗಿ 2,2, 1 ಮತ್ತು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಇವರು ಗೆದ್ದ ಕ್ಷೇತ್ರಗಳೆಲ್ಲಾ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚು ಇರುವವು

ಬಿಜೆಪಿಯ ಕಾರ್ಯತಂತ್ರ ಮತ್ತು ಅದು ಹುಟ್ಟುಹಾಕಿದ್ದ ಸಂಕಥನಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ಎಡವಿದ್ದು

ಎಸ್ಐಆರ್, ಪಕ್ಷವನ್ನು ಗುರಿಯಾಗಿಸಿಕೊಂಡು ಕೇಂದ್ರದ ತನಿಖಾ ಸಂಸ್ಥೆಗಳು ಕೈಗೊಂಡ ಕ್ರಮಗಳ ವಿರುದ್ಧ ನಡೆಸಿದ ಹೋರಾಟ ಫಲ ನೀಡದೇ ಇದ್ದುದು

ಬಿಜೆಪಿ ಗೆಲುವಿಗೆ ಏನು ಕಾರಣ?

15 ವರ್ಷಗಳಿಂದ ಆಡಳಿತದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆ

ಹಿಂದುತ್ವ ಪರವಾದ ನೀತಿ. 2021ರ ಚುನಾವಣಾ ಸಂದರ್ಭದಲ್ಲಿ ನಡೆದ ಹಿಂಸಾಚಾರ, ಬಾಂಗ್ಲಾದೇಶದ ಒಳನುಸುಳುಕೋರು ಹಿಂದೂಗಳಿಗಷ್ಟೇ ಅಲ್ಲ, ಇಡೀ ದೇಶದ ಭದ್ರತೆಗೆ ಸವಾಲು ಎಂದು ಬಿಂಬಿಸಿದ್ದು

ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ನಿರತ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ವೈದ್ಯೆಯ ತಾಯಿಗೆ ಟಿಕೆಟ್ ನೀಡಲಾಗಿತ್ತು. ಆಕೆ ಗೆದ್ದಿದ್ದಾರೆ), ಸಂದೇಶ್ಕಾಲಿ ಪ್ರಕರಣ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ದೌರ್ಜನ್ಯಗಳನ್ನು ಮುಂದಿಟ್ಟುಕೊಂಡು ಟಿಎಂಸಿ ಆಡಳಿತದಲ್ಲಿ ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಪ್ರತಿಪಾದಿಸಿದ್ದು

ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು

ಬಡತನ, ನಿರುದ್ಯೋಗ ಸಮಸ್ಯೆ, ಟಿಎಂಸಿಯ ಉದ್ಯಮ ವಿರೋಧಿ ನೀತಿ

ಮಹಿಳೆಯರಿಗೆ ನಗದು ಸೇರಿದಂತೆ ಉಚಿತ ಕೊಡುಗೆಗಳ ಘೋಷಣೆ

ಬಿಜೆಪಿಯಿಂದ ಮಾತ್ರ ಬಂಗಾಳದ ಅಭಿವೃದ್ಧಿ ಸಾಧ್ಯ ಎಂಬ ಪ್ರತಿಪಾದನೆ

ಡಿಜಿಟಲ್ ಮಾಧ್ಯಮದ ಪರಿಣಾಮಕಾರಿ ಬಳಕೆ

ಬಿಜೆಪಿ ಕೈ ಹಿಡಿದವರು...

ಕಳೆದ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಮಾತ್ರ ಸಫಲವಾಗಿತ್ತು. ಆದರೆ, ಈ ಬಾರಿ ಉತ್ತರದ ಬಹುಪಾಲು ಜಿಲ್ಲೆಗಳು, ನೈರುತ್ಯಭಾಗ, ಗ್ರೇಟರ್ ಕೋಲ್ಕತ್ತ ಪ್ರದೇಶ, ಮಧ್ಯ ಭಾಗ ಸೇರಿದಂತೆ ಬಹುಪಾಲು ಕಡೆಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿ ಹಿಂದೂ ಮತಗಳು ಧ್ರುವೀಕರಣಗೊಂಡಿದ್ದು ಬಿಜೆಪಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟಿಎಂಸಿಯ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ಜಿಲ್ಲೆಗಳಲ್ಲೂ ಹಿಂದೂಗಳು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಪರಿಶಿಷ್ಟ ಜಾತಿ–ಪರಿಶಿಷ್ಟ ವರ್ಗದವರು ಕೂಡ ಬಿಜೆಪಿ ಪರವಾದ ನಿಲುವನ್ನು ತೋರಿದ್ದಾರೆ ಎಂದು ಹಲವು ಮಾಧ್ಯಮಗಳು ವಿಶ್ಲೇಷಿಸಿವೆ.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸುವೇಂದು ಅಧಿಕಾರಿ, ‘ಹಿಂದೂಗಳು ಬಿಜೆಪಿಗೆ ಮತಹಾಕಿದ್ದಾರೆ. ಮುಸ್ಲಿಮರು ಟಿಎಂಸಿಯನ್ನು ಬೆಂಬಲಿಸಿದ್ದಾರೆ’ ಎಂದು ಹೇಳಿದ್ದರು.

ಎಸ್ಐಆರ್ ಪ್ರಭಾವ ಎಷ್ಟು?

ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು.

ಎಸ್ಐಆರ್ ಪ್ರಕ್ರಿಯೆ ವಿರುದ್ಧ ಮಮತಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಎಸ್ಐಆರ್ ಮೂಲಕ ಚುನಾವಣಾ ಆಯೋಗವು 90.83 ಲಕ್ಷದಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿತ್ತು. ಈ ಪೈಕಿ ಸೂಕ್ತ ದಾಖಲೆಗಳು ಇಲ್ಲದ ಕಾರಣಕ್ಕೆ 27.06 ಲಕ್ಷ ಮತದಾರರ ಬಗ್ಗೆ ನಿರ್ಧಾರ ಕೈಗೊಳ್ಳದೇ, ಪರಿಶೀಲನೆಯ ಹಂತದಲ್ಲಿರಿಸಿತ್ತು. ಇವರಿಗೆ ಮತದಾನದ ಹಕ್ಕನ್ನೂ ನೀಡಲಾಗಿರಲಿಲ್ಲ. ಹೆಸರು ಕೈಬಿಟ್ಟವರಲ್ಲಿ ಮುಸ್ಲಿಮರು ಮತ್ತು ಮತುವಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈ ಪ್ರಕರಣಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮಂಡಳಿಗಳನ್ನು ರಚಿಸಿದ್ದರೂ, ಪ್ರಕರಣಗಳು ವಿಲೇವಾರಿಯಾಗಿರಲಿಲ್ಲ. ಹೀಗಾಗಿ, ಇಷ್ಟು ಮತದಾರರು ಪಟ್ಟಿಯಿಂದ ಹೊರಗುಳಿದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಇದು ಗೆಲುವಿನ ಸಾಧ್ಯತೆಯನ್ನು ಬುಡಮೇಲು ಮಾಡಬಹುದು. ಇದರಿಂದ ಟಿಎಂಸಿಗೆ ತೊಂದರೆಯಾಗಬಹುದು ಎಂದೂ ಹೇಳಲಾಗಿತ್ತು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚು ಹೆಸರುಗಳನ್ನು ಕೈಬಿಟ್ಟಿರುವ ಕ್ಷೇತ್ರಗಳ ಫಲಿತಾಂಶವನ್ನು ನೋಡಿದರೆ, ಕಡಿಮೆ ಮತಗಳ ಅಂತರದಲ್ಲಿ ಫಲಿತಾಂಶ ನಿರ್ಧಾರವಾದ ಕ್ಷೇತ್ರಗಳಲ್ಲಿ ಇದು ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉದಾಹರಣೆಗೆ, ಎಸ್ಐಆರ್ನಿಂದ ಹೆಚ್ಚು ಮತದಾರರನ್ನು ಕಳೆದುಕೊಂಡ ಜಿಲ್ಲೆಯಲ್ಲಿ ಮುರ್ಷಿದಾಬಾದ್ ಪ್ರಮುಖವಾದುದು. ಅಲ್ಲಿ ನಾಲ್ಕು ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಲ್ಲಿ 22 ಕ್ಷೇತ್ರಗಳಿದ್ದು, ಬಿಜೆಪಿ ಕಳೆದ ಬಾರಿ ಇಲ್ಲಿ ಎರಡು ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಅದು ಒಂಬತ್ತು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಳೆದಬಾರಿ 20 ಕ್ಷೇತ್ರ ಗೆದ್ದಿದ್ದ ಟಿಎಂಸಿಗೆ ಈ ಸಲ ಸಿಕ್ಕಿದ್ದು 9ಸ್ಥಾನಗಳು ಮಾತ್ರ.

ಮುಸ್ಲಿಂ ಮತ ವಿಭಜನೆ: ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ಈ ಬಾರಿಯೂ ಟಿಎಂಸಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಿಜೆಪಿಯು ಕಳೆದ ಸಲಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಮುಸ್ಲಿಂ ಮತದಾರರು ಶೇ 50ಕ್ಕಿಂತಲೂ ಹೆಚ್ಚಿರುವ 32 ಸ್ಥಾನಗಳಿವೆ. ಇಲ್ಲಿ ಈ ಬಾರಿ ಮತದಾನದ ಪ್ರಮಾಣವೂ ಹೆಚ್ಚಾಗಿದೆ.

2021ರಲ್ಲಿ ಎಲ್ಲ ಸ್ಥಾನಗಳನ್ನು ಟಿಎಂಸಿ ಗೆದ್ದಿದ್ದರೆ, ಈ ಬಾರಿ 23 ಸ್ಥಾನಗಳಷ್ಟೇ ಅದಕ್ಕೆ ಸಿಕ್ಕಿದೆ. ಕಾಂಗ್ರೆಸ್, ಜೆಯುಜೆಪಿ, ಸಿಪಿಎಂಗಳು ಇಲ್ಲಿ ಗೆಲವು ಸಾಧಿಸಿವೆ. ಮುಸ್ಲಿಂ ಮತಗಳು ವಿಭಜನೆಯಾಗಿರುವುದನ್ನು ಇದು ತೋರಿಸುತ್ತದೆ.

ಆಧಾರ: ಪಿಟಿಐ, ಬಿಬಿಸಿ, ಚುನಾವಣಾ ಆಯೋಗದ ದತ್ತಾಂಶಗಳು, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.